ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 33 - ಅ 11 ಪ್ರಾಣವಹ ಸ್ರೋತಸ್ಸು ಗಾಯಪಟ್ಟಾಗ ಉಂಟಾಗುವ ಮರಣ ಮತ್ತು ಲಕ್ಷಣಗಳು ಕಾಣುವವು. ರಕ್ತವಾಹಿ ಸ್ರೋತಸ್ಸುಗಳು ಎರಡು; ಅವುಗಳ ಮೂಲ-ಪಿತ್ತಕೋಶ, ಪ್ಲೀಹ ಮತ್ತು ರಕ್ತವಾಹಿಯಾದ ಧಮನಿಗಳು; ಅಲ್ಲಿ ಗಾಯವಾದರೆ, ಅಂಗವು ಕಪಿಶ (ಅರಸಿನ ಕಪ್ಪು) ವರ್ಣವಾಗುವದು, ಜ್ವರ, ಉರಿ, ಬಿಳುಪು ವರ್ಣ, ರಕ್ತ ಅತಿಯಾಗಿ ಹೋಗುವದು, ಕಣ್ಣು ಕೆಂಪಾಗುವದು, ಈ ಲಕ್ಷಣಗಳುಂಟಾಗುವವು. ಮಾಂಸವಾಹಿ ಸ್ರೋತಸ್ಸುಗಳು ಎರಡು; ಅವುಗಳ ಮೂಲ-ನರ, ಚರ್ಮ, ಮತ್ತು ರಕ್ತವಾಹಿ ಧಮನಿಗಳು, ಅಲ್ಲಿ ಗಾಯ ವಾದರೆ, ಮೈ ಬಾತುಹೋಗುವಿಕೆ, ಮಾಂಸ ಒಣಗುವಿಕೆ, ಸಿರೆಗಳಲ್ಲಿ ಗಂಟುಗಳು, ಮರಣ, ಈ ಲಕ್ಷಣಗಳುಂಟಾಗುವವು. ಮೇದೋವಾಹಿ ಸ್ರೋತಸ್ಸುಗಳು ಎರಡು, ಅವುಗಳ ಮೂಲ ಸೊಂಟ ಮತ್ತು ವೃಕ್ಕುಗಳು; ಅಲ್ಲಿ ಗಾಯವಾದರೆ, ಬೆವರುವದು, ಅಂಗಗಳಲ್ಲಿ ಜಿಡ್ಡು, ತಾಲು ಒಣಗುವದು, ಶರೀರ ದೊಡ್ಡದಾಗಿ ಊದಿಕೊಳ್ಳುವದು, ಮತ್ತು ಬಾಯಾರಿಕೆ, ಈ ಲಕ್ಷಣಗಳು ಕಾಣುವವು. ಮೂತ್ರವಾಹಿ ಸ್ರೋತಸ್ಸುಗಳು ಎರಡು, ಅವುಗಳ ಮೂಲ-ಮೂತ್ರಾಶಯ ಮತ್ತು ಶಿಶ್ನ; ಅಲ್ಲಿ ಗಾಯವಾದಲ್ಲಿ, ಮೂತ್ರಾಶಯ ಒಳಗೆ ಎಳೆದುಕೊಳ್ಳುವದು, ಮೂತ್ರಸಿಕ್ಕು, ಶಿಶ್ನ ಸ್ತಬ್ಧವಾಗುವುದು, ಈ ಲಕ್ಷಣಗಳು ಉಂಟಾಗುವವು. ಪುರೀಷವಾಹಿ ಸ್ರೋತಸ್ಸುಗಳು ಎರಡು, ಅವುಗಳಿಗೆ ಮೂಲ-ಪಕ್ವಾಶಯ ಮತ್ತು ಗುದ; ಅಲ್ಲಿ ಗಾಯವಾದರೆ ಮಲಬದ್ಧತೆ, ದುರ್ಗಂಧತೆ, ಮತ್ತು ಕರುಳು ಗಂಟುಬೀಳುವದು, ಈ ಲಕ್ಷಣಗಳು ತೋರುವವು. ಶುಕ್ರವಾಹಿ ಸ್ರೋತಸ್ಸುಗಳು ಎರಡು; ಅವುಗಳ ಮೂಲ-ಮೊಲೆಗಳು ಮತ್ತು ಅಂಡಗಳು, ಅಲ್ಲಿ ಗಾಯವಾದರೆ, ನಪುಂಸಕತ್ವ, ವಿಳಂಬವಾಗಿ ಶುಕ್ರಪ್ರವೃತ್ತಿ ಮತ್ತು ಶುಕ್ರವು ರಕ್ತವರ್ಣವಾಗುವದು, ಈ ಲಕ್ಷಣಗಳು ಕಾಣುವವು. ರಜೋವಹ ಸ್ರೋತಸ್ಸುಗಳು ಎರಡು, ಅವುಗಳಿಗೆ ಮೂಲ-ಗರ್ಭಾಶಯ, ಮತ್ತು ರಜೋವಹ ಧಮನಿಗಳು; ಅಲ್ಲಿ ಗಾಯವಾದರೆ, ಬಂಜೆತನ, ಮೈಧುನ ಸಹಿಸಕೂಡದಿರುವದು, ಮತ್ತು ರಜಸ್ಸು ಇಲ್ಲದೆ ಹೋಗುವದು, ಈ ಲಕ್ಷಣಗಳು ಕಾಣುವವು. ಷರಾ ಹಿಂದಿನ 68 ನೇ ಸಂ ನೋಡು. 77.ವಾತವರ್ಚೋನಿರಸನಂ ಸ್ದೂಲಾಂತ್ರಪ್ರತಿಬದ್ಧಂ ಗುದಂ ನಾಮ ಮರ್ಮ | ತತ್ರ ಸದ್ಯೋ ಮರಣಂ | ಅಲ್ಪ ಮಾಂಸ ಶೋಣಿತೋSಭ್ಯಂತ ರತಃ ಕವ್ಯಾಂ ಮೂತ್ರಾಶಯೋ ವಸ್ತಿರ್ನಾಮ ತತ್ರಾಪಿ ಸದ್ಯೋ ಮರಣ ಮಶ್ಮರೀವ್ರಣಾದೃತೇ ತತ್ರಾಪ್ಯುಭಯತೋ ಭಿನ್ನೇನ ಜೀವತ್ಯೇಕತೋ ಭಿನ್ನೇ ಮೂತ್ರಸ್ರಾವೀ ವ್ರಣೋ ಭವತಿ | ಸ ತು ಯತ್ನೇನೋಪಕ್ರಾಂತೋ ರೋಹತಿ | (ಸು. 341.) ದೊಡ್ಡ ಕರುಳಿಗೆ ಬಿಗಿಯಲ್ಪಟ್ಟಿದ್ದು, ವಾಯುವನ್ನೂ ಮಲವನ್ನೂ ಹೊರಪಡಿಸತಕ್ಕ ಮರ್ಮಸ್ಧಾನವು ಗುದ ಎನ್ನಿಸಿಕೊಳ್ಳುತ್ತದೆ, ಅಲ್ಲಿ ಗಾಯವಾದರೆ ಕೂಡಲೇ ಮರಣ. ಸೊಂಟದ ಒಳಭಾಗದಲ್ಲಿರುವ ಅಲ್ಪ ಮಾಂಸ ಮತ್ತು ರಕ್ತ ಕೂಡಿರುವ ಮೂತ್ರಾಶಯವು 'ವಸ್ತಿ' ಎನ್ನಿಸಿಕೊಳ್ಳುತ್ತದೆ; ಅಲ್ಲಿ ಕೂಡ ಗಾಯವಾದರೆ ಕೂಡಲೇ ಮರಣವುಂಟಾಗುವದು. ಅಶ್ಮರಿ ಬಿಟ್ಟು ಇತರ ಸಂಗತಿಯಲ್ಲಿ ಎರಡು ಪಾರ್ಶ್ವವೂ ಭಿನ್ನವಾದರೆ, ಬದುಕುವದಿಲ್ಲ,