ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ 11 - 34 - ಒಂದೇ ಕಡೆಯಲ್ಲಿ ಭಿನ್ನವಾದರೆ ಮೂತ್ರ ಸುರಿಯುತ್ತಿರುವ ವ್ರಣವುಂಟಾಗುವದು. ಆ ವ್ರಣವು ಪ್ರಯತ್ನದಿಂದ ಚಿಕಿತ್ಸೆ ಮಾಡಿದರೆ ವಾಸಿಯಾಗುವದು. ಷರಾ ಗುದವು 3 ಸುಳಿಗಳುಳ್ಳದ್ದೆಂತಲೂ ಅವುಗಳೊಳಗೆ 1ನೇ ಪ್ರವಾಹಿನೀ ಎಂಬದು 1.5 ಅಂಗುಲ ಉದ್ದ, 2ನೇ ಉತ್ಸರ್ಜನೀ ಎಂಬದು 1.5 ಅಂಗುಲ ಉದ್ದ, 3 ನೇ ಸಂವರಣೀ ಎಂಬದು 1 ಅಂಗುಲ ಉದ್ದ ಮೂರೂ ಅಡ್ಡ 1 ಅಂಗುಲ ಅಗಲ ಎಂತಲೂ, 3ನೇ ಸುಳಿಯು ಗುದೌಷ್ರ (ಗುದದ ತುಟಿ) ದಿಂದ 1 ಅಂಗುಲ ಮೇಲೆ ಅದೆಯೆಂತಲೂ, ಆ ಗುದೌಷ್ರವು ರೋಮದ ಸುತ್ತು ಹಿಡಿದು ಅರ್ಧ ಅಂಗುಲ ಇರುತ್ತದೆಂತಲೂ ಬೇರೆ ಭಾಗಗಳಲ್ಲಿ ವರ್ಣಿಸಲ್ಪಟ್ಟಿದೆ (ಸಂ 251) 78. ಮೂಲಾದ್ಖಾದಂತರಂ ದೇಹೇ ಪ್ರಸೃತಂತ್ವಭಿವಾಹಿ ಯತ್ | ಸ್ರೋತಸ್ತದಿತಿ ವಿಜ್ಞೇಯಂ ಸಿರಾಧಮನಿವರ್ಜಿತಂ || (ಸು. 358.) ಧಮನೀ ಮತ್ತು ಸಿರೆಯಲ್ಲದ ಹೃದಯಾದಿ ಛಿದ್ರದಿಂದ ಹೊರಟು ದೇಹದಲ್ಲಿ ಪಸರಿಸಿ (ಆಹಾರಾದಿಗಳನ್ನು) ಮುಂದಕ್ಕೆ ಸಾಗಿಸುವಂಧಾ ಎಡೆ ಯಾವದೋ ಅದನ್ನು ಸ್ರೋತಸ್ಸು ಎಂತ ತಿಳಿಯತಕ್ಕದ್ದು. ಷರಾ ಹಿಂದಿನ 68 ನೇ ಮತ್ತು 69 ನೇ ಸಂ ನೋಡು 79. ಸಪ್ತ ಸಿರಾ ಶತಾನಿ ಭವಂತಿ | ಯಾಭಿರಿದಂ ಶರೀರಮಾರಾಮ ಇವ ಜಲಹಾರಿಣೀಭಿಃ ಕೇದಾರ ಇವ ಚ ಕುಶ್ಯಾಭಿರುಪಸ್ನಿಹ್ಯತೇsನು ಗೃಹ್ಯತೇ ಚಾಕುಂಚನಪ್ರಸಾರಣಾದಿಭಿರ್ವಿಶೇಪೈಃ | ದ್ರುಮಪತ್ರ ಸೇವನೀನಾಮಿವ ಚ ತಾಸಾಂ ಪ್ರತಾನಾಸ್ತಾಸಾಂ ನಾಭಿರ್ಮೂಲಂ ತತಶ್ವ ಪ್ರಸರಂತ್ಯೊರ್ಧ್ವಮಧಸ್ತಿರ್ಯಕ್ಚ | (ಸು, 345-46.) ಸಿರಾ ಎಂಬ ನಾಳಗಳು ಒಟ್ಟು 700. ತೋಟವನ್ನು ದೊಡ್ಡ ನೀರು ಹೋಗುವ ದಂಬೆಗಳು ಮತ್ತು ಗದ್ದೆಯನ್ನು ಚಿಕ್ಕ ತೋಡುಗಳು ಹ್ಯಾಗೋ ಹಾಗೆ ಈ ಶರೀರವನ್ನು ಸಿರಾನಾಳಗಳು, ಚಿರುಟುವ ಅಧವಾ ಮುದುರುವ ಮತ್ತು ವಿಸ್ತರಿಸುವ ವಿಶೇಷ ಲಕ್ಷಣಗಳಿಂದ ಕೂಡಿ ಕೊಂಡು, ಪಸೆ ಮಾಡಿ ಅನುಗ್ರಹಿಸುತ್ತವೆ. ಮರದ ಎಲೆಗಳಲ್ಲಿ ನರಗಳ ಹೊಲಿಗೆಗಳು ಹ್ಯಾಗೋ, ಹಾಗೆ ಸಿರಾನಾಳಗಳು ಹಬ್ಬಿರುತ್ತವೆ. ಅವುಗಳಿಗೆ ಮೂಲ ನಾಭಿ; ಅಲ್ಲಿಂದ ಮೇಲಕ್ಕೂ, ಕೆಳಕ್ಕೂ, ಅಡ್ಡವಾಗಿಯೂ ಪಸರಿಸುತ್ತವೆ. 80. ಸಿರಾಭಿರಾವೃತಾ ನಾಭಿಶ್ವಕ್ರನಾಭಿರಿವಾರಕೈಃ ! (ಸು. 346.) ಚಕ್ರದ ಅಚ್ಚುಮರನ್ನು (ಅರಕಗಳು) ಗೂಟಗಳು ಹ್ಯಾಗೋ, ಹಾಗೆ ಹೊಕ್ಕಳನ್ನು ಸಿರೆಗಳು ಸುತ್ತಿರುತ್ತವೆ. 81. ತಾಸಾಂ ಮೂಲಸಿರಾಶ್ವತಾರಿಂಶತ್ ತಾಸಾಂ ವಾತವಾಹಿನ್ಯೋ ದಶ ಪಿತ್ತವಾಹಿನ್ಯೋ ದಶ ಕಫವಾಹಿನ್ಯೋ ದಶ ದಶ ರಕ್ತವಾಹಿನ್ಯಃ | ತಾಸಾಂ ತು ವಾತವಾಹಿನೀನಾಂ ವಾತಸ್ದಾನಗತಾನಾಂ ಪಂಚಸಪ್ತತಿ ಶತಂ ಭವತಿ ತಾವತ್ಯ ಏವ ಪಿತ್ತವಾಹಿನ್ಯಃ ಪಿತ್ತಸ್ಧಾನೇ ಕಫವಾಹಿ ನ್ಯಶ್ಚ ಕಫಸ್ಧಾನೇ ರಕ್ತವಾಹಿನ್ಯಶ್ಚ ಯಕೃತ್ ಪ್ಲೀಹ್ನೋರೇವಮೇತಾನಿ ಸಪ್ತಸಿರಾಶತಾನಿ | (ಸು. 346.)