ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 61 -

  • 11

ಈ ಸ್ಥಳದಲ್ಲಿ ಹೊರಗಿನ ಸ್ಪರ್ಶನಕ್ಕೆ ಸಿಕ್ಕಬಹುದು, ಬಲದ ಹೊಟ್ಟೆಯಲ್ಲಿ ಕಡೇ ಪಕ್ಕೆಲುಬಿನ ಬುಡದ ಕೆಳ ಅಂಚಿನಿಂದ ಸುಮಾರು ಅರ್ಧ ಇಂಚು ಕೆಳಗಿನ ವರೆಗೆ ಪಿತ್ತ ಕೋಶದ ಕೆಳಗಿನ ತೆಳ್ಳಗಾದ ಅಂಚು ಮೀರಿರುವದಾದರೂ, ಅನುಭವ ಇಲ್ಲದವರಿಗೆ ಅಲ್ಲಿ ಆ ಕೋಶವು ಸ್ಪರ್ಶ ನಕ್ಕೆ ಸಿಕ್ಕುವದು ಪ್ರಯಾಸ, ಬಲಬದಿಯಲ್ಲಿ 6ನೇ 7ನೇ ಪಕ್ಕೆಲುಬುಗಳ ನಡುವೆ ಸೂಜಿ ಯನ್ನು ಚುಚಿ ದರೆ, ಅದು ಪ್ರಥಮತಃ ಶ್ವಾಸಕೋಶವನ್ನು ಹೊಕ್ಕು. ಅನಂತರ ವಪಾವಹನವನ್ನು ತೂತುಮಾಡಿ, ಪಿತ್ತಕೋಶಕ್ಕೆ ಹೋಗುವದು ತೋರಮಟ್ಟಿಗೆ ಪಿತ್ತಕೋಶದ ಮೇಲಿನ ಅಂಚು ಎದೆಯೆಲುಬಿನ ಕೆಳತುದಿಯ ಲೈನಿಗೆ ಸರಿ ಇರುವದೆನ್ನಬಹುದುಪಿತ್ತಕೋಶವು ದೇಹದಲ್ಲಿರುವ ಗ್ರಂಧಿಗಳಲ್ಲಿ ಅತ್ಯಂತ ದೊಡ್ಡದು. ಅದು ಭಾರದಲ್ಲಿ 3 ರಾತ್ತಿಗೆ ಮೇಲೆ 32 ರಾತ್ತು ವರೆಗೆ ಇರುವದು. ಅದರ ಭಾರವು ಇಡೀ ಶರೀರದ ಭಾರದ 40ನೇ 1 ಅಂಶದಿಂದ 36ನೇ 1 ಅಂಶದ ವರೆಗೆ ಇರುತ್ತದೆ. ಅದು ಮುಖ್ಯವಾದ ಎರಡು ಭಾಗಗಳಾಗಿ ವಿಂಗಡಿಸ ಲ್ಪಟ್ಟಿದೆ. ಅವುಗಳಲ್ಲಿ ಬಲಭಾಗ ದೊಡ್ಡದು. ಕೋಶವು ವರ್ಣದಲ್ಲಿ ಕಪ್ಪು ಒತ್ತಿದ ಕೆಂಪಾ ಗಿರುವದು. ಈ ಪಿತ್ತಕೋಶದ ಕೆಳ ಅಂಚಿನ ಎದುರುಗಡೆಯಲ್ಲಿ ಪಿತ್ತಾಶಯವು (gall. bladder) ಇರುವದು ಪಿತ್ತಕೋಶದಲ್ಲಿ ಉಂಟಾದ ಪಿತ್ತವು, ಜೀರ್ಣದ ಕೆಲಸ ನಡೆಯದೆ ಇರುವಾಗ್ಗೆ, ಪಿತ್ತಾಶಯಕ್ಕೆ ಇಳಿದು ಅಲ್ಲಿ ದಾಸ್ತಾನಾಗುತ್ತದೆ. ಪಿತ್ತವು ಭಂಗಾರದ ಹಳದಿ ವರ್ಣವಾಗಿಯೂ, ದಪ್ಪವಾಗಿಯೂ, ಅಂಟುಳ್ಳದ್ದಾಗಿಯೂ, ಇರುತ್ತದೆ. 24 ಘಂಟೆಯ ಒಂದು ದಿನದಲ್ಲಿ ಕೂಡುವ ಪಿತ್ತವ ಸುಮಾರು 8 ಕುಡುತೆಯಾಗಬಹುದಾಗಿ ಎಣಿಸಿದ್ದಾರೆ. ಪಿತ್ತನಾಳ 132, ಹೃದಯದ ಎಡಬದಿಯ ಕೆಳಗಣ ಅಂಕಣದಿಂದ ಹೊರಟ ದೊಡ್ಡ ಧಮನಿಯ ಒಂದು ಕವಲು ಈ ಪಿತ್ತಕೋಶಕ್ಕೆ ಸೇರಿ ಸಂಚಾರಮಾಡುವದು. ಇದರ ಜೊತೆಯಲ್ಲಿ, . ಆಮಾಶಯ, ಪಕ್ಕಾಶಯ ಮತ್ತು ಪ್ಲೇಹ, ಇವುಗಳೊಳಗೆ ಸಂಚರಿಸಿ ಹೃದ

  • ಯಕ್ಕೆ ತಿರುಗಿ ಸೇರತಕ್ಕೆ ರಕ್ತವು ಈ ಪಿತ್ತಕೋಶಕ್ಕೆ ಬಂದು ಸೇರಿ, ಮುಂದೆ ಹೋಗುತ್ತದೆ. ಆ ಎರಡು ನಾಳಗಳ ಜೊತೆಯಲ್ಲಿ ಪಿತ್ತನಾಳಗಳು ಇರುತ್ತವೆ. ಈ ಪಿತ್ತ

ನಾಳಗಳು ಕೂಡಿಕೊಂಡು ಹೊರಟು, ಕುದ್ರಾಂತ್ರದ ಆದಿಭಾಗಕ್ಕೆ ಹೋಗಿ ಸೇರುತ್ತವ. ಪಿತ್ತಕೋಶದಲ್ಲಿ ಪಿತ್ತವ ತಯಾರಾಗುವದಲ್ಲದೆ, ಪಕ್ಕಾಶಯದಲ್ಲಿ ಸಿರೆಗಳೊಳಗೆ ಸೇರಿದ ಮಧುರ ರಸದ ಹೆಚ್ಚಿನ ಅಂಶವು ಪಿತ್ತಕೋಶಕ್ಕೆ ಬಂದು, ಹಿಟ್ಟಿನ (Sta1 chy) ಮಾದರಿಯಾದ ಗೈಕೊಜನ್ ಎಂಬ ಗಟ್ಟಿ ಪದಾರ್ಥವಾಗಿ ನಿಲ್ಲುತ್ತದೆ. ಈ ಪದಾರ್ಧವು ಆಹಾರದಲ್ಲಿ ಮಧುರರಸವು ಕಡಿಮೆಯಾದಾಗ್ಗೆ ಪುನಃ ಮಧುರರಸವಾಗಿ ಆಹಾರದೊಂದಿಗೆ ಸೇರುತ್ತದೆ. ಅದು ಸಜೀವ ಮಾಂಸಖಂಡಗಳಲ್ಲಿಯೂ, ರಕ್ತದೊಳಗಣ ಬಿಳೇ ಜೀವಬೀಜಗಳಲ್ಲಿಯೂ, ಮೆದುಳಿನಲ್ಲಿಯೂ, ಗರ್ಭದಲ್ಲಿ ಸಹ ಇರುತ್ತದೆ. 133. ಕುದ್ರಾಂತ್ರವು ಆಮಾಶಯದ ಕೊನೆಯಿಂದ ಹೊರಡುವದು. ಇದರ ಬುಡ ಸುಮಾರು 10 ಇಂಚು ಉದ್ದದ ವರೆಗಿನ ಅಂಶವು ಪ್ರಥಮತಃ ಬಲಕ್ಕೆ, ಅನಂತರ ಕೆಳಗೆ, ಆ ಮೇಲೆ ಎಡಕ್ಕೆ ಮಾಲಿಕೊಂಡು ಕೊಳಿಕೆಯ ಆಕಾರವಾಗಿರುವದು. ಇದಕ್ಕೆ ಡುವೊಡೇ ನಮ್' ಅನ್ನುತ್ತಾರೆ. ಇದರ ಕೆಳಗಿನ ಸ್ವಲ್ಪ ಕೆಂಪಾಗಿರುವ ಭಾಗಕ್ಕೆ 'ಜೆಜೂನಮ್' ಎಂತಲೂ