ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬ 11 - 62 -

 ಉಳಿದ ಭಾಗಕ್ಕೆ ‘ಇವೇಯುಮ್' ಎಂತಲೂ ಹೇಳುತ್ತಾರೆ. ಇದರ ಸಂದು ಅಂತ್ರಗಳು
    ಹಿಂಬದಿ ಹೊಟ್ಟೆಯ ಬೆನ್ನಿಗೆ ಬಿಗಿಯಲ್ಪಟ್ಟದೆ. ಕ್ಷುದ್ರಾಂತ್ರನಾಳವು ಒಟ್ಟು ಸುಮಾರು 20 ಅಡಿ ಉದ್ದ ಇರುವದು. ಬುಡದ ಸುಮಾರು 10 ಇಂಚು ಅಲ್ಲದೆ ಉಳಿದ ದ್ದೆಲ್ಲಾ ಸುರುಳಿಗಳಾಗಿ ಹೊಟ್ಟೆಯ ಮಧ್ಯ ಮತ್ತು ಕೆಳಗಿನ ಭಾಗಗಳಲ್ಲಿ ರುವದು. ಇದರ ಕೂನೆಯು ಸ್ಫೂಲಾಂತ್ರದ ಬುಡಕ್ಕೆ ಕೂಡುತ್ತದೆ. ಅಲ್ಲಿ ಸ್ಥೂಲಾ೦ತ್ರಕ್ಕೆ ಸೇರಿದ ದ್ರವ್ಯವು ತಿರುಗಿ ಕ್ಷುದ್ರಾಂತ್ರಕ್ಕ ಬಾರದ ಹಾಗೆ ಒಳಬದಿ ತುಟಿಗಳು (ಮುಚ್ಚಳಗಳು) ಇವೆ. ಆ ಸಂಧಿಯಲ್ಲಿ ಕೆಳಗೆ ಒಂದು ಬಾಲದ ಹಾಗಿನ ಬೆಳಿಕೆ ಇರುತ್ತದೆ. ಅದು ಬಲಸೊ೦ಟದ ಸಮಿಪ ಹೊಟ್ಟೆಯ ಬಲಬದಿಗೆ (groll) ಇರುತ್ತದೆ. ಸ್ದೂಲಾ೦ತ್ರದ ನಾಳವು ಕ್ಷುದ್ರಾ೦ತ್ರ ನಾಳಕ್ಕಿಂತ ಹೆಚ್ಚು ತೋರವಾಗಿ, ನೆರಿಕಟ್ಟಿಕೊಂಡು ಇರುತ್ತದೆ ಸ್ಫೂಲಾ೦ತ್ರದ ನಾಳವು ನೆಟ್ಟಗೆ ಮೇಲಕ್ಕ ಪಿತ್ತಕೋಶದ ಸಮೀಪದ ವರೆಗೆ ಹೋಗಿ, ಅನಂತರ ನೆಟ್ಟಗೆ ಅಡ್ಡವಾಗಿ ಪ್ರವರ್ತಿಸಿ, ಹೊಟ್ಟೆಯ ಎಡಬದಿಯಲ್ಲಿ ಕೆಳಗೆ ಇಳಿಯುತ್ತದೆ ಸ್ಫೂಲಾoತ್ರವು ಅದರ ತುದಿಯಾದ ಗುದ ಕೂಡಿ ಸುಮಾರು 6 ಅಡಿ ಉದ್ದವಿರುತ್ತದೆ. ಅಡವಾಗಿ ನಿಂತ ಸ್ಫೂಲಾ೦ತ್ರದ ನಾಳವು ನಾಭಿ ಯಿಂದ 2-3 ಇಂಚುಗಳಿಗೆ ಮೇಲೆ ಇರುವದು, ಮೇಲಕ್ಕೆ ಹೋಗುವ ನಾಳವು ಬಲದ ವೃಕ್ಕಿನ ಎದುರಾಗಿಯೂ, ಕೆಳಗೆ ಬರುವ ನಾಳವು ಎಡದ ವೃಕ್ಕಿಗೆ ಎದುರಾಗಿಯೂ ಇರು ತ್ತದೆ. ನಾಭಯ ಕೆಳಗಿರುವ ಹೊಟ್ಟೆಯ ಭಾಗವು ಕ್ಷುದ್ರಾಂತ್ರದಿ೦ದ ತು೦ಬಿರುತ್ತದೆ. ಸ್ಫೂಲಾ೦ತ್ರಕ್ಕೆ ಸೇರುವಷ್ಟರಲ್ಲಿ ಅನ್ನರಸವು ಅರ್ಧ ಗಟ್ಟಿಯಾದ ಸ್ಥಿತಿಗೆ ಬಂದಿರುತ್ತದೆ. ಅದ ರಲ್ಲಿ ರಸವು ಮುಂದೆ ಹೋದ ಹಾಗೆ ನೀರಿನ ಅಂಶವು ಹೀರಿ ಹೋಗಿ, ಉತ್ತರೋತ್ತರ ಗಟ್ಟಿ ಯಾಗುತ್ತಾ ಮಲವಾಗಿ, ಗುದಕ್ಕೆ ಸೇರುತ್ತದೆ ಪಚನವೆಲ್ಲಾ ಸಾಧಾರಣ ಮಟ್ಟಿಗೆ, ರಸವು ಸ್ಥೂಲಾ೦ತ್ರಕ್ಕೆ ಸೇರುವ ಮೊದಲೇ ತೀರಿಹೋಗುತ್ತದೆ ಅಂತ್ರಗಳ ನಾಳದಲ್ಲಿರುವ ಸೂಕ್ಷ್ಮ 

ವಾದ ಮಾಂಸಗಳ ಸಂಕೋಚನಾದಿ ವ್ಯಾಪಾರಗಳ ಬಲದಿಂದ ರಸವು ಮುಂದಕ್ಕೆ ತೆರೆಗ ಭೋಪಾದಿ ಒಯ್ಯಲ್ಪಡುತ್ತದೆ 134, ಸ್ಥೂಲಾ೦ತ್ರದ ತುದಿಯೇ ಗುದಸ್ಥಾನ ಇದು ಸುಮಾರು ಹತ್ತು ಇಂಚು ಗುದ ಉದ್ದವಾಗಿದೆ. ಇದರ ಹೊರ ದ್ವಾರವೇ ಆಸನವೆಂಬದು. 135, ಗುದಕ್ಕೆ ಮುಂದುಗಡೆ, ಹೊಟ್ಟೆಯ ಕೆಳತುದಿಯಾದ ಸೊಂಟ ಕೂಪಕದ ಮೇಲೆ, ಮಧ್ಯರೇಖೆಯಲ್ಲಿ ಮೂತ್ರಾಶಯವಿರುವದು. ಇದು ತೆಳ್ಳಗಾದ ಆವರಣವುಳ್ಳ ಚೀಲ. ಮೂತ್ರಾ ಇದರಲ್ಲಿ ಮೂತ್ರ ತುಂಬಿದ ಹಾಗೆ ಇದು ಉಬ್ಬುತ್ತದೆ. ಖಾಲಿಯಾದಾಗ್ಗೆ ಶಯ ಬಹು ಚಿಕ್ಕದಾಗಿರುವದು. ಸಾಧಾರಣವಾಗಿ ವಿಸ್ತರಿಸಿರುವಾಗ್ಗೆ ಅದು 4 ಕುಡುತೆ ಹಿಡಿಯುವಷ್ಟು ದೊಡ್ಡದಾಗಿರುವದು. ವೃಕ್ಕುಗಳಿಂದ ಮೂತ್ರಸ್ರೋತಸ್ಸುಗಳ (ureters) ದ್ವಾರ ಒರುತ್ತಿರುವ ಮೂತ್ರವನ್ನು ದಾಸ್ತಾನುಮಾಡಿ, ಆಗಾಗ್ಗೆ ಹೊರಗೆ ಬಿಡು ವ೦ಧಾದ್ದು ಮೂತ್ರಾಶಯದ ಕೆಲಸವಾಗಿರುತ್ತದೆ. ವಿಶೇಷವಾಗಿ ವಿಸ್ತರಿಸಿದಾಗ್ಗೆ ಕೂಪಕ ದಿಂದ ಮೇಲಕ್ಕೆ ವಿಸ್ತರಿಸಿ, ಕ್ಷುದ್ರಾ೦ತ್ರವನ್ನು ದೂಡಿಕೊಂಡು ಇರುವದರಿಂದ, ಕೆಳಗಿನ ಹೊಟ್ಟೆಯು ಉಬ್ಬಿಕೊಂಡು, ಗಟ್ಟಿಯಾಗಿ ಕಾಣುವದು. ಈ ಉಬ್ಬುವಿಕೆಯು ಕೆಲವು ಸಂಗತಿ