ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 75 -ಅ III

ಉಷ್ಣ, ತೀಕ್ಷ್ಣ , ಸೂಕ್ಷ್ಮ, ರೂಕ್ಷ, ಖರ, ಲಘು, ವಿಶದ ಇವು ಮತ್ತು ಹೆಚ್ಚಾಗಿ ರೂಪ ಗುಣ ಇರುವ, ಸ್ವಲ್ಪವಾಗಿ ಹುಳಿ ಮತ್ತು ಉಪ್ಪು, ಮತ್ತು ಹೆಚ್ಚಾಗಿ ಖಾರ ರಸವುಳ್ಳ, ವಿಶೇಷ ವಾಗಿ ಮೇಲಕ್ಕ ಹೋಗುವ ಸ್ವಭಾವವುಳ್ಳ ಪದಾರ್ಧವು ತೇಜಃಸಂಬಂಧವಾದದ್ದು. ಅದು ಸುಡುವದು, ಪಾಕ ಮಾಡುವದು, ಸೀಳುವದು, ಬಿಸಿ ಮಾಡುವದು, ಬೆಳಗುವದು, ತೇಜಸ್ಸು ಮತ್ತು ವರ್ಣ, ಇವುಗಳನ್ನುಂಟುಮಾಡುವದು, ಈ ಕೆಲಸಗಳನ್ನು ಮಾಡತಕ್ಕದ್ದಾಗಿದೆ. ವರಾ ಉಷ್ಣಾದಿ ಗುಣವಾಚಕಪದಗಳ ವಿವರಣಕ್ಕೆ ಮೇಲಿನ 2ನೇ ಸಂ ನೋಡು

7 ವಾಯವೀ ಯಧಲಕ್ಷಣ 

ಸೂಕ್ಷ್ಮ -ರೂಕ್ಷ-ಖರ-ಶಿಶಿರ-ಲಘು-ವಿಶದಂ ಸ್ಪರ್ಶಬಹುಲಮಾತ್ತಿಕ್ತ೦ ವಿಶೇಷತಃ ಕಷಾಯಮಿತಿ ವಾಯವೀಯಂ ತದ್ವೆಶದ್ಯ ಲಾಘವ-ಗ್ಲ-ವನ-ವಿರೂಕ್ಷಣ -ವಿಚಾರಣಕರಮಿತಿ | (ಸು. 132 ) ಸೂಕ್ಷ್ಮ, ರೂಕ್ಷ, ಬಿರುಸು, ತಣ್ಣಗೆ, ಹಗುರ, ವಿಶದ ಈ ಗುಣಗಳು ಮತ್ತು ಹೆಚ್ಚಾಗಿ ಸ್ಪರ್ಶ (ಮುಟ್ಟುವಿಕೆ) ಗುಣ ಇರುವ, ಸ್ವಲ್ಪ ಕಹಿ, ಹೆಚ್ಚಾಗಿ ಚೊಗರುರುಚಿಯುಳ್ಳ ವದಾ ರ್ಧವು ವಾಯುಸಂಬಂಧವಾದದ್ದು. ಅದು ಶುದ್ಧ ಪಡಿಸುವಿಕ, ಹಗುರ ಮಾಡುವದು, ದುರ್ಬಲ ಪಡಿಸುವದು, ಒಣಗಿಸುವಿಕೆ, ಚಂಚಲತೆ ಇವುಗಳನ್ನುಂಟುಮಾಡುತ್ತದೆ. 8. ಸ್ಲಕ್ಷ್ಣ -ಸೂಕ್ಷ್ಮ-ಮೃದು-ವ್ಯವಾಯಿ-ವಿವಿಕ್ತಮವ್ಯಕ್ತರಸಂ ಶಬ್ದಬಹುಲ ಆಕಾತೀಯದ ಮಾಕಾಶೀಯಂ ತನ್ಮಾರ್ದವ-ಶೌಷಿರ್ಯ-ಲಾಘವಕರಮಿತಿ | ಲಕ್ಷಣ (ಸು. 152.) ನುಣುಪು, ಸೂಕ್ಷ್ಮ, ಮೃದು, ವ್ಯವಾಯಿ, ವಿಭಜನೆ, ಈ ಗುಣಗಳುಳ್ಳದ್ದೂ, ಕಾಣದ ರುಚಿ ಯುಳ್ಳದ್ದೂ, ಶಬ್ದಗುಣ ಹೆಚ್ಚಾಗಿಯುಳ್ಳದ್ದೂ ಆದ ಪದಾರ್ಧವು ಆಕಾಶೀಯ, ಅದು ಮೃದು ಮಾಡುವದು, ಕೊರೆಯುವದು, ಹಗುರ ಮಾಡುವದು, ಈ ಕೆಲಸಗಳನ್ನು ಮಾಡುತ್ತದೆ | 9. ಪೃಥ್ವಿ ವಾಯುಗಳು ವಿರೇಚಕ ವಿರೇಚನದ್ರವ್ಯಾಣಿ ಪೃಧಿವ್ಯಂಬುಗುಣಭೂಯಿಷ್ಠಾನಿ ಪೃಥಿವ್ಯಾವೋ ಗುವ್ಯೋರ್ಗ ಗುರುತ್ವಾದಧೋಗಚ್ಛಂತಿ ತಸ್ಮಾದ್ವಿರೇಚನಮಧೋಗುಣ ಈ ಭೂಯಿಷ್ಠ ಮನುಮಾನಾತ್ | (ಸು. 153.) | ವಿರೇಚನ ವಿರೇಚನ ಮಾಡಿಸುವ ದ್ರವ್ಯಗಳಲ್ಲಿ ಪೃಧ್ವೀಗುಣ ಮತ್ತು ಜಲಗುಣಗಳು ವಿಶೇಷ ವಾಗಿರುತ್ತವೆ. ಪೃಧ್ವೀ ಮತ್ತು ನೀರು ಭಾರವುಳ್ಳವುಗಳಾಗಿ, ಭಾರದ ದೆಸೆಯಿಂದ ಕೆಳಗೆ ಹೋಗುತ್ತವೆ. ಆದ್ದರಿಂದ ವಿರೇಚನವು ಕೆಳಗೆ ಹೋಗುವ ಗುಣದಿಂದ ತುಂಬಿದ್ದೆಂತ ಊಹಿಸ ಬೇಕಾದದ್ದು. 10. ಅಗ್ನಿ ವಾಯೂ ಗಳು ವಮನ ವಮನದ್ರವ್ಯಾಣ್ಯಗ್ನಿವಾಯುಗುಣಭೂಯಿಷ್ಠಾನ್ಯವಾಯೂ ಹಿ ಲಘೂ ಲಘುತ್ವಾಚ್ಚ ತಾನ್ಯೂರ್ಧ್ವಮುಷ್ಠಂತಿ ತಸ್ಮಾದ್ವ ಮನಮಪ್ಯೂಧ್ವರ್ಗ ಗುಣಭೂಯಿಷ್ಠ ಮುಕ್ತಂ | (ಸು. 153.) ವಮನ (ವಾಂತಿ) ಮಾಡಿಸುವ ದ್ರವ್ಯಗಳಲ್ಲಿ ಅಗ್ನಿ ಮತ್ತು ವಾಯುಗಳ ಗುಣಗಳು ಹೆಚ್ಚಾಗಿರುವಂಧವು. ಅಗ್ನಿ ಮತ್ತು ವಾಯು ಲಘುವಾದವು ಮತ್ತು ಲಘುತ್ವದ ದೆಸೆಯಿಂದ