ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬, 1 89 - ಮಾಡುವ, ಮೊಲೆಹಾಲನ್ನೂ, ಶುಕ್ರವನ್ನೂ, ಮೇದಸ್ಸನ್ನೂ, ನಾಶಮಾಡುವ ಗುಣವುಳ್ಳದ್ದು; ಅದು ಈ ಗುಣಗಳುಳ್ಳದ್ದಾದಾಗ್ಯೂ ಅದನ್ನು ಒಂದನ್ನೇ ಅತಿಯಾಗಿ ಸೇವಿಸಿದರೆ, ತಲೆತಿರುಕು, ಎಚ್ಚರವಿಲ್ಲದಿರುವಿಕೆ, ಕಂರದ, ತಾಲುವಿನ ಮತ್ತು ತುಟಿಗಳ ಒಣಗುವಿಕೆ, ಶರೀರದಲ್ಲಿ ಉರಿ, ಬಲನಾಶ, ನಡುಕು, ನೋವು, ಒಡತ, ಇವುಗಳನ್ನೂ, ಕಾಲು, ಕೈ, ಪಕ್ಕ, ಬೆನ್ನು ಮೊದಲಾದವುಗಳಲ್ಲಿ ವಾತದ ಶೂಲೆಗಳನ್ನೂ ಉಂಟುಮಾಡುತ್ತದೆ.

15.ತಿಕ್ತಶ್ಛೇದನೋ ರೋಚನೋ ದೀಪನಃ ಶೋಧನಃ ಕಂಡೂ-ಕೋರ ತೃಷ್ಣಾ-ಮೂರ್ಚ್ಛಾ-ಜ್ವರ-ಪ್ರಶಮನಃ ಸ್ತನ್ಯಶೋಧನೋ ವಿಣ್ಮೂತ್ರ-ಕಹಿರಸದ ಕ್ಲೇದ- ಮೇದೋ-ವಸಾ-ಪೂಯೋಪಶೋಷಣಶ್ಚೇತಿ | ಸ ಏವಂ ಗುಣ ದೋಷಗಳು ಗುಣೋಷ್ಯೇಕ ಏವಾತ್ಯರ್ಧಮುಪಸೇವ್ಯಮಾನೋ ಗಾತ್ರಮನ್ಯಾಸ್ತಂಭಾ ಕ್ಷೇಪಕಾರ್ದಿತ -ಶಿರಃಶೂಲ-ಭ್ರಮ-ತೋದ- ಭೇದ-ಚ್ಛೇದಾಸ್ಯವೈರಸ್ಯಾ ನ್ಯಪಾದಯತಿ | ಕಹಿಯು ಕಡಿಯುವ ,ರುಚಿಯನ್ನುಂಟುಮಾಡುವ ,ಅಗ್ನಿಯನ್ನುಂಟುಮಾಡುವ,(ವಮನ ವಿರೇಚನ ರೂಪದಿಂದ) ಶೋಧಿಸುವ ,ತುರಿಯನ್ನೂ,ಕುಷ್ಟವನ್ನೂ, ಬಾಯಾರಿಕೆಯನ್ನೂ, ಮೂರ್ಚ್ಛೆಯನ್ನೂ,ಜ್ವರವನ್ನೂ , ಶಾಂತಮಾಡುವ ಮೊಲೆಹಾಲನ್ನು ಶುದ್ಧಿಮಾಡುವ ಮತ್ತು ಮಲ, ಮೂತ್ರ, ದ್ರವ, ಮೇದಸ್ಸು, ವಸಾ,ಕೀವು, ಇವುಗಳನ್ನು ಒದಗಿಸುವ, ಗುಣವುಳ್ಳದ್ದು, ಅದಾಗ್ಯೂ, ಅದನ್ನು ಒಂದನ್ನೇ ಅತಿಯಾಗಿ ಸೇರಿಸಿದರೆ, ಗಾತ್ರಸ್ತಂಭ, (ಚಲನಾಶಕ್ಯತೆ), ಮನ್ಯಾಸ್ತಂಭ, ನಡುಕು, ಅರೆ ತಲೆವಾತ, ತಲೆಶೂಲೆ, ಭ್ರಮ, ನೋವು, ಒಡತ ತುಂಡಾಗುವಿಕೆ ಬಾಯಿರುಚಿ ಕಡುವುದು ಇವುಗಳನ್ನು ತರುತ್ತದೆ.

16. ಕಪಾಯಃ ಸಂಗ್ರಾಹಕೋ ರೋಪಣಃ ಸ್ತಂಭನಃ ಶೋಧನೋ ಲೇಖನಃ ಶೋಷಣಃ ಪೀಡನಃ ಕ್ಲೇದೋಪಶೋಷಣಶ್ಚೇತಿ ಸ ವಿವಂ ಗುಣೋಪ್ಯೇಕ ಏವಾತ್ಯರ್ಧಮುಪಸೇವ್ಯಮಾನೋ ಹೃತ್ಪೀಡಾಸ್ಯಶೋಷೋದರಾ ಧ್ಮಾನ ವಾಕ್ಯಗ್ರಹ ಮನ್ಯಾಸ್ತಂಭ ಗಾತ್ರಸ್ಪುರಣ ಚುಮಚುಮೂಯ ನಾಕುಂಚನಾಕ್ಷೇಪಣಪ್ರಭೃತೀನ್ ಜನಯತಿ

ಚೊಗರು (ಮಲ) ಸಂಗ್ರಹಿಸುವ (ವೃಣಾದಿಗಳನ್ನು) ಬೆಳಿಸುವ, ಸ್ತಂಭನ (ತಡಿಯುವ) ಶೋಧಿಸುವ, ಲೇಖನ (ಕೊರಿಯುವ), ಒಣಗಿಸುವ,ಪೀಡಿಸುವ, ಮತ್ತು ಒದ್ದೆಯನ್ನಾರಿಸುವ ಗುಣವುಳ್ಳದ್ದು. ಅದಾಗ್ಯೂ ಅದನ್ನು ಒಂದನ್ನೇ ಅತಿಯಾಗಿ ಸೇರಿಸಿದರೆ, ಹೃದಯದ ಪೀಡೆ, ಕ್ಷಯ, ಉದರವ್ಯಾಧಿ, ಹೊಟ್ಟೆಯುಬ್ಬರ, ಮಾತಿನ ತಡೆ, ಕುತ್ತಿಗೆ ಹಿಂದೆ ಹಿಡುಕೊಳ್ಳುವುದು, ಶರೀರದಲ್ಲಿ ಸಿಡತ ಮತ್ತು ಚುಮುಚುಮು, ಮುದುರುವಿಕೆ, ನಡುಕು ಮುಂತಾದ ರೋಗಗಳನ್ನು ಹುಟ್ಟಿಸುತ್ತದೆಮುಂತಾದ ರೋಗಗಳನ್ನು ಹುಟ್ಟಿಸುತ್ತದೆ.