ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 95 -

  • 1\'

ಅಮೃತಬಳ್ಳಿ, ಕಹಿಪಡುವಲ ಅಲ್ಲದ ಕಹಿಗಳು ಮತ್ತು ಶುಂರಿ, ಹಿಪ್ಪಲಿ, ಬೆಳ್ಳುಳ್ಳಿ ಅಲ್ಲದ ಖಾರವಸ್ತುಗಳು ವಾತಪ್ರಕೋಪವನ್ನುಂಟುಮಾಡತಕ್ಕವು ಮತ್ತು ಪೌರುಷ್ಯವನ್ನು ಕಡಿಮೆ ಮಾಡತಕ್ಕವ. 33. ಆ ದಲ್ಲಿ ಬಲಾ ಬಲವಿಚಾರ. ಕಿಂಚಿದ್ರಸೇನ ಕುರುತೇ ಕರ್ಮ ಪಾಕೇನ ವಾಪರಂ | ಗುಣಾಂತರೇಣ ವೀರ್ಯೇಣ ಪ್ರಭಾವೇವ ಕಿಂಚನ || ಯದ್ಧದ್ಧ ವೈ ರಸಾದೀನಾಂ ಬಲವನ ವರ್ತತೇ | ಅಭಿಭೂಯೇತರಾಂಸ್ಕತ್ಕಾರಣಂ ಪ್ರಪ ದೃತೇ || (ವಾ 49.) ಕೆಲವು ದ್ರವ್ಯಗಳು ರಸದ ಬಲದಿಂದ, ಕೆಲವು ದ್ರವ್ಯಗಳು ರಸದ ವಿಪಾಕವಿಶೇಷದಿಂದ, ಕೆಲವು ವೀರ್ಯವಿಶೇಷದಿಂದ, ಕೆಲವು ಪ್ರಭಾವದಿಂದ ಕೆಲಸ ಮಾಡುತ್ತವೆ. ಯಾವ ಯಾವ ದ್ರವ್ಯದಲ್ಲಿ ರಸಾದಿಗಳೊಳಗೆ ಯಾವದ್ಯಾವದು ಬಲವಾಗಿರುತ್ತದೋ, ಅದು ಇತರ ಗುಣ ಗಳನ್ನು ಜಯಿಸಿ, ಕೆಲಸಮಾಡುವ ಶಕ್ತಿಯುಳ್ಳದ್ದಾಗುತ್ತದೆ ಏರುದ ಗುಣ ಸಂಯೋಗ 34. ವಿರುದ್ಧ ಗುಣಸಂಯೋಗೇ ಭೂಯಸಾಲ್ಬಂ ಹಿ ಜೀಯತೇ | ರಸಂ ವಿಪಾಕಸ್ತೆ ವೀರ್ಯ೦ ಪ್ರಭಾವಸ್ರಾವ್ಯಪೋಹತಿ || (ವಾ. 50.) ವಿರುದ್ಧ ಗುಣಗಳುಳ್ಳ ದ್ರವ್ಯಗಳು ಕೂಡಿದಾಗ್ಗೆ, ಬಲವಾದದ್ದು ಅಲ್ಪವಾದದ್ದನ್ನು ಜಯಿಸು ತದೆ, ಮತ್ತು ರಸದ ಗುಣವನ್ನು ವಿಪಾಕದ ಗುಣವೂ, ಅವೆರಡನ್ನು ವೀರ್ಯಗುಣವೂ, ಮತ್ತು ಅವು ಮೂರನ್ನು ಪ್ರಭಾವಗುಣವೂ ಅಡಗಿಸುತ್ತವೆ. 35. ಕೇಚಿವಿಧಮಿಚ್ಛಂತಿ ಮಧುರಮಲ್ಲಂ ಕಟುಕಂ ಚೇತಿ ತತ್ತುನ ಸಮ್ಯಕ್ ಭೂತಗುಣಾದಾಗಮಾಚ್ಚಾ ಮೇ ವಿಪಾಕೋ ನಾಸ್ತಿ ಪಿತ್ತಂ ವಿಪಾಕ ಹಿ ವಿದಗ್ಗ ಮಮ್ರ ತಾಮುಪೈತ್ಯಗೇರ್ಮಂದತ್ತಾತ್ | ಯದೈವಂ ಲವ ವಿಚಾರ ಸೋ5 ಪೈನ್ಯ ಪಾಕೋ ಭವಿಷ್ಯತಿ ಶ್ರೇಷ್ಮಾ ಹಿ ವಿದಗ್ದ ಲವಣತಾ ಮುಪೈತಿ || (ಸು. 150.) . ಷರಾ ಅಗ್ನರ್ಮಂದತ್ವಾತ” ಎಂಬಲ್ಲಿ ಆಗ್ನೆಯತ್ವಾತ್' ಎಂಬ ಪಾರಾಂತರವಿದೆ ನಿ ಸಂ ಎಪಾಕವ್ರ ಸೀ, ಹುಳಿ, ಖಾರ, ಎಂತ ಮೂರು ವಿಧವೆಂಬದಾಗಿ ಕೆಲವರು ಹೇಳುತ್ತಾರೆ. ಆದರೆ ಅದು ಸರಿಯಲ್ಲ. ಭೂತದ ಗುಣದಿಂದಲೂ, ಶಾಸ್ತ್ರದಿಂದಲೂ ಹುಳಿ ವಿಪಾಕ ವೆಂಬದು ಇಲ್ಲ. ಅಗ್ನಿ ಮಂದವಾದ (ಪಾರಾಂತರ ಪ್ರಕಾರ ಅಗ್ನಿಗುಣದ) ದೆಸೆಯಿಂದ ಪಿತ್ತವೇ ಕ್ರಮ ತಪ್ಪಿ ಪಾಕವಾದರೆ ಹುಳಿಯಾಗುವಂಥಾದ್ದು. ಹಾಗಲ್ಲವಾದರೆ, ಉಪ್ಪು ಇನ್ನೊಂದು ವಿಪಾಕ ಎಂತ ಎಣಿಸಬೇಕಾದೀತು. ಆದರೆ ಶ್ರೇಷ್ಕವು ಕ್ರಮ ತಪ್ಪಿ ಪಾಕವಾದರೆ ಉಪ್ಪಾಗುವಂಥಾದ್ದಾಗಿರುತ್ತದೆ.