ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 99 -

                                                ಆ lv
   ಕಂಗುವರಕಮಕುಷ್ಠ ಕಕುಲತ್ಪ ಮಾಷನಿಷ್ಟಾವಾ ಪಯಸಾ ಸಹ ವಿರುದ್ದಾಃ |
                                       (ಚ. 152.)
   ಕಂಗು, ವರಕ, ಮಕುಷ್ಠಕ, ಎಂಬ ಧಾನ್ಯಗಳು, ಹುರುಳಿ, ಉದ್ದು ಮತ್ತು ಅವರೆ 
  ಹಾಲಿನೊಂದಿಗೆ ವಿರುದ್ಧವಾದವು
    ಪಾಯಸೋ ಮನ್ಸಾನುಪಾನೋ ವಿರುದ್ದಃ | ಉಪೋದಿಕಾ ತಿಲಕಲ್ಕಸಿದ್ದಾ
    ಹೇತುರತೀಸಾರಸ್ಯ | (ಚ. 152.) 
   ಪಾಯಸ ತಿಂದು ಹಿಟ್ಟು ಕಲಿಸಿದ್ದನ್ನು ಕುಡಿಯಬಾರದು. ಎಳ್ಳಿನ ಕಲ್ಕ ಕೂಡಿಸಿ ತಯಾರಿಸಿದ ಬಸಳೆಸೊಪ್ಪಿನ (ಬಚ್ಚಲುಸೊಪ್ಪಿನ) ಅಡಿಗೆ ಅತಿಸಾರಕ್ಕೆ ಹೇತುವಾಗುವದು
            ತಧಾ ಕಾಕಮಾಚೀ ಮಧು ಚ ಮರಣಾಯ | (ಚ 152 ) 
 ಕಾಗೆಹಣ್ಣು ಮತ್ತು ಬೇನು ಒಟ್ಟಾಗಿ ಸೇವೆಸಲ್ಪಟ್ಟಲ್ಲಿ ಮರಣಕ್ಕೆ ಕಾರಣವಾಗುತ್ತದೆ.
    ಮಧು ಚೋಷ್ಣ ಮುಷ್ಠಾರ್ತಸ್ಯ ಚ ಮಧು ಮರಣಾಯ !! (ಚ. 152.) 

ಕಾಯಿಸಿದ ಜೇನು ಮತ್ತು ಉಷ್ಣದಿಂದ ಪೀಡಿತನಾದವನಿಗೆ ಜೇನು ಸಹ ಮರಣಕ್ಕೆ ಹೇತು.

 ಸುತ್ತುತದಲ್ಲಿ ಮಧುಚೋನ್ಸ್ರುರುಷ್ಟೇ ನಾ ಎಂತ ಉಂಟು (ಪು 79 ) ಅಂದರೆ ಜೇನು ಬಿಸಿಯಾಗಿರುವ ಪದಾರ್ಥಗಳೊಂದಿಗೆ ಅಥವಾ ಉಗ್ಧ ಕಾಲದಲ್ಲಿ ಎರುದ್ಧ
    ಮಧುಸರ್ವಿಪೀ ತುಲೈ ಮಧು ವಾರಿ ಚಾನರಿಕಶಂ ಸಮಘೃತಂ ಮಧು 
    ಪುಷ್ಕರಬೀಜಂ ಮಧು ಪೀತೋಷ್ಟೋದಕಂ ಭಲ್ಲಾತಕೋಷ್ಟೋದಕಮ್ ||
                                       (ಚ. 152.)
 ಜೇನು ಮತ್ತು ತುಪ್ಪ ಸಮಾನ ತೂಕ, ಜೇನು ಮತ್ತು ಆಕಾಶದ ನೀರು, ಸಮಪಾಲು ತುಪ್ಪದೊಂದಿಗೆ ತಾವರೆಬೀಜ ಮತ್ತು ಜೇನು, ಜೇನು ಕುಡಿದು ಬಿಸಿನೀರಿನನುಪಾನ, ಗೇರು ಕಾಯಿ ಮತ್ತು ಬಿಸಿನೀರು, ಈ ಯೋಗಗಳು ಸಹ ಎಷವಾಗಿ ಪರಿಣಮಿಸುತ್ತವೆ.
           ಕಾಕಮಾಚೀಂ ಪಿಪ್ಪಲೀಮರಿಚಾಭ್ಯಾಮ್ || (ಸು. 78.) 
  ಕಾಗೆಸೊಪ್ಪನ್ನು ಹಿಪ್ಪಲೀ ಮೆಣಸುಗಳೊಂದಿಗೆ ಉಪಯೋಗಿಸಬಾರದು.
                   ಪಿತ್ತೇನ ವಾ ಮಾಂಸಾನಿ || (ಸು. 78.) 
       ಪಿತ್ತಸಹಿತವಾಗಿ ಮಾಂಸಗಳನ್ನು ಭಕ್ಷಿಸಬಾರದು.
             ಸುರಾಕೃಶರಾಪಾಯಸಾಂಶ್ಚ ನೈಕಧ್ಯಮ್ | (ಸು. 78.) 
  ಸುರಾಮದ, ಹುಗ್ಗಿ -ಪಾಯಸಗಳನ್ನು ಒಟ್ಟಾಗಿ ಉಪಯೋಗಿಸಬಾರದು.
                ಮತ್ತೈಃ ಸಹೇಕುವಿಕಾರಾನ್ !! (ಸು. 78.) 
 ವಿಾನುಗಳೊಂದಿಗೆ ಬೆಲ್ಲ ಮುಂತಾದ ಕಬ್ಬಿನ ವಿಕಾರಗಳನ್ನು ಭಕ್ಷಿಸಬಾರದು.
         ಗುಡೇನ ಕಾಕಮಾಚೀಂ ಮಧುನಾ ಮೂಲಕಂ ಗುಡೇನ ವಾರಾಹಂ 
         ಮಧುನಾ ಚ ಸಹ ವಿರುದ್ದಮ್ || (ಸು. 78-79.)
                                               13*