ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 100 -
lv
ಬೆಲ್ಲದೊಂದಿಗೆ ಕಾಗೆಸೊಪ್ಪು, ಜೇನಿನೊಂದಿಗೆ ಮೂಲಂಗಿ, ಬೆಲ್ಲ ಮತ್ತು
ಜೇನಿನೊಂದಿಗೆ ಕಾಡಹಂದಿಮಾಂಸ ಸಹ ವಿರುದ್ದ.
ಕದಲೀಫಲಂ ತಾಲಫಲೇನ ಪಯಸಾ ದಧ್ಯಾ ತಕ್ರೇಣ ವಾ || (ಸು. 79 )
ಬಾಳೆಹಣ್ಣನ್ನು ತಾಳಿಹಣ್ಣಿನೊಂದಿಗೆ, ಹಾಲಿನೊಂದಿಗೆ, ಮೊಸರೊಂದಿಗೆ ಅಧವಾ
ಮಜ್ಜಿಗೆ ಯೊಂದಿಗೆ, ತಿನ್ನಬಾರದು.
ಲಿಕುಚಫಲಂ ಪಯಸಾ ದಧ್ಯಾ ಮಾಷಸೂಪೇನ ವಾ ಮಧುನಾ ಘೃತೇನ
ಚ | ಪ್ರಾಕ್ ಪಯಸಃ ಪಯಸೋ5ನೇ ವಾ || (ಸು 79.)
ಹೆಬ್ಬಲಸಿನ ಫಲವನ್ನು ಹಾಲಿನೊಂದಿಗೆ, ಮೊಸರಿನೊಂದಿಗೆ, ಉದ್ದಿನ
ತೋವೆಯೊಂದಿಗೆ, ಅಧವಾ ತುಪ್ಪ-ಜೇನುಗಳೊಂದಿಗೆ ತಿನ್ನಬಾರದು, ಮತ್ತು
ಅದನ್ನು ಹಾಲಿಗೆ ಮೊದಲಾಗಲಿ ಹಾಲಿನ ಅಂತ್ಯದಲ್ಲಿಯಾಗಲ ಭಕ್ಷಿಸಬಾರದು.
ಕಾಂಸ್ಯಭಾಜನೇ ದಶರಾತ್ರಪರ್ಯುಮಿತಂ ಸರ್ಪಿಃ || (ಸು. 79.)
ಕಂಚಿನ ಪಾತ್ರೆಯಲ್ಲಿ ಹತ್ತು ರಾತ್ರಿ ಉಳಿಸಿದ ತುಪ್ಪ ತ್ಯಾಜ್ಯ.
ಸ್ನೇಹೌ ಮಧುಸ್ನೇಹೌ ಜಲಸ್ನೇಹೌ ವಾ || (ಸು 79.)
ಎರಡು ಜಾತಿ ಸ್ನೇಹಗಳನ್ನು, ಜೇನು ಮತ್ತು ಸ್ನೇಹವನ್ನು, ಅಥವಾ ನೀರು
ಮತ್ತು ಸ್ನೇಹವನ್ನು, ಸರಿ ತೂಕ ಕೂಡಿಸಿದರೆ, ವಿರೋಧ ಉಂಟಾಗುತ್ತದೆ.
ಮಧುಸರ್ಪಿವ್ರಸಾತೈಲಪಾನೀಯಾನಿ ದ್ವಿಶಸ್ತಿಶಃ ಏಕತ್ರ ವಾ ಸಮಾಂಶಾನಿ
ವಿರುಧನೇಪರಸರಮ | ಭಿನ್ನಾಂಶೇ ಅಪಿ ಮಧ್ವಾಜೇ ದಿವ್ಯವಾರ್ಯ
ನುಪಾನತಃ || (ವಾ 40 )
ಜೇನು, ತುಪ್ಪ, ವಸೆ, ತೈಲ, ನೀರು, ಇವುಗಳನ್ನು ಎರಡಾಗಿ, ಮೂರಾಗಿ, ಅಧವಾ
ಒಟ್ಟಾಗಿ, ಸಮಾಂಶದಿಂದ ಉಪಯೋಗಿಸಿದರೆ, ಅವು ಪರಸ್ಪರ ವಿರೋಧ ಮಾಡುತ್ತವೆ. ಜೇನು ಮತ್ತು ತುಪ್ಪವನ್ನು ಭಿನ್ನಾಂಶವಾಗಿ ಉಪಯೋಗಿಸಿದಾಗಲೂ, ಅನುಪಾನಕ್ಕೆ ಆಕಾಶದ ನೀರನ್ನುಪಯೋಗಿಸಿದರೆ, ವಿರೋಧವುಂಟಾಗುತ್ತದೆ.
ಉಷ್ಟ್ರರ್ದಧಿ ವಿವರ್ಜಯೇತ್ || (ಭಾ. ಪ್ರ. 70.)
ಉಷ್ಣಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಬಾರದು.
ಕೃತಾನ್ನಂ ಚ ಕಷಾಯಂ ಚ ಪುನರುತ್ಥಕೃತಂ ತ್ಯಜೇತ್ || (ಭಾ. ಪ್ರ. 70.)
ಸಿದ್ಧವಾದ ಅನ್ನವನ್ನಾಗಲಿ, ಕಷಾಯವನ್ನಾಗಲಿ, ಪುನಃ ಬಿಸಿ ಮಾಡಿ ಉಪಯೋಗಿಸ
ಬಾರದು.
ಏಕತ್ರ ಬಹುಮಾಂಸಾನಿ ವಿರುಧನೇ ಪರಸ್ಪರಮ್ || (ಭಾ. ಪ್ರ. 70 )
ಬಹು ಜಾತಿಯ ಮಾಂಸಗಳನ್ನು ಒಟ್ಟಾಗಿ ಉಪಯೋಗಿಸಿದ್ದಲ್ಲಿ ಅವು ಪರಸ್ಪರ
ವಿರೋಧವನ್ನು ಮಾಡುತ್ತವೆ.