ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬. IY - 101 - ಕ್ಷೀರಮಿತ್ರಾಣಿ- - ಆಮ್ಲೇಷ್ವಾ ಮಲಕಂ ಪಧ್ಯಂ ಶರ್ಕರಾ ಮಧುರೇಷು ಚ | ಪಟೋಲಃ ಶಾಕವರ್ಗೇಷು ಕಟುಕೇಷ್ವಾರ್ದ್ರಕಂ ಭವೇತ್ | ಕಷಾಯೇಷು ಯವಾಶ್ಟೈವ ಲವಣೇಷು ಚ ಸೈಂಧವಮ್ || ಹುಳಿ ಪದಾರ್ಧಗಳೊಳಗೆ ನೆಲ್ಲಿ, ಸೀ ಪದಾರ್ಧಗಳೊಳಗೆ ಸಕ್ಕರೆ, ಶಾಕವರ್ಗಗಳೊಳಗೆ ಪಡುವಲಕಾಯಿ, ಖಾರವಾದ ವಸ್ತುಗಳೊಳಗೆ ಹಸಿ ಶುಂಠಿ, ಚೊಗರು ಪದಾರ್ಧಗಳೊಳಗೆ ಯವೆ, ಮತ್ತು ಉಪ್ಪು ಗಳೊಳಗೆ ಸೈಂಧವಲವಣ, ಸಹ ಹಾಲಿಗೆ ಮಿತ್ರರು ಆದ್ದರಿಂದ ಪಧ್ಯವಾದವು. ಷರಾ ಈ ವಚನವು ಚರಕದಲ್ಲಿಯಾಗಲಿ, ಸುಶ್ರುತದಲ್ಲಿ ಯಾಗಲಿ, ವಾಗ್ಭಟನೆ ಆಷ್ಟಾಂಗಹೃದಯದಲ್ಲಿ ಯಾಗಲಿ ಕಾಣುವದಿಲ್ಲ ಅದಲ್ಲದೆ ಹಾಲಿನೊಂದಿಗೆ ನೆಲ್ಲಿ ವರ್ಜ್ಯ ಎಂತ ಚರಕದಲ್ಲಿ ಕುರಿತಾಗಿ ಹೇಳಲ್ಪಟ್ಟದೆ ಸಕ್ಕರೆ, ಹಸಿ ಪಡುವಲಕಾಯಿ, ಹಸಿ ಶುಂರಿ, ಇವುಗಳು ಹಾಲಿನೊಂದಿಗೆ ತ್ಯಾಜ್ಯವಾಗಿ ಎಲ್ಲಿಯೂ ಹೇಳಲ್ಪಟ್ಟದ್ದು ಕಾಣುವದಿಲ್ಲವಾದ್ದರಿಂದ, ಹಾಲನ್ನದ ಜೊತೆಯಲ್ಲಿ ಅವಶ್ಯವಿದ್ದರೆ ಆ ಮೂರರೊಳಗೆ ಒಂದನ್ನು ಉಪಯೋಗಿಸ ಬಹುದೆಂತಲೂ ಅದರಿಂದಲೂ ಸಾಧ್ಯವಾಗದ ಸ೦ಗತಿಯಲ್ಲಿ ಸೈಂಧವಲವಣವನ್ನು ಅಲ್ಲ ವಾಗಿ ಉಪಯೋಗಿಸಬಹುದೆಂತ ಲೂ ಕಾಣುತ್ತದೆ