ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 102 - V ನೇ ಅಧ್ಯಾಯ. ದೇಹಾಧಾರಭೂತವಾದ ದೋಷಧಾತುಗಳ ವಿಚಾರ. 1. ಕಫ ಪಿತ್ತವಾಯು ವಿಸರ್ಗಾದಾನವಿಕ್ಷೇಪೈ ಸೋಮಸೂರ್ಯಾನಿಲಾ ಯಧಾ | ಗಳು ಚಂದ್ರಸೂ ರ್ಯವಾಯು ಧಾರಯಂತಿ ಜಗದ್ದೇಹಂ ಕಫಪಿತ್ತಾನಿಲಾಸ್ತಧಾ || ರ್ಯವಾಯು ಧಾರಯಂತಿ ಜಗದೇಹಂ ಕಫಪಿತ್ತಾನಿಲಾಸ್ತ್ರಧಾ || ಗಳಿಗೆ ಸದೃತ (ಸು. 82.) ಬಿಡುವದು ಅಧವಾ ಕೊಡುವದು (ರಸಾದಿಗಳ ವೃದ್ಧಿಯಿಂದ ಬಲಕೊಡುವದು), ಎಳ ಕೊಳ್ಳುವದು (ರಸಾದಿಗಳನ್ನು ತೆಗೆದುಕೊಂಡು ಬಲವನ್ನು ಕ್ಷಯಿಸುವದು), ಪಸರಿಸುವದು (ಪ್ರೇರಣ), ಈ ಗುಣಗಳಿಂದ ಕ್ರಮವಾಗಿ ಚಂದ್ರಸೂರ್ಯರು ಮತ್ತು ವಾಯುವು ಈ ಜಗತ್ತನ್ನು ಹ್ಯಾಗೆ ಆಧರಿಸುತ್ತಾರೋ, ಹಾಗೆಯೇ ಕಫ-ಪಿತ್ತ-ವಾಯುಗಳ ಈ ದೇಹವನ್ನು ಆಧ ರಿಸುತ್ತವೆ

ವಾತಪಿತ್ತಶ್ಲೇಷ್ಮಾಣ ಏವ ದೇಹಸಂಭವಹೇತವಃ | ತೈರೇವಾವ್ಯಾಪ ನ್ಮೈರಥೋಮಧ್ಯೋರ್ಧ್ವಸನ್ನಿ ಎಷ್ಟೈ ಶರೀರಮಿದಂ ಧಾರ್ಯತೇ ದೇಹದ ಉತ್ಪತ್ತಿ ಸ್ಥಿತಿ ಲಯಗಳು ಗಾರಮಿವ ಸ್ಫೂಣಾಭಿಸ್ತಿಸೃಭಿರತಶ್ಚ ತ್ರಿಸ್ಧೂಣಮಾಹುರೇಕೇ |ವಾತ ಪಿತ್ತ ಕಫಗಳಿಂದ ಏವ ಚ ವ್ಯಾಪನ್ನಾಃ ಪ್ರಲಯಹೇತವಸ್ತದೇಭಿರೇವ ಶೋಣಿತಚತು ರ್ಧೈಃ ಸಂಭವಸ್ಥಿತಿಪ್ರಲಯೇಷ್ವಪ್ಯವಿರಹಿತಂ ಶರೀರಂ ಭವತಿ | ನರ್ತೇ ದೇಹಃ ಕಫಾದಸ್ತಿ ನ ಪಿತ್ತಾನ್ನ ಪಿತ್ತಾನ್ನ ಚ ಮಾರುತಾತ್ | ಶೋಣಿತಾದಪಿವಾನಿತ್ಯಂ ದೇಹ ಏತೃಸ್ತು ಧಾರ್ಯತೇ || (ಸು. 81.) ವಾತ-ಪಿತ್ತ ಕಫಗಳೇ ಈ ದೇಹಸಂಭವಕ್ಕೆ ಹೇತುಗಳು. ವಾತವು ಶರೀರದ ಕೆಳಗಿನ ಭಾಗದಲ್ಲಿ, ಪಿತ್ತವು ಮಧ್ಯಭಾಗದಲ್ಲಿ, ಕಫವು ಮೇಲಿನ ಭಾಗದಲ್ಲಿ, ಹೀಗೆ ನಿಂತಿರುವ ಅವು (ದೋಷಗಳು) ಕೆಡದೆ ಸಹಜಸ್ಥಿತಿಯಲ್ಲಿರುವಾಗ, ಮನೆಗೆ ಮೂರು ಕಂಬಗಳಂತ ಈ ಶರೀರ ವನ್ನು ಆಧರಿಸುತ್ತವೆ ಆದ್ದರಿಂದ ಕೆಲವರು ಈ ದೇಹವು ಮೂರು ಕಂಬಗಳುಳ್ಳ ಮನೆಯೆಂತ ಹೇಳುತ್ತಾರೆ. ಆ ದೋಷಗಳೇ ಕೆಟ್ಟಾಗ, ದೇಹನಾಶನಕ್ಕೆ ಹೇತುಗಳಾಗುತ್ತವೆ. ಈ ದೋಷ ಗಳು ಮೂರು ಮತ್ತು ರಕ್ತ, ಇವು ನಾಲ್ಕರಿಂದ ಈ ದೇಹವು ಉತ್ಪತ್ತಿಯಲ್ಲಿಯೂ, ಸ್ಥಿತಿ ಯಲ್ಲಿಯೂ, ಲಯದಲ್ಲಿಯೂ, ವಿರಹಿತವಾಗುವದಿಲ್ಲ. ಕಫವೂ, ಪಿತ್ತವೂ, ವಾತವೂ, ರಕ್ತವೂ, ಇಲ್ಲದೆ ದೇಹ ಇಲ್ಲ. ಸದಾಕಾಲದಲ್ಲಿಯೂ ಈ ನಾಲ್ಕರಿಂದ ದೇಹವು ಆಧರಿಸಲ್ಪಟ್ಟದೆ. 3. ವಾತ-ಪಿತ್ತ-ಕಫ ಗಳನ್ನು ಮಿಕ್ಕು ದೇಹದಲ್ಲಿ ರೋಗ ಗಳು ಹುಟ್ಟುವ ದಿಲ್ಲ ಸರ್ವ ಏವ ನಿಜವಿಕಾರಾ ನಾನ್ಯತ್ರ ವಾತಪಿತ್ತ ಕಫೇಭ್ಯೋ ನಿವರ್ತಂತೇ | ಯಧಾ ಶಕುನಿಃ ಸರ್ವಾಂ ದಿಶಮಪಿ ಪರಿ ಪತನ್ ಸ್ವಾಂ ಛಾಯಾಂ ನಾತಿವರ್ತತೇ ತಧಾ ಸ್ವಧಾತು ವೈಷಮ್ಯನಿಮಿತ್ತಾಃ ಸರ್ವವಿಕಾರಾ ವಾತಪಿತ್ತನ್ನಾತಿವರ್ತಂತೇ| (ಚ. 109.)