- 111 -
ಆ}
ಷರಾ 1 ಪಿತ್ತವು ಆಮ ಕೂಡಿಕೊಂಡಿರುವಾಗ ನೀಲ, ಆಮವಿಲ್ಲದಾಗ ಅರಸಿನ ಎಂತ ನಿ ಸಂ ವ್ಯಾ 2 ಸಂಯುಕ್ತವಾಗಿರುವ ಭೂತಗಳು ವಿಯೋಗವಾಗುವಾಗಲೂ, ಪ್ರತ್ಯೇಕವಾದ ಬೊತಗಳು ಸಂಯೋಗವಾಗುವಾಗಲೂ ಬಿಸಿ ಯುಂಟಾಗುತ್ತದೆಂಬದು ಪಾಶ್ಚಾತ್ಯ ರಸಾಯನಶಾಸ್ತ್ರದಲ್ಲಿ ನಿರ್ಣೇವಾದ ಅ೦ತ ಸುಟ್ಟು ತಣ್ಣಗಾದ ಚಿಪ್ಪು ಸುಣ್ಣಕ್ಕೆ ತಣ್ಣೀರು ಕೂಡಿಸಿದರೂ ಮರಳಲಕ್ಕಾರಂಧಿಸುವದು ಎಲ್ಲರಿಗೂ ತಿಳಿದಿದೆಯಷೆ ಹಾಗೆಯೇ ಒಂದು ಕಬ್ಬಿಣದ ತುಂಡಿಗೆ ಕೀಂಬು ಹಿಡಿಯುವಾಗಲೂ ಬಿಸಿಯುಂಟಾಗುತ್ತದೆ, ಆದರೆ ಆ ಬಿಸಿಯು ಅಲ್ಬವಾಗಿ ಬೇಗನೇ ಶಾಂತವಾಗುವದರಿಂದ, ಸ್ಪರ್ಶಕ್ಕೆ ತಿಳಿಯುವುದಿಲ್ಲ. ಶರೀರದಲ್ಲಿ ವಚನ ಎಂಬದು ಮುಖ್ಯವಾಗಿ ದ್ರವ್ಯಗಳ ಸಂಯೋಗ ವಿಯೋಗ ಕೆಲಸಗಳೇ ಆದ್ದರಿಂದ ಪಂಚಾತ್ಮಕ ಸಿತ್ತಕ್ಕೆ ಪಂಚ ಆಗ್ನಿಗಳಿ೦ತ ಹಿಂದು ವೈದ್ಯದಲ್ಲಿ ವಿವರಿಸಿದ್ದು ಆಯುಕ್ತವಾಗಿ ಕಾಣಲಾರದು
19. ಪಿತ್ತವಿಕಾರಾಶ್ಚತ್ವಾರಿಂಶದತ ಊರ್ಧ್ವಂ ವ್ಯಾಖ್ಯಾಸ್ಯನ್ತೇ |ತದ್ಯಧಾ |
ಓಷಶ್ಚ ಪ್ಲೋಷಶ್ಚ ದಾಹಶ್ಚ ದವಧುಶ್ಚ ಧೂಮಕಶ್ಚ ಅಮ್ಲಕಶ್ಚ ವಿದಾಹಶ್ಚ ಅಂತರ್ದಾಹಶ್ಚ ಅಂಸದಾಹಶ್ಚ ಉಷ್ಮಾಧಿಕ್ಯಂ ಚ ಅತಿಸ್ವೇದಶ್ಚಾಂಗ ಗಂಧಶ್ಚ ಅಂಗಾವಯವದರಣಂ ಚ ಶೋಣಿತಕ್ಲೇದಶ್ಚ ಮಾಂಸಕ್ಲೇದಶ್ವ
ತ್ವಗ್ದಾಹಶ್ಚ ಮಾಂಸದಾಹಶ್ಚ ತ್ವಬೌ೬ಂಸದರಣಂ ಚ ಚರ್ಮದರಣಂ ಚ ಪಿತ್ತಮೂಲ ಚ ರಕ್ತಕೋರಾಶ್ಚ ರಕ್ತಎಸ್ಫೋಟಾಶ್ವ ರಕ್ತ ಪಿತ್ತಂ ಚ ರಕ್ತಮಂಡ ವಾದ 40 ಲಾನಿ ಚ ಹರಿತತ್ವಂ ಚ ಹಾರಿದ್ರತ್ವಂ ಚ ನೀಲಿಕಾ ಚ ಕಕ್ಷಾ ಚ ವಿಕಾರಗಳ ಹೆಸರು
ಕಾಮಲಾ ಚ ತಿಕ್ತಾಸ್ಯತಾ ಚ ಪೂತಿಮುಖತಾ ಚ ತೃಷ್ಣಾಯಾ ಆಧಿ ಕ್ಯಂ ಚ ಅತೃಸ್ತಿಶ್ಚ ಆಸ್ಯಪಾಕಶ್ಚ ಗಲಪಾಕಶ್ಚ ಅಕ್ಷಿಪಾಕಶ್ಚ ಗುದ ಪಾಕಶ್ಚ ಮೇಢ್ರಪಾಕಶ್ಚ ಜೀವಾದಾನಂ ಚ ತಮಾಃ ಪ್ರವೇಶಶ್ಚ ಹರಿತಹಾರಿದ್ರ-ಮೂತ್ರನೇತ್ರವರ್ಚಸ್ತ್ವಂ ಚೇತಿ ಚತ್ವಾರಿಂಶತ್ ಪಿತ್ತಎಕಾರಾಃ | ಪಿತ್ತವಿಕಾರಾಣಾಮಪರಿಸಂಖ್ಯೇಯಾನಾಮಾವಿಷ್ಕೃತತಮಾ ವ್ಯಾಖ್ಯಾ
ತಾ ಭವಂತಿ | (ಚ 112.)
40 ಪಿತ್ತ ಎಕಾರಗಳು ಯಾವವೆಂದರೆ -
1. ಸುಡುವದು. 2. ಜ್ವಾಲೆ. 3. ಉರಿ 4. ಬಾಕು.5.ಹೊಗೆತೇಗು. 6. ಹುಳಿ ತೇಗು 7. ಗಂಟಲು ಉರಿ 8 ಒಳಗೆ ಉರಿ 9. ಹೆಗಲು ಉರಿ. 10 ಹೆಚ್ಚು ಬಿಸಿ 11. ಹೆಚ್ಚು ಬೆವರು 12 ಮೈವಾಸನೆ 13. ಅಂಗ ಮತ್ತು ಅವಯವ ಸೀಳಿದಂತಾಗುವದು 14. ರಕ್ತ ನೀರಾಗುವದು 15 ಮಾಂಸ ಕರಗುವದು 16. ಚರ್ಮದ ಉರಿ. 17 ಮಾಂಸದ ಉರಿ 18. ಚರ್ಮದ ಮಾಂಸ ಸೀಳುವದು. 19. ಚರ್ಮ ಸೀಳುವದು. 20. ರಕ್ತಕೋಷ. 21. ರಕ್ತಗುಳ್ಳೆ. 22. ರಕ್ತಪಿತ್ತ. 23. ರಕ್ತಮಂಡಲ. 24. ಹಸರು. 25. ಅರಸಿನ. 26. ಕರಿಸಿಬ್ಬ.27.ಕಂಕುಳಬಾವು. 28. ಕಾಮಲೆ. 29. ಬಾಯಿಕಹಿ. 30. ಬಾಯಿವಾಸನೆ. 31. ಹೆಚ್ಚು ಬಾಯಾರಿಕೆ. 32. ತೃಪ್ತಿಯಿಲ್ಲದೆ ಇರುವದು 33. ಬಾಯಿಹುಣ್ಣು 34. ಗಂಟಲಹುಣ್ಣು. 35 ಬೆಂದ ಕಣ್ಣು 36. ಬೆಂದ ಆಸನ. 37. ಬೆಂದ ಮೇಢ್ರ. 38. ಜೀವದಾನ (ಜೀವ ತೆಗೆಯುವದು). 39. ಕಣ್ಣುಕತ್ತಲೆ. 40. ಹಸರು ಅಧವಾ ಹಳದಿ ವರ್ಣದ ಮೂತ್ರ, ಕಣ್ಣು ಮತ್ತು ವರ್ಚಸ್ಸು ಅಸಂಖ್ಯೇಯವಾದ ಪಿತ್ತವಿಕಾರಗಳಲ್ಲಿ ಇವು ಅತಿ ವಿಶೇಷವಾಗಿ ಕಾಣಿಸಿಕೊಳ್ಳುವ ವಾದ್ದರಿಂದ ವರ್ಣಿಸಲ್ಪಟ್ಟಿವೆ.