ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



       - 110 -       
Sಗ್ನಿರಿತಿ ಸಂಜ್ಞಾ ಸೋಽಭಿಪ್ರಾರ್ಧಿತಮನೋರಧಸಾಧನಕೃದುಕ್ತಃ |

ಯದ್ದೃಷ್ಟ್ಯಾಂ ಪಿತ್ತಂ ತಸ್ಮಿನ್ನಾಲೋಚಕೋಽಗ್ನಿರಿತಿ ಸಂಜ್ಞಾ ಸ್ವರೂಪ ಗ್ರಹಣೇಽಧಿಕೃತಃ | ಯತ್ತು ತ್ವಚಿ ಪಿತ್ತಂ ತಸ್ಮಿನ್ಭ್ರಾಜಕೋಽಗ್ನಿರಿತಿ ಸಂಜ್ಞಾ ಸೋಽಭ್ಯಂಗಪರಿಷೇಕಾವಗಾಹಾವಲೇಪನಾದೀನಾಂ ಕ್ರಿಯಾ ದ್ರವ್ಯಾಣಾಂ ಪಕ್ತಾ ಛಾಯಾನಾಂ ಚ ಪ್ರಕಾಶಕಃ | (ಸು 82-83 ) ಇಲ್ಲಿ ಅಗ್ನಿಯು ಬತ್ತವಲ್ಲದ ಬೇರೊಂದೋ ಅಧವಾ ಪಿತ್ತವೇ ಅಗ್ನಿಯೋ ಎಂಬ ಶಂಕೆ ಉಂಟಾಗುವದು ಅದಕ್ಕ ಹೇಳುವದೇನಂದರೆ ಪಿತ್ತ ಬಿಟ್ಟು ಪ್ರತ್ಯೇಕವಾದ ಅಗ್ನಿಯು ಕಾಣುವದಿಲ್ಲ, ಪಿತ್ತವು ತನ್ನ ಅಗ್ನಿಗುಣದಿಂದ ಸುಡುವದು, ಪಚನ ಮಾಡುವದು, ಮುಂತಾದ ಕೆಲಸಗಳನ್ನು ನಡಿಸುತ್ತಿರುವಾಗ್ಗೆ, ಒಳಗಿನ ಅಗ್ನಿ ಎಂತ ತಿಳಿದು, ಅಗ್ನಿಗುಣ ಕಡಿಮೆಯಾ ದಾಗ್ಗೆ ಅದಕ್ಕ ಸಮಾನವಾದ ದ್ರವ್ಯಗಳ ಉಪಯೋಗದಿಂದಲೂ, ತೀತಿ ಮಾಡುವ ಪದಾರ್ಧಗಳ ಉಪಯೋಗದಿಂದಲೂ, ಅಗ್ನಿಗೆ ಮಾಡುವಂತೆ ಉಪಚಾರವು ಮಾಡಲ್ಪಡುತ್ತದೆ ಆದ್ದರಿಂದಲೂ, ಶಾಸ್ತ್ರಪ್ರಕಾರವೂ, ಪಿತ್ತ ಬಿಟ್ಟು ಬೇರೆ ಅಗ್ನಿಯು ಇರುವದಿಲ್ಲ ಎಂತ ತಿಳಕೊಳ್ಳುತ್ತೇವೆ ಆ ಪಿತ್ತವು ದೃಷ್ಟಿಗೆ ಗೋಚರವಲ್ಲದ ತನ್ನ ವಿಶೇಷ ಗುಣ ದಿಂದ, ಪಕ್ವಾಶಯಕ್ಕೂ ಆಮಾಶಯಕ್ಕೂ ಮಧ್ಯ ನಿಂತು, ಚತುರ್ವಿಧವಾದ ಅನ್ನಪಾನ ಗಳನ್ನು ಪಚನ ಮಾಡಿ, ರಸ, ದೋಷ, ಮೂತ್ರ, ಮತ್ತು ಮಲಗಳನ್ನು ಪ್ರತ್ಯೇಕಿಸುತ್ತದೆ. ಮತ್ತು ಅಲ್ಲಿಯ ಪಿತ್ತವೇ ತನ್ನ ಶಕ್ತಿಯಿಂದ ಶರೀರದ ಇತರ ಪಿತ್ತಸ್ಥಾನಗಳಿಗೂ, ಅಗ್ನಿರೂಪ ವಾದ ಕೆಲಸಮಾಡಿ, ಅನುಗ್ರಹ ಮಾಡುತ್ತದೆ, ಇಂಧಾ ಪಿತ್ತಕ್ಕೆ 'ಪಾಚಕಾಗ್ನಿ' ಎಂತ ಹೆಸರು. ಯಕೃತ್ಪ್ಲೀಹಗಳಲ್ಲಿ ಯಾವ ಪಿತ್ತ ಇರುತ್ತದೋ ಅದಕ್ಕೆ 'ರಂಜಕಾಗ್ನಿ' ಎಂತ ಹೆಸರು. ಅದು ಅನ್ನರಸಕ್ಕ ವರ್ಣವನ್ನು ಕೊಡುತ್ತದೆಂತ ಹೇಳಲ್ಪಡುತ್ತದೆ. ಹೃದಯದಲ್ಲಿ ಯಾವ ಪಿತ್ತ ಇರುತ್ತದೋ, ಅದಕ್ಕೆ 'ಸಾಧಕಾಗ್ನಿ' ಎಂತ ಹೆಸರು, ಅದು ಬಯಸಲ್ಪಟ್ಟ ಮನೋರಧಗಳನ್ನು ಸಾಧಿಸಿಕೊಡುವಂಧಾದ್ದೆಂತ ಹೇಳುತ್ತಾರೆ. ದೃಷ್ಟಿಯಲ್ಲಿ ಯಾವ ಪಿತ್ತ ಇರುತ್ತದೋ, ಅದಕ್ಕೆ 'ಆಲೋಚಕಾಗ್ನಿ' ಎಂತ ಹೆಸರು, ಸ್ವರೂಪವನ್ನು ತಿಳಿಯುವಂಧಾದ್ದು ಅದರ ಕೆಲಸ. ಚರ್ಮದಲ್ಲಿರುವ ಪಿತ್ತಕ್ಕೆ 'ಭ್ರಾಜಕಾಗ್ನಿ' ಎಂತ ಹೆಸರು; ಅದು ಅಭ್ಯಂಗ, ಪರಿಷೇಕ (ಸುರಕೊಂಡು ಸ್ನಾನ), ಅವಗಾಹ (ಮುಳುಗಿ ಸ್ನಾನ) ಅವಲೇಪ, ಇವೇ ಮೊದಲಾದ ಕ್ರಿಯೆ ಗಳಲ್ಲಿ ಉಪಯೋಗಿಸಲ್ಪಟ್ಟ ದ್ರವ್ಯಗಳನ್ನು ಪಚನ ಮಾಡುತ್ತದೆ ಮತ್ತು ದೇಹದ ಛಾಯೆ (ವರ್ಣ)ಗಳನ್ನು ಪ್ರಕಾಶಿಸುತ್ತದೆ. 18 ಪಿತ್ತದ ಪಿತ್ತಂ ತೀಕ್ಷಂ ದ್ರವಂ ಪೂತಿ ನೀಲಂ ಪೀತಂ ತಧೈವ ಚ |ಉಷ್ಣಂ ಕಟುರಸಂ ಚೈವ ಎದಗ್ದಂ ಚಾಮ್ಲಮೇವ ಚ || ಲಕ್ಷಣ (ಸು. 83.) ಪಿತ್ತವು ತೀಕ್ಷ, ದ್ರವ, ನಾತ (ಹಸಿಮಾಂಸದ ವಾಸನೆಯುಳ್ಳ), ನೀಲ, ಅರಸಿನ, ಉಷ್ಣ, ಮತ್ತು ಖಾರರಸ ಉಳ್ಳದ್ದು ಆಗಿರುತ್ತದೆ. ಅದು ವಿರುದ್ದ ಪಾಕವಾದರೆ, ಹುಳಿಯೇ ಆಗುತ್ತದೆ.