- 113 e V ಮಾಪದ್ಯಂತೇ ಯಧಾಗ್ನೌ ವ್ಯಪೋಥೇ ಕೇವಲಮಗ್ನಿಗೃಹಂ ಚ ಶೀತಂ ಭವತಿ ತಿದ್ವತ್ 1 (ಚ. 112-13.) | ಆ ಪಿತ್ತವಿಕಾರಕ್ಕೆ ಸೀ, ಕಹಿ, ಒಗರು, ಶೀತವಾದ ಔಷಧೋಪಚಾರಗಳಿಂದಲೂ ಕಾಲ ಮತ್ತು ಪರಿಮಾಣಗಳ ಕುರಿತು ಪ್ರಮಾಣಗಳಿಗೆ ಲಕ್ಷ್ಯ ಕೊಟ್ಟು, ಸ್ನೇಹನ, ವಿರೇಚನ, ಲೇಪನ, ಪರಿಷೇಕ, ಅಭ್ಯಂಗ, ಮುಳುಗಿ ಸ್ನಾನ, ಇವು ಮುಂತಾದ ಕ್ರಮಗಳಿಂದಲೂ ಉಪ ಕ್ರಮಿಸಬೇಕು. ಆ ಪಿತ್ತವಿಕಾರಗಳನ್ನು ಜಯಿಸುವದಕ್ಕೆ ಸರ್ವ ಉಪಕ್ರಮಗಳಲ್ಲಿ ವಿರೇಚ ನವು ಅತ್ಯಂತ ಪ್ರಧಾನವೆಂತ ವೈದ್ಯರು ಎಣಿಸುತ್ತಾರೆ. ಅದು ಆರಂಭದಿಂದಲೇ ಆಮಾಶಯ ವನ್ನು ಹೊಕ್ಕು, ವಿಕಾರವನ್ನುಂಟುಮಾಡುವ ಪಿತ್ತದ ಮೂಲವನ್ನೇ ತೆಗೆದುಬಿಡುತ್ತದೆ. ಅಲ್ಲಿರುವ ಪಿತ್ತವನ್ನು ಜಯಿಸಿದ್ದಲ್ಲಿ, ಶರೀರದೊಳಗಳ ಪಿತ್ತವಿಕಾರಗಳೆಲ್ಲಾ ಶಾಂತವಾಗುತ್ತವೆ.ಕೋಣೆಯಲ್ಲಿರುವ ಬೆಂಕಿಯನ್ನು ನೂಂದಿಸಿದರೆ, ಇಡೀ ಕೋಣೆಯೇ ಹ್ಯಾಗೆ ಶೀತವಾಗುತ್ತದೋ ಹಾಗೆ. 22. ಕ್ರೋಧ - ಶೋಕ - ಭಯಾಯಾಸೋಪವಾಸ - ವಿದಗ್ಧ - ಮೈಧುನೋಪ ಗಮನ- ಕಟ್ಟಮ್ಲ -ಲವಣ- ತೀಕ್ಪ್ಣೋಷ್ಣ- ಲಘು-ವಿದಾಹಿ.ತಿಲ-ತೈಲ-ಪಿಣ್ಯಾ ಕ- ಕುಲತ್ಧ -ಸರ್ಷಪಾತಸೀ - ಹರಿತಕಶಾಕ - ಗೋಧಾ - ಮತ್ಸ್ಯಾ ಜಾವಿಕ ಮಾಂಸ-ದಧಿ-ತಕ್ರ-ಕೂರ್ಚಿಕಾ-ಮಸ್ತು-ಸೌವೀರಕ-ಸುರಾ ವಿಕಾರಾಮ್ಲ ಫಲಕಟ್ಟರಾರ್ಕಪ್ರಭೃತಿಭಃ ಪಿತ್ತಂ ಪ್ರಕೋಪಮಾಪದ್ಯತೇ | (ಸು.84 ) ಸಿಟ್ಟು, ಶೋಕ, ಭಯ, ಆಯಾಸ, ಉಪವಾಸ, ವಿಷಮಾಗ್ನಿ, ಮೈಧುನ, ಖಾರ, ಹುಳಿ, ಉಪ್ಪು, ತೀಕ್ಷ, ಉಷ್ಣ, ಲಘು, ಸುಡುವ ಸ್ವಭಾವದ್ದು, ಎಳ್ಳು, ಎಳ್ಳೆಣ್ಣೆ, ಹಿಂಡಿ, ಹುರುಳಿ, ಸಾಸಿವೆ, ಅತಸೀಬೀಜ, ಹರಿತಕಶಾಕ, ಉಡುವಿನ ಮಾಂಸ, ಮೀನು, ಆಡಿನ ಮಾಂಸ, ಕುರಿಮಾಂಸ, ಮೊಸರು, ಮಜ್ಜಿಗೆ, ಹಾಲು ಮತ್ತು ಮಜ್ಜಿಗೆ ಬೆರಸಿ ಕಾಯಿಸಿದ್ದು, ಮೊಸರಿನ ನೀರು, ಹುಳಿ ಕಲಗಚ್ಚು, ಎಲ್ಲಾ ಹೆಂಡಗಳು, ಹುಳಿ ಹಣ್ಣುಗಳು, ಬೆಣ್ಣೆ ತೆಗೆಯದ ಮಜ್ಜಿಗೆ, ಬಿಸಿಲು, ಮುಂತಾದ್ದರಿಂದ ಪಿತ್ತವು ಪ್ರಕೋಪಪಡುತ್ತದೆ. ಷರಾ ಇನ್ನೊಂದು ಪಾರದಲ್ಲಿ ಅರ್ಕ' (ಬಿಸಿಲು) ಕಾಣುವದಿಲ್ಲ 23. ತದುಷ್ಣೈರುಷ್ಣಕಾಲೇ ಚ ಮೇಘಾಂತೇ ಚ ವಿಶೇಷತಃ || ಪಿತ್ತಪ್ರಕೋಪ ಮಧ್ಯಾಹ್ನೇ ಚರ್ಧಾರಾತ್ರೇ ಚ ಜೀರ್ಯತ್ತನ್ನೇಚ ಕುಪ್ಯತಿ || (ಸು. 84 ) ಪಿತ್ತವು ಬಿಸಿ ಪದಾರ್ಥಗಳಿಂದಲೂ, ಉಷ್ಣಕಾಲದ (ಗ್ರೀಷ್ಮಋತುವಿನ)ಲ್ಲಿಯೂ, ಮುಖ್ಯ ವಾಗಿ ಮೋಡದ ಅಂತ್ಯದಲ್ಲಿ (ಶರದೃತುವಿನಲ್ಲಿ)ಯೂ, ಮಧ್ಯಾಹ್ನದಲ್ಲಿ ಯೂ, ಅರ್ಧರಾತ್ರಿ ಯಲ್ಲಿಯೂ, ಅನ್ನ ಜೀರ್ಣವಾಗುತ್ತಿರುವಾಗಲೂ ಪ್ರಕೋಪಗೊಳ್ಳುತ್ತದೆ. 24.ಶ್ಲೇಷ್ಮಸ್ದಾನಾನ್ಯತ ಊರ್ಧ್ವಂ ವಕ್ಷ್ಯಾಮಃ | ತತ್ರಾಮಾಶಯಃ ಪಿತ್ತಾ ಶಯಸ್ಯೋಪರಿಷ್ಟಾತ್ತತ್ಟ್ರತ್ಯನೀಕತ್ವಾದೂಧ್ವರ್ಗತಿತ್ವಾತ್ತೇಜಸಶ್ಚಂದ್ರ ಇ
- REDIRECT Target page name