ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ V - 114 - ಕಫಕ್ಕೆ ಮುಖ್ಯಾ ವಾದಿತ್ಯಸ್ಯ ಸ ಚತುರ್ವಿಧಸ್ಯಾಹಾರಸ್ಯಾಧರಃ | ಸ ಚ ತತ್ರೋದಕೈ ಶ್ರಯಸ್ಥಾನವಾದ ರ್ಗುಣೈರಾಹಾರಃಪ್ರಕ್ಲಿನ್ನೋಭಿನ್ನಸಂಘಾತಃಸುಖಜರಶ್ವ ಭವತಿ | ಕಲಸ - (ಸು. 83.) ಶ್ರೇಷ್ಮಸ್ದಾಗಳು ಇನ್ನು ಮುಂದೆ ಹೇಳಲ್ಪಡುತ್ತವೆ. ಆ ಸ್ದಾನಗಳಲ್ಲಿ ಆಮಾಶಯವು ಆದಿತ್ಯನಿಗೆ ಚಂದ್ರನು ಹ್ಯಾಗೋ ಹಾಗೆ ಪಿತ್ತದ ತೇಜೋಗುಣವು ಊರ್ಧ್ವಗತಿದ್ದಾದ್ದರಿಂದ ಪಿತ್ತಾಶಯಕ್ಕೆ ಮೇಲಿನ ಭಾಗದಲ್ಲಿ ಶತ್ರುವಾಗಿ ನಿಂತಿರುತ್ತದೆ, ಮತ್ತು ಚತುರ್ವಿಧವಾದ ಆಹಾರಕ್ಕೆ ಆಧಾರವಾಗಿದೆ. ಅಲ್ಲಿ ದ್ರವಗುಣಗಳಿಂದ ಆಹಾರವು ತೆಳ್ಳಗಾಗಿ, ಒಡೆದು, ಜೀರ್ಣಕ್ಕೆ ಸುಲಭವಾಗುವ ಹಾಗೆ ಪರಿಣಮಿಸುತ್ತದೆ. ಮಾಧುರ್ಯಾತ್ಸಿಚ್ಛಿಲತ್ವಾಚ್ಚ ಪ್ರಕ್ಲೇದಿತ್ವಾತ್ತಧೈವ ಚ | ಆಮಾಶಯೇ ಸಂಭವತಿ ಶ್ಲೇಷ್ಮಾ ಮಧುರಶೀತಲಃ || (ಸು. 88.) ಆಹಾರದ ಸೀಯಿಂದಲೂ,ಪಿಚ್ಛಿಲತ್ವದಿಂದಲೂ, ನೀರನ್ನು ಹೆಚ್ಚಿಸುವ ಗುಣದಿಂದಲೂ, ಆಮಾಶಯದಲ್ಲಿ ಕಫವು ಮಧುರ ಮತ್ತು ಶೀತಲಗುಣಗಳುಳ್ಳದ್ದಾಗುತ್ತದೆ

25. ಸ ತತ್ರಸ್ಥ ಏವ ಸ್ವಶಕ್ತ್ಯಾ ಶೇಷಾಣಾಂ ಶ್ರೇಷ್ಮಸ್ದಾನಾನಂ ಶರೀರಸ್ಯ ಚೋದಕಕರ್ಮಣಾನುಗ್ರಹಂ ಕರೋತಿ | ಉರಸ್ಥಸ್ತ್ರಕಸಂಧಾರಣಮಾ ತ್ಮವೀರ್ಯೇಣಾನುಗ್ರಹಂ ಹೃದಯಾವಲಂಬನಂ ಕರೋತಿ || ಜಿಹ್ವಾಮೂಲಕಂರಸ್ಥೋ ಜಿಹ್ವೇಂದ್ರಿಯಸ್ಯ ಸೌಮ್ಯತ್ವಾತ್ ಸಮ್ಯಗ್ರಸ ಜ್ಞಾನೇ ವರ್ತತೇ | ಶಿರಸ್ಥಃ ಸ್ನೇಹಸಂತರ್ಪಣಾಧಿಕೃತತ್ವಾದಿಂದ್ರಿಯಾ ಣಾಮಾತ್ಮವಿರ್ಯೇಣಾನುಗ್ರಹಂ ಕರೋತಿ | ಸಂಧಿಸ್ದಸ್ತು ಶ್ಲೇಷ್ಮಾ ಸರ್ವಸಂಧಿಸಂಶ್ಲೇಷಾತ್ಸರ್ವಸಂಧ್ಯನುಗ್ರಹಂ ಕರೋತಿ | (ಸು. 83.) ಕಫವು ಆಮಾಶಯದಲ್ಲಿಯೇ ನಿಂತು, ತನ್ನ ಶಕ್ತಿಯಿಂದ ದೇಹದಲ್ಲಿರುವ ಇತರ ಕಫ ಸ್ಥಾನಗಳಿಗೆ ನೀರಾಶ್ರಯ ಕೊಟ್ಟು ಅನುಗ್ರಹಮಾಡುತ್ತದೆ ಎದೆಯಲ್ಲಿರುವ ಕಫವು ತ್ರಿಕ ಎಂಬ ಕುತ್ತಿಗೆಯ ಹಿಂಭಾಗವನ್ನು ಸ್ದಾನದಲ್ಲಿರಿಸುತ್ತದೆ. ಮತ್ತು ತನ್ನ ವೀರ್ಯದಿಂದ ಅನ್ನ ರಸದೊಂದಿಗೆ ಕೂಡಿಕೊಂಡು ಹೃದಯವನ್ನು ಅದರ ಕೆಲಸಮಾಡುತ್ತಿರುವಂತೆ ಆಧರಿಸುತ್ತದೆ. ನಾಲಿಗೆಯ ಬುಡದಲ್ಲಿ ಮತ್ತು ಕಂರದಲ್ಲಿರುವ ಕಫವು ಸೌಮ್ಯಸ್ವಭಾವದ್ದಾದ್ದರಿಂದ ಜಿಹ್ವೇಂದ್ರಿ ಯಕ್ಕೆ ರುಚಿ ತೋರಿಸುವ ಶಕ್ತಿಯನ್ನು ಕೊಡುತ್ತಿರುತ್ತದೆ. ತಲೆಯಲ್ಲಿರುವ ಕಫವು ಜಿಡ್ಡನ್ನು ಕೊಟ್ಟು ತೃಪ್ತಿಪಡಿಸುವ ಅಧಿಕಾರ ಉಳ್ಳದ್ದಾಗಿರುವದರಿಂದ, ತನ್ನ ವೀರ್ಯದಿಂದ ಇಂದ್ರಿಯ ಗಳಿಗೆಲ್ಲಾ ಅನುಗ್ರಹ ಮಾಡುತ್ತದೆ. ಸಂದುಗಳಲ್ಲಿರುವ ಕಫವು ಸರ್ವ ಸಂದುಗಳನ್ನು ಜೋಡಿ ಸುವ ಶಕ್ತಿಯುಳ್ಳದ್ದಾದ್ದರಿಂದ, ಸರ್ವ ಸಂದುಗಳಿಗೂ ಅನುಗ್ರಹ ಮಾಡುತ್ತದೆ ೨೬. ಶ್ಲೇಷ್ಮಾ ಶ್ವೇತೋ ಗುರುಃ ಸ್ನಿಗ್ಧಃ ಪಿಚ್ಛಿಲಃ ಶೀತ ಏವ ಚ | ಮಧುರಸ್ತ್ವ ವಿದಗ್ದಃ ಸ್ಯಾದ್ವಿದಗ್ಧೋ ಲವಣಃ ಸ್ಮೃತಃ || (ಸು. 83.)