ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 117 - ಅ v. ಹಗಲು ನಿದ್ರೆ, ವ್ಯಾಯಾಮವಿಲ್ಲದಿರೋಣ, ಆಲಸ್ಯ, ಸೀ, ಹುಳಿ, ಉಪ್ಪು, ಶೀತ, ಜಿಡ್ಡು, ಭಾರ, ಪಿಚ್ಚಲ (ಅಂಟು), ಅಭಿಷ್ಯಂದಿ (ಅತಿಯಾಗಿ ತ್ಯಾವವನ್ನುಂಟುಮಾಡುವ), ಹಾಯನಕ ಅಕ್ಕಿ, ಯವಧಾನ್ಯ, ನೈಷಧ ಎಂಬ ಧಾನ್ಯ, ಇತ್ಕಟ ಧಾನ್ಯ ಉದ್ದು, ಅಲಸಂದಿ, ಗೋದಿ, ಎಳ್ಳು, ಅಕ್ಕಿಹಿಟ್ಟು, ಇವುಗಳಿಂದ ಮಾಡಿದ ಪದಾರ್ಧಗಳು, ಮೊಸರು, ಹಾಲು, ಕಿಚ್ಚಡಿ, ಪಾಯಸ, ನಾನಾ ವಿಧದ ಕಬ್ಬು, ಜಲದ ಮತ್ತು ಜಲ ಸವಿಾಪದ ಜಂತುಗಳ ಮಾಂಸ ಮತ್ತು ಚರಬಿ, ತಾವರಗಡ್ಡೆ ಮತ್ತು ದಂಟುಗಳು, ಕಶೇರುಹುಲ್ಲು, ಶೃಂಗಾಟಕ (ನೀರಿನಲ್ಲ ಬೆಳೆಯುವ ನೆಗ್ಗಿಲು) ಸೀಯಾದ ಮತ್ತು ಬಳ್ಳಿಯ ಫಲಗಳು, ಭರ್ತಿಯಾದ ಊಟ, ಅತಿ ಯಾದ ಊಟ, ಮುಂತಾದವುಗಳಿಂದ ಕಫಪ್ರಕೋಪ ಉಂಟಾಗುತ್ತದೆ. ಷರಾ ಮಧುರಫಲ ಎಂದರೆ ತಾಳಿ ತೆಂಗು ಮೊದಲಾದವೆಂತಲೂ ವಲ್ಲೀಫಲ ಎಂದರೆ ಸೋರೇಕಾಯಿ ಮುಂತಾದ ವೆಂತಲೂ ನಿ ಸಂ ವ್ಯಾ

31. ಕಫ ಪ್ರಕೋಪಕಾಲ ಸ ಶೀತೈಃ ತೀತಾಕಾಲೇ ಚ ವಸಂತೇ ಚ ವಿಶೇಷತಃ |ಪೂರ್ವಾಹ್ಣೇ ಚ ಪ್ರದೋಷೇ ಚ ಭುಕ್ತಮಾತ್ರೇ ಪ್ರಕುಪ್ಯತಿ ||

  • (ಸು. 85 )

ಆ ಕಫವು ಶೀತವಾದ ದ್ರವಗಳಿಂದಲೂ, ಶೀತಕಾಲದಲ್ಲಿಯೂ, ಮುಖ್ಯವಾಗಿ ವಸಂತ ಋತುವಿನಲ್ಲಿಯೂ, ಹಗಲಲ್ಲಿ ಪೂರ್ವಾಹ್ನದಲ್ಲಿಯೂ, ರಾತ್ರಿಯಲ್ಲಿ ಪ್ರದೋಷಕಾಲದಲ್ಲಿಯೂ, ಉಂಡಮಾತ್ರದಲ್ಲಿಯೂ, ಪ್ರಕೋಪಗೊಳ್ಳುತ್ತದೆ.

32) ರಕ್ತಕ್ಕೆ ಶೋಣಿತಸ್ಯ ಸ್ಥಾನಂ ಯಕೃತ್ಪ್ಲೀಹಾನೌ | ತತ್ರಸ್ಥಮೇವ ಮುಖ್ಯಾಶ್ರಯಸ್ಥಾನ ಶೇಷಾಣಾಂ ಶೋಣಿತಸ್ದಾನಾನಾಮನುಗ್ರಹಂ ಕರೋತಿ |

(ಸು 83 ) . 

ರಕ್ತದ ಸ್ಥಾನವು ಯಕೃತ್ ಪ್ಲೀಹಗಳು, ಅಲ್ಲಿರುವ ರಕ್ತವು ಇತರ ರಕ್ತಸ್ಥಾನಗಳಿಗೆ ಅನುಗ್ರಹ ಮಾಡುತ್ತದೆ.

33.ರಕ್ತದ ಲಕ್ಷಣ ಅನುಷ್ಣಶೀತಂ ಮಧುರಂ ಸ್ನಿಗ್ಧಂ ರಕ್ತಂ ಚ ವರ್ಣತಃ | ಶೋಣಿತಂ ಗುರು ವಿಸ್ರಂ ಸಾದ್ವಿದಾಹಶ್ಚಾಸ್ಯ ಪಿತ್ತವತ್ || (ಸು. 83-84.)

ರಕ್ತವು ಬಿಸಿಯೂ ಅಲ್ಲದೆ ಶೀತವೂ ಅಲ್ಲದೆಯೂ, ಸೀಯಾಗಿಯೂ, ಜಿಡ್ವುಳ್ಳದ್ದಾ ಗಿಯೂ, ವರ್ಣದಲ್ಲಿ ಕೆಂಪಾಗಿಯೂ, ಭಾರವಾಗಿಯೂ, ಹಸಿಮಾಂಸದ ವಾಸನೆಯುಳ್ಳದ್ದಾಗಿಯೂ ಇರುತ್ತದೆ; ಮತ್ತು ಇದಕ್ಕೆ ಪಿತ್ತದಂತೆಯೇ ಸುಡುತ ಉಂಟಾಗುತ್ತದೆ.

34. ಪಿತ್ತಪ್ರಕೋಪಣೈರೇವ ಚಾಭೀಕ್ಣ್ಪಂ ದ್ರವ-ಸ್ನಿಗ್ಧ-ಗುರುಭಿಶ್ಚಾಹಾರೈರ್ದಿ ರಕ್ತಪ್ರಕೋಪಕ್ಕೆ ಕಾರಣ ವಾಸ್ವಪ್ನ-ಕ್ರೋಧಾನಲಾತಪ-ಶ್ರಮಾಭಿಘಾತಾಜೀರ್ಣ-ವಿರುದ್ಧಾಧ್ಯಶನಾ ದಿಭಿರಸೃಕ್ ಪ್ರಕೋಪಮಾಪದ್ಯತೇ | (ಸು. 85.)