ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

• V - 116 ರೊಂದು ಅವಯವವನ್ನು ಸೇರಿ ಮಾಡುವ ಕೆಲಸದಲ್ಲಿ ಅದರ ಲಕ್ಷಣವನ್ನೂ, ತಿಳಿದುಕೊಂಡು, ಬುದ್ದಿವಂತರು ಶ್ಲೇಷ್ಮವಿಕಾರವನ್ನು ನಿಃಸಂದೇಹವಾಗಿ ಗೊತ್ತುಮಾಡುತ್ತಾರೆ. ಹ್ಯಾಗೆಂದರೆ. ಬಿಳುಪು, ಶೈತ್ಯ, ಭಾರತ್ವ, ಮಧುರತ್ವ ಮತ್ತು ಮಾತ್ಸರ್ಯ, ಇವು ಕಫದ ನಿಜ ರೂಪಗಳು; ಹೀಗಿರುವದರಿಂದ, ಅದರ ಕೆಲಸದ ಸ್ವಲಕ್ಷಣವು ಹ್ಯಾಗಾಗುವದಂದರೆ ಆಯಾ ಶರೀ ರಾವಯವವನ್ನು ಹೊಕ್ಕು ಬಿಳುಪು, ಶೈತ್ಯ, ತುರಿಕೆ, ಸ್ಥಿರತ್ವ, ಭಾರತ್ವ, ಪಸೆ, ನಿಶ್ವೇಷ್ಟತೆ, ನಿದ್ರೆ, ದ್ರವಿಸುವದು, ಉಪಾಂಗವಾಗಿ ಬೆಳಿಕೆ, ತಡೆ, ಮಧುರತ್ವ, ವಿಳಂಬನ, ಇವುಗಳನ್ನು ಮಾಡು ವಂಧಾದ್ದು ಕಫದ ಕರ್ಮವಾಗಿರುತ್ತದೆ. ಈ ಕರ್ಮಗಳಿಂದ ಕೂಡಿದಂಧಾದ್ದನ್ನು ಕಫ ವಿಕಾರವೆಂತಲೇ ನಿಶ್ಚಯಿಸತಕ್ಕದ್ದು

29. ತಂ ಕಟುಕ -ತಿಕ್ತ-ಕಷಾಯ - ತೀಕ್ಷ್ಣೋಷ್ಣ-ರೂಕ್ಷೈರುಪಕ್ರಮೈರುಪಕ್ರ ಮೇತ | ಸ್ವೇದನ-ವಮನ-ಶಿರೋವಿರೇಚನ-ವ್ಯಾಯಾಮಾದಿಭಿಃ ಶ್ಲೇಷ್ಮ ಹರೈರ್ಮಾತ್ರಾಂ ಕಾಲಂ ಚ ಪ್ರಮಾಣೀಕೃತ್ಯ | ವಮನಂ ತು ಸರ್ವೋ ಪಕ್ರಮೇಭ್ಯಃ ಶ್ಲೇಷ್ಮಣಿ ಪ್ರಧಾನತಮಂ ಮನ್ಯಂತೇ ಭಿಷಜಃ | ತದ್ಧ‍್ಯಾದಿತ ಏವಾಮಾಶಯಮನುಪ್ರವಿಶ್ಯ ಕೇವಲಂ ವೈಕಾರಿಕಂ ಶ್ಲೇಷ್ಮಮೂಲ ಮಪರ್ಷತಿ |ತತ್ರಾವಜಿತೇ ಶ್ಲೇಷ್ಮಣ್ಯಪಿ ಶರೀರಾಂತರ್ಗತಾಃ ಶ್ಲೇಷ್ಮ ವಿಕಾರಾಃ ಪ್ರಶಾಂತಿಮಾಪದ್ಯಂತೇ ಯಧಾ ಭಿನ್ನೇ ಕೇದಾರಸೇತೌ ಶಾಲಿಯವ-ಷಷ್ಟಿಕಾದೀನ್ಯಭಿಷ್ಯಂದ್ಯಮಾನಾನಿ ಅಂಭಸಾ ಪ್ರಶೋಷಮಾಪ ದ್ಯಂತೇ ತದ್ವದಿತಿ | (ಚ. 113-14 )

  ಅಂಧಾ ಕಫವಿಕಾರಕ್ಕೆ ಖಾರ, ಕಹಿ, ಚೊಗರು, ತೀಕ್ಷ್ಣ, ಉಷ್ಣ, ರೂಕ್ಷಗುಣ ವುಳ್ಳವುಗಳಾದ ಉಪಚಾರಗಳಿಂದಲೂ, ಪರಿಮಾಣಕ್ಕೂ, ಕಾಲಕ್ಕೂ, ಲಕ‍್ಯ್ಷವಿಟ್ಟು, ಬೆವ ರಿಸುವದು, ವಾಂತಿಮಾಡಿಸುವದು, ಶಿರೋವಿರೇಚನ, ವ್ಯಾಯಾಮ, ಮೊದಲಾದ ಕಫಹರ ವಾದ ಕ್ರಮಗಳಿಂದಲೂ ಉಪಕ್ರಮಿಸಬೇಕು. ಶ್ಲೇಷ್ಮವಿಕಾರದಲ್ಲಿ ಸರ್ವ ಉಪಕ್ರಮಗಳೊಳಗೆ ವಾಂತಿಮಾಡಿಸುವದು ಅತಿ ಮುಖ್ಯವಾದದ್ದೆಂಬದು ವೈದ್ಯರ ಮತ. ಅದು ಆದಿಯಲ್ಲಿಯೇ ಆಮಾಶಯವನ್ನು ಹೊಕ್ಕು, ವಿಕಾರವನ್ನುಂಟುಮಾಡುವ ಕಫದ ಮೂಲವನ್ನೇ ಕಿತ್ತುಬಿಡು ತ್ತದೆ; ಅಲ್ಲಿಯ ಕಫವನ್ನು ಜಯಿಸಿದ್ದಲ್ಲಿ, ಶರೀರದೊಳಗಿರುವ ಕಫವಿಕಾರಗಳೆಲ್ಲಾ ಶಮನ ವಾಗುತ್ತವೆ; ಹ್ಯಾಗೆ ಗದ್ದೆಯ ಕಟ್ಟಿಹುಣಿ ಕಡಿದರೆ, ನೀರಿನಿಂದ ಸೊಕ್ಕಿ ಬೆಳೆಯುತ್ತಿರುವ ಭತ್ತ, ಗೋದಿ, ಷಷ್ಟಿಕಾದಿಗಳು ಒಣಗುತ್ತವೋ, ಹಾಗೆ.

30. ದಿವಾಸ್ವಪ್ನಾವ್ಯಾಯಾಮಾಲಸ್ಯ - ಮಧುರಾಮ್ಲ - ಲವಣ - ಶೀತ - ಸ್ನಿಗ್ಧ- ಗುರು - ಪಿಚ್ಛಲಾಭಿಷ್ಯಂದಿ - ಹಾಯನಕ- ಯವಕ-ನೈಷಧೇತ್ಕಟ-ಮಾಷ- ಮಹಾಮಾಷ-ಗೋಧೂಮ-ತಿಲ-ಪಿಷ್ಟವಿಕೃತಿ - ದಧಿ-ದುಗ್ಧ-ಕೃಶರಾ - ಪಾಯಸೇಕ್ಷುವಿಕಾರಾನೂಪೌದಕಮಾಂಸ-ವಸಾ-ವಿಸ-ಮೃಣಾಲ-ಕಶೇ ರುಕ-ಶೃಂಗಾಟಕ-ಮಧುರವಲ್ಲೀಫಲಸಮಶನಾಧ್ಯಶನಪ್ರಭೃತಿಭಿಃ ಶ್ಲೇಷ್ಮಾ ಪ್ರಕೋಪಮಾಪದ್ಯತೇ | (ಸು. 84-85.)