ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e v - 120 - ಉದರರೋಗ, ಅಗ್ನಿದೋಷ, ಆನಾಹ, ವಿಷೂಚಿಕಾ, ಅತಿಸಾರ, ಮೊದಲಾದ ರೋಗಗಳ ನ್ನುಂಟುಮಾಡುತ್ತವೆ. ಮೂತ್ರಾಶಯವನ್ನು ಸೇರಿದಾಗ, ಪ್ರಮೇಹ, ಅಶ್ಮರೀ, ಮೂತ್ರತಡೆ, ಮೂತ್ರದೋಷ, ಇತ್ಯಾದಿ ರೋಗಗಳನ್ನೂ, ಮೇಢ್ರವನ್ನು ಸೇರಿದಾಗ, ನಿರುದ್ದ ಪ್ರಕಾಶ, ಉಪ ದಂಶ, ಶೂಕದೋಷ ಮುಂತಾದ ರೋಗಗಳನ್ನೂ; ಆಸನವನ್ನು ಸೇರಿದಾಗ, ಭಗಂದರ, ಅರ್ಶಸ್ಸು, ಮೊದಲಾದ ರೋಗಗಳನ್ನೂ , ಅಂಡವನ್ನು ಸೇರಿದಾಗ ವೃದ್ದಿ ಯೆಂಬವುಗಳನ್ನೂ; ಕುತ್ತಿಗೆ ಮೇಲೆ ಸೇರಿದಾಗ, ಮೇಲ್ಬಾಗದಲ್ಲಿ ಹುಟ್ಟುವ ರೋಗಗಳನ್ನೂ, ಚರ್ಮ, ಮಾಂಸ, ರಕ್ತ, ಇವುಗಳಲ್ಲಿ ನಿಂತಾಗ, ಕ್ಷುದ್ರರೋಗಗಳನ್ನೂ, ಕಷ್ಠಗಳನ್ನೂ ಮತ್ತು ವಿಸರ್ಪಗಳನ್ನೂ; ಮೇದಸ್ಸಿನೊಳಗೆ ಸೇರಿದಾಗ, ಗ್ರಂಧಿ, ಅಪಚೀ, ಅರ್ಬುದ, ಗಲಗಂಡ, ಅಲಜೀ, ಮುಂತಾದ ರೋಗಗಳನ್ನೂ, ಅಸ್ಥಿಯಲ್ಲಿ ಸೇರಿದಾಗ, ವಿದ್ರಧಿ, ಅನುಶಯಾ , ಮುಂತಾದ ರೋಗಗಳನ್ನೂ; ಪಾದಗಳಲ್ಲಿ ಸೇರಿಕೊಂಡರ, ಶ್ಲೀಪದ, ವಾತಶೋಣಿತ, ವಾತಕಂಟಕ, ಮುಂತಾದ ರೋಗ ಗಳನ್ನೂ, ಸರ್ವಾಂಗಗಳಲ್ಲಿ ವ್ಯಾಪಿಸಿದಾಗ, ಜ್ವರ, ಸರ್ವಾಂಗರೋಗ ಮುಂತಾದವುಗಳನ್ನೂ ಹುಟ್ಟಿಸುತ್ತವೆ. 40. ದೋಷಸಂಸರ್ಗ ಸಂಸರ್ಗೇ ಯೋ ಗರೀಯಾನ್ ಸ್ಯಾದುಪಕ್ರಮ್ಯಃ ಸ ವೈ ಎರುವ ರೋಗ ಭವೇತ್ | ಶೇಷದೋಷಾವಿರೋಧನ ಸನ್ನಿಪಾತೇ ತಥೈವ ಗಳಿಗೆ ಸಾಮಾನ್ಯ ಪ್ರತೀಕಾರ ಕ್ರಮ ಚ || (ಸು. 87 ) ದೋಷಗಳು ಕೂಡಿಕೊಂಡಾಗ್ಗೆ , ಯಾವದು ಹೆಚ್ಚು ಬಲವುಳ್ಳದ್ದಾಗಿದೋ, ಅದಕ್ಕೆ ತಕ್ಕದಾದ, ಮತ್ತು ಮಿಕ್ಕ ಕೋಪಗೊಂಡ ದೋಷಗಳಿಗೆ ವಿರೋಧವಾಗದ, ಚಿಕಿತ್ಸೆಯನ್ನು ಉಪಕ್ರಮಿಸಬೇಕು ಹಾಗೆಯೀ ತ್ರಿದೋಷ ಅಧವಾ ಸನ್ನಿಪಾತದಲ್ಲಿ. 41. ಕ್ಷಯಃ ಪುನರೇಷಾಮತಿಸಂಶೋಧನಾತಿಸಂಶಮನ-ವೇಗವಿಧಾರಣಾ ದೋಷಕ್ಷಯ ಸಾತ್ಮ್ಯನ್ನ ಮನಸ್ತಾಪ-ವ್ಯಾಯಾಮಾನಶನಾತಿಮೈಧುನೈರ್ಭವತಿ | (ಸು. 53.) ಈ ದೋಷಧಾತುಮಲಗಳ ಕ್ಷಯವು, ಅತಿಯಾಗಿ ಸಂಶೋಧನ, ಸಂಶಮನ ಕ್ರಮ ಗಳನ್ನು ನಡಿಸುವದರಿಂದಲೂ, ತೇಗು, ಸೀನು, ಇತ್ಯಾದಿ) ವೇಗಗಳನ್ನು ತಡೆಯುವದ ರಿಂದಲೂ, ಅಹಿತವಾದ ಆಹಾರದಿಂದಲೂ, ಮನಸ್ತಾಪದಿಂದಲೂ, ಮೈದಂಡನೆಯಿಂದಲೂ ಉಪವಾಸದಿಂದಲೂ, ಅತಿ ಮೈಧುನದಿಂದಲೂ ಉಂಟಾಗುತ್ತದೆ. ಷರಾ ಈ ವಚನದಲ್ಲಿ ಕಾಣಿಸಿದ ಕಾರಣಗಳಿಂದ ಕಫ ಪಿತ್ತಗಳ ಕ್ಷಯವಲ್ಲದೆ ವಾತಕ್ಷಯವಾಗಲಾರದಾದ್ದರಿಂದ ಕೆಲವರು ಈ ವಚನವನ್ನೇ ಇಲ್ಲಿ ಬಿಟ್ಟು ಬಿಟ್ಟಿದ್ದಾರೆಂತ ನಿ ಸಂ ವ್ಯಾ ಹೇಳುತ್ತದೆ 42. ತತ್ರ ವಾತಕ್ಷಯೇ ಮಂದಚೇಷ್ಟತಾಲ್ಪವಾಕ್ತ್ವಮಲ್ಪ ಹರ್ಷೋ ಮೂಢ ದೋಷಗಳ ಸಂಜ್ಞತಾ ಚ | ಪಿತ್ತಕ್ಷಯೇ ಮಂದೋಷ್ಮಾಗ್ನಿತಾ ನಿಷ್ಪ್ರಭತ್ವಂ ಚ | ಕ್ಷಯಲಕ್ಷಣಶ್ಲೇಷ್ಮ ಕ್ಷಯೇ ರೂಕ್ಷತಾಂತರ್ದಾಹ ಆಮಾಶಯೇತರಾಶಯಶಿರಸಾಂ ಶೂನ್ಯತಾ ಮತ್ತು ಅವು ಗಳ ಪ್ರತೀಕ ಸಂಧಿಶೈಧಿಲ್ಯಂ ತೃಷ್ಣಾ ದೌರ್ಬಲ್ಯಂ ಪ್ರಜಾಗರಣಂ ಚ | ತತ್ರ ಸ್ವಯೋ ರದ ರೀತಿ ನಿವರ್ಧನದ್ರವ್ಯಾಣ್ಯೀವ ಪ್ರತೀಕಾರಃ | (ಸು. 53.) ಸಿದನ