ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. V - 122 - ರಸಧಾತುವು ಕಡಿಮೆಯಾದಾಗ್ಗೆ ಹೃದಯದಲ್ಲಿ ನೋವು, ನಡುಕು, (ಆಮಾಶಯದಲ್ಲಿ ಅಧವಾ ಮನಸ್ಸಿನಲ್ಲಿ) ಖಾಲಿಭಾವ, ಬಾಯಾರಿಕೆ ಸಹ ಉಂಟಾಗುತ್ತವೆ. ರಕ್ತ ಕಡಿಮೆಯಾದಾಗ್ಗೆ, ಚರ್ಮ ದೊರಗಾಗೋಣ, ಹುಳಿ ಸೀಯ ಇಚ್ಛೆ, ಮತ್ತು ಸಿರಾನಾಡಿಗಳು ಸಡಿಲಾಗೋಣ; ಮಾಂಸಕ್ಷಯದಲ್ಲಿ, ಅಂಡು, ಕೆಪ್ಪಟೆ, ತುಟಿ, ಉಪಸ್ಥ, ತೊಡೆ, ಎದೆ, ಕಂಕುಳು, ಮೊಣಕಾಲ ಒಳಭಾಗ, ಹೊಟ್ಟೆ ಮತ್ತು ಕೊರಳು ಇವುಗಳ ಒಣಗೋಣ, ರೂಕ್ಷತೆ (ಜಿಡ್ಡಿಲ್ಲದಿರೋಣ), ನೋವು, ಸರ್ವಾಂಗ ಬಚ್ಚುವಿಕೆ, ಮತ್ತು ಧಮನಿಗಳು ಸಡಿಲಾಗೋಣ; ಮೇದಃಕ್ಷಯದಲ್ಲಿ ಫ್ಲೀಹ ವೃದ್ಧಿಯಾಗೋಣ, ಸಂದುಗಳಲ್ಲಿ ಬಲಹೀನತೆ, (ಚರ್ಮದಲ್ಲಿ) ರೂಕ್ಷತ್ರ್ವ, ಮತ್ತು ಅತಿ ಸ್ನಿಗ್ಧವಾದ ಪದಾರ್ಥಗಳಲ್ಲಿಯೂ, ಮಾಂಸಗಳಲ್ಲಿಯೂ ಅಭಿಲಾಷೆ; ಎಲುಬಿನ ಕ್ಷಯದಲ್ಲಿ, ಎಲುಬುಗಳ ನೋವು, ಹಲ್ಲುಗಳ ಮತ್ತು ಉಗುರುಗಳ ಭಂಗ, ಮತ್ತು ರೂಕ್ಷಭಾವ; ಮಚ್ಚಾಧಾತುವು ಕ್ಷಯವಾದಲ್ಲಿ, ಶುಕ್ರಾಲ್ಪವಾಗಿರೋಣ, ಗಂಟುಗಳಲ್ಲಿ ತುಂಡಾದ ನೋವು, ಎಲುಬು ಗಳೊಳಗೆ ಸಿಡತ, ಮತ್ತು ಎಲುಬುಗಳಲ್ಲಿ ಬಲಹೀನತೆ, ಶುಕ್ರಕ್ಷಯದಲ್ಲಿ ಶಿಶ್ನದ ಮತ್ತು ಅಂಡಗಳ ನೋವು, ಮೈಧುನಎಷಯದಲ್ಲಿ ಅಶಕ್ತಿ, ಮೆಲ್ಲಗಾಗಿ ಇಂದ್ರಿಯಚಲನೆ, ಮತ್ತು ಚಲಿ ಸಿದ ಶುಕ್ರವು ಅಧವಾ ರಕ್ತವು ಅಲ್ಪವಾಗಿರೋಣ, ಅಧವಾ ಅಲ್ಪವಾದ ರಕ್ತ ಮಿಶ್ರವಾದ ಶುಕ್ರ, ಈ ದೋಷಗಳು ಕಾಣುವವು. ಇವುಗಳಿಗೆ ಸಹ ಆಯಾ ಧಾತುಗಳ ಯೋನಿಯನ್ನು ವೃದ್ಧಿ ಮಾಡತಕ್ಕ ದ್ರವ್ಯಗಳನ್ನುಪಯೋಗಿಸುವದೇ ಪ್ರತೀಕಾರವಾಗಿರುತ್ತದೆ

45. ಪುರೀಷಕ್ಷಯೇ ಹೃದಯಪಾರ್ಶ್ವಪೀಡಾ ಸಶಬ್ದಸ್ಯ ಚ ವಾಯೋರೂರ್ಧ್ವ ಗಮನಂ ಕುಕ್ಷೌ ಸಂಚರಣಂ ಚ | ಮೂತ್ರ ಕ್ಷಯೇ ವಸ್ತಿತೋದೋಲ್ಪ ಮೂತ್ರತಾ ಚ | ಅತ್ರಾಪಿ ಸ್ವಯೋನಿವರ್ಧನದ್ರವ್ಯಾಣ್ಯೇವ ಪ್ರತೀಕಾ ರಃ | ಸ್ವೇದಕ್ಷಯೇ ಸ್ತಬ್ಧರೋಮಕೂಪತಾ ತ್ವಕ್ ಶೋಷಃ ಸ್ಪರ್ಶವೈಗು ಪುರೀಷಾದಿ ಣ್ಯಂ ಸ್ಟೇದನಾಶಶ್ಚ ತತ್ರಾಭ್ಯಂಗಃ ಸ್ವೇದೋಪಯೋಗಶ್ವ ! ಆರ್ತವ ಮಲಗಳ ಕ್ಷಯೇ ಯಧೋಚಿತಕಾಲಾದರ್ಶನವಲ್ಪತಾ ವಾ ಯೋನಿವೇದನಾ ಕ್ಷಯಲಕ್ಷಣ ಮತ್ತು ಅದರ ಚ | ತತ್ರ ಸಂಶೋಧನಮಾಗ್ನೇಯಾನಾಂ ಚ ದ್ರವ್ಯಾಣಾಂ ವಿಧಿವದುಪ ಪ್ರತೀಕಾರಕ್ರಮ ಯೋಗಃ | ಸ್ತನ್ಯಕ್ಷಯೇ ಸ್ತನಯೋಮ್ಲಾನತಾ ಸ್ತನ್ಯಾಸಂಧವೋಲ್ಪ ತಾ ವಾ ತತ್ರ ಶ್ಲೇಷ್ಮವರ್ಧನದ್ರವ್ಯೋಪಯೋಗಃ | ಗರ್ಭಕ್ಷಯೇ ಗರ್ಭಾ ಸ್ಪಂದನಮ ನುನ್ನತಕುಕ್ಷಿತಾ ಚ ತತ್ರ ಪ್ರಾಪ್ತವಸ್ತಿಕಾಲಾಯಾಃ ಕ್ಷೀರ ವಸ್ತಿಪ್ರಯೋಗೋ ಮೇಧ್ಯಾನ್ನೋಪಯೋಗಶ್ವೇತಿ | (ಸು 53-54.) ಪುರೀಷವು ಕ್ಷಯವಾದಾಗ್ಗೆ, ಹೃದಯದಲ್ಲಿಯೂ, ಪಕ್ಕಗಳಲ್ಲಿಯೂ ಪೀಡೆ, ವಾಯು ವು ಶಬ್ದದೊಡನೆ ಊರ್ಧ್ವವಾಗಿ ಹೋಗುವದು ಮತ್ತು ಹೊಟ್ಟೆಯಲ್ಲಿ ಸಂಚರಿಸುವದು, ಮೂತ್ರವು ಕ್ಷಯವಾದಾಗ್ಗೆ, ಮೂತ್ರಾಶಯದಲ್ಲಿ ನೋವು ಮತ್ತು ಮೂತ್ರ ಅಲ್ಪವಾಗು ವದು. ಈ ಎರಡು ದೋಷಗಳಿಗೂ ಸ್ವಯೋನಿವರ್ಧಿಸತಕ್ಕ ದ್ರವ್ಯಗಳನ್ನು ಸೇವಿಸುವದೇ ಪ್ರತೀಕಾರವಾಗಿರುತ್ತದೆ. ಬೆವರು ಕ್ಷಯವಾದಾಗ್ಗೆ ರೋಮಗುಂಡಿಗಳು ಸ್ತಬ್ಢವಾಗಿರುವದು, ಚರ್ಮ ಒಣಗಿರುವದು, ಸ್ಪರ್ಶಜ್ಞಾನ ವಿಕಾರವಾಗಿರುವದು, ಮತ್ತು ಬೆವರದೆ ಇರೋಣ, ಈ ದೋಷಗಳು ಕಾಣುವವು. ಇದಕ್ಕೆ ಅಭ್ಯಂಗಮಾಡಿಸುವದು ಮತ್ತು ಬೆವರಿಸುವ ಉಪಕ್ರಮ