ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

-

                                    - 127 -                         ಅv

- 55. ವಸಾದೋಷ

    ಗಳ ಮೂರು          ತತ್ಕಷಾಯ- ತಿಕ್ತ - ಶೀತ - ರೂಕ್ಷ- ವಿಷ್ಟಂಭಿ-ವೇಗವಿಘಾತ-ವ್ಯವಾಯ- 
     ಎಧಗಳು            ವ್ಯಾಯಾಮ-ವ್ಯಾಧಿಕರ್ಷಣೈಶ್ಚ ವಿಕ್ರಿಯತೇ | ತಸ್ಯಾಪಿ ಪಾರುಷ್ಯವರ್ಣ      
   ಮತ್ತು ಅವು            ಭೇದತೋದನಿಷ್ಪ್ರಭತ್ವನಿ ವಿಸ್ರಂಸನೇ ಭವಂತಿ | ಕಾರ್ಶ್ಯ೦ ಮಂದಾಗ್ನಿ 
  ಗಳಿಗೆ ಪರಿ              ತಾಧಸ್ತಿರ್ಯಕು ದೃಷ್ಟ್ಯಗ್ನಿಒಲಹಾನ್ಯನಿಲಪ್ರಕೋಪ   
    ಹಾರಿ               ಮರಣಾನಿ  ಕ್ಷಯೇ ತತ್ರಾಪಿ ಸ್ನೇಹಪಾನಾಭ್ಯಂಗಪ್ರದೇಹಪರಿಷೇಕಸ್ನಿಗ್ಧ                    
                       ಲಘುನ್ನಾನಿ ಕ್ಷಯ ವಿದಧೀತ | (ಸು. 56 )
ಆ ವಸೆಯು, ಚೊಗರು, ಕಹಿ, ಶೀತ, ರೂಕ್ಷ, ವಿಷ್ಟಂಭಿ ಸ್ವಭಾವದ ಆಹಾರಗಳಿಂದಲೂ, ವೇಗವನ್ನು ತಡೆಯುವದರಿಂದಲೂ, ಪುರುಷಸಂಗದಿಂದಲೂ, ಮೃದಂಡನೆಯಿಂದಲೂ, ವ್ಯಾಧಿ , ಪೀಡೆಯಿಂದಲೂ, ವಿಕಾರ ಹೊಂದುತ್ತದೆ ಅದು ಸ್ರವಿಸಿ ನಷ್ಟವಾದಾಗ್ಗೆ, ದರಗುಮ್ಮ, ವರ್ಣಭೇದ, ನೋವು, ಪ್ರಭೆಯಿಲ್ಲದಿರೋಣ, ಈ ಲಕ್ಷಣಗಳು ಕಾಣುವವು. ಕೃಶತೆ, ಅಗ್ನಿ ಮಂದತೆ, ಅಡ್ಡವಾಗಿಯೂ ಅಧೋಮುಖವಾಗಿಯೂ 
 ಸ್ರವಿಸಿಹೋಗೋಣ, ಇವು ವಸೆ ಕೆಟ್ಟದರ ಲಕ್ಷಣಗಳು ದೃಷ್ಟಿ, ಅಗ್ನಿ, ಬಲ, ಇವುಗಳ ಹಾನಿ, ವಾಯುಪ್ರಕೋಪ, ಮತ್ತು ಮರಣ, ಇವು ವಸೆಯು ಕ್ಷಯವಾದ ಲಕ್ಷಣಗಳು ಆಗಲೂ ತೈಲಾದಿ ಸ್ನೇಹಗಳ ಪಾನಾಭ್ಯಂಗ ನಗಳಿಂದಲೂ, ಲೇಪಗಳಿಂದಲೂ, ಸ್ನಾನಗಳಿಂದಲೂ, ಜಿಡ್ಡುಳ್ಳ ಮತ್ತು ಲಘುವಾದ ಆಹಾರ ಗಳಿಂದಲೂ ವಸೆಯ ಕ್ಷಯವನ್ನು ಉಪಚರಿಸಬೇಕು

56. ದೋಷಧಾತುಮಲಕ್ಷೀಣೋ ಒಲಕ್ಷೀಣೋSಪಿ ವಾ ನರಃ | ಸ್ವಯೋನಿ

ಕ್ಷೀಣತೆಯಲ್ಲಿ       ವರ್ಧನಂ ಯತ್ನದನ್ನಪಾನಂ ಪ್ರಕಾಂಕ್ಷತಿ || ಯ ದ್ಯ ಹಾರಜಾತಂ ಹಿ  ಕ್ಷೀಣ:        ಅನ್ನಪಾನ           ಕ್ಷೀಣ: ಪ್ರಾರ್ಧಯತೇ ನರಃ | ತಸ್ಯ ತಸ್ಯ ಸ ಲಾಭೇ ತು ತಂ ತಂ 
              ಕ್ಷಯಮವೋಹತಿ || ಯಸ್ಯ ಧಾತುಕ್ಷಯಾದ್ವಾಯುಃ ಸಂಜ್ಞಾ ಕರ್ಮ ಚ ನಾಶಯೇತ್ | 
              ಪ್ರಕ್ಷೀಣಂ ಚ ಒಲಂ ಯಸ್ಯ ನಾಸೌ ಶಕ್ಯ  ಶ್ಚಿಕಿತ್ಸಿ ತುಮ್ ||
             (ಸು. 56 ) .  
              ದೋಷಧಾತುಮುಲಗಳ ಕ್ಷೀಣತೆ ಹೊಂದಿದ ಅಧವಾ ಬಲಕ್ಷೀಣವಾದ ಮನುಷ್ಯನು ಸ್ವಯೋನಿ (ಅಂದರೆ ಕ್ಷೀಣವಾದ ದೋಷ-ಧಾತು-ಮಲ ಅಧವಾ ಬಲ) ವೃದ್ಧಿಸತಕ್ಕದ್ದಾದ ಅನ್ನಪಾನವನ್ನು ಅಪೇಕ್ಷಿಸುತ್ತಾನೆ ಯಾವ ಯಾವ ಆಹಾರ ಸಮೂಹವನ್ನು ಕ್ಷೀಣವಾದ ಮನುಷ್ಯನು ಅಪೇಕ್ಷಿಸುತ್ತಾನೋ, ಅದದು ಲಭ್ಯವಾದರೆ ಅದು ಆಯಾ ಕ್ಷಯವನ್ನು ಪರಿಹರಿಸುತ್ತದೆ. ಯಾವನ ಧಾತ್ರಕ್ಷಯದಿಂದ ವಾಯುವು ಸಂಜ್ಞಾ ಕರ್ಮ (ಎಚ್ಚರ)ವನ್ನು ನಾಶಮಾಡುತ್ತದೋ ಅಂಧವನೂ, ಯಾವನ ಬಲವು ಬಹಳವಾಗಿ ಕ್ಷೀಣವಾಗಿದೆಯೋ ಅವನೂ ಚಿಕಿತ್ಸೆಗೆ ಶಕ್ತನಲ್ಲ

57. ದೋಷಧಾತು ದೋಷಃ ಪ್ರಕುಪಿತೋ ಧಾತೂನ್ ಕ್ಷಪಯತ್ಯಾತ್ಮತೇಜಸಾ | ಇದ್ದಃ ಮಲಗಳ ಪರಿ ಸ್ವತೇಜಸಾ ವಹಿ ರುಖಾ ಗತಮಿವೋದಕಂ || ವೈಲಕ್ಷಣ್ಯಾಚ್ಛ ರೀರಾಣಾ ಮಾಣದ ಮಸ್ಥಾಯಿತ್ತಾಧವ ಚ | ದೋಷಧಾತಮಲಾನಾಂ ತು ಪರಿಮಾಣಂ ಎಚಾರ ನ ವಿಚಾರ ವಿದ್ಯತೇ || ಏಷಾಂ ಸಮತ್ವಂ ಯಚ್ಚಾಪಿ ಭಷಗಿ ರವಧಾರ್ಯತೇ |