ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 128 - ನ ತತ್ಸ್ವಾಸ್ಥ್ಯಾದೃತೇ ಶಕ್ಯಂ ವಕ್ತುಮನ್ಯೇನ ಹೇತುನಾ || ದೋಷಾ ದೀನಾಂ ತ್ವಸಮತಾಮನುಮಾನೇನ ಲಕ್ಷಯೇತ್ | ಅಪ್ರಸನ್ನೇಂದ್ರಿ ಯಂ ವೀಕ್ಷ್ಯ ಪುರುಷಂ ಕುಶಲೋ ಭಿಷಕ್ || (ಸು. 58.)

ಕೋಪಗೊಂಡ (ವಾತಾದಿ) ದೋಷವು ತನ್ನ ಶಕ್ತಿಯಿಂದ (ರಸಾದಿ) ಧಾತುಗಳನ್ನು, ಉರಿಯುವ ಬೆಂಕಿಯು ತನ್ನ ಶಕ್ತಿಯಿಂದ ಗಡಿಗೆಯೊಳಗಣ ನೀರನ್ನು ಹ್ಯಾಗೋ ಹಾಗೆ, ಬತ್ತಿ ಸುತ್ತದೆ. ಶರೀರಗಳು ಬೇರೆ ಬೇರೆ ಲಕ್ಷಣಗಳುಳ್ಳವಾಗಿರುವದರಿಂದಲೂ, ಒಂದೇ ಸ್ಥಿತಿಯಲ್ಲಿರ ತಕ್ಕವಲ್ಲವಾದ್ದರಿಂದಲೂ ದೋಷಗಳ, ಧಾತುಗಳ ಮತ್ತು ಮಲಗಳ ಪರಿಮಾಣವೂ ತಿಳಿ ಯಲು ಸಾಧ್ಯವಿಲ್ಲ. ಅವುಗಳು ಸಮವಾಗಿರುತ್ತವೆಂತ ವೈದ್ಯನು ತಿಳಿಯುವದು ಆಯಾ ಮನುಷ್ಯನ ಸ್ವಸ್ಥಸ್ಥಿತಿಯ ಮೇಲೆಯಲ್ಲದೆ ಬೇರೆ ಕಾರಣದಿಂದ ಹೇಳಲು ಶಕ್ಯವಲ್ಲ. ಮನುಷ್ಯನ ಇಂದ್ರಿಯಗಳು ಪ್ರಸನ್ನವಾಗಿರದ್ದನ್ನು ನೋಡಿ ಕುಶಲನಾದ ವೈದ್ಯನು ದೋಷಾದಿಗಳು ಸರಿ ಯಿಲ್ಲವೆಂಬದನ್ನು ಊಹೆಯಿಂದ ಗೊತ್ತು ಮಾಡತಕ್ಕದ್ದು.