ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 137 - VIIನೇ ಅಧ್ಯಾಯ ಪ್ರಸಿದ್ದವಾದ ರೋಗಗಳ ಹೆಸರು ಮತ್ತು ಭೇದಗಳು ರೋಗಾಣಾಂ ಗಣನಾ ಪೂರ್ವಂ ಮುನಿಭಿರ್ಯಾ ಪ್ರಕೀರ್ತಿತಾ | ಮಯಾತ್ರ ಪೋಚೈತೇ ಸೈವ ತದ್ಬೇದಾ ಬಹವೋ ಮತಾಃ || ೧ || ಪಂಚವಿಂಶತಿರುದ್ದಿಷ್ಟಾ ಜ್ವರಾಸ್ತದ್ಬೇದ ಉಚ್ಯತೇ | ಪೃಧಗ್ದೋಪೈಸ್ತ್ರಯೋದ್ವಂದ್ವಭೇದೇನ ತ್ರಿವಿಧಃ ಸ್ಮೃತಃ ||೨ || ಏಕಶ್ಚ ಸನ್ನಿಪಾತೇನ ತದ್ಬೇದಾ ಬಹವಃ ಸ್ಮೃತಾಃ | ಪ್ರಾಯಶಃ ಸನ್ನಿಪಾತೇನ ಪಂಚ ಸ್ಯುರ್ವಿಷಮಜ್ವರಾ:||೩|| ಸಂತತಃ ಸತತಶ್ಚೈವ ಅನ್ಯೇದ್ಯುಷ್ಕಸ್ತೃತೀಯಕಃ | ಚಾತುರ್ಧಕಶ್ಚ ಪಂಚೈತೇ ಕೀರ್ತಿತಾ ವಿಷಮಜ್ವರಾಃ ||೪|| ಪೂರ್ವದಲ್ಲಿ ಮುನಿಗಳಿಂದ ವಿವರಿಸಲ್ಪಟ್ಟ ರೋಗಗಳ ಗಣನೆಯು ಇಲ್ಲಿ ಹೇಳಲ್ಪಡುತ್ತದೆ. ಅವುಗಳ ಛೇ ಭೇದಗಳು ಬಹಳವಾಗಿವೆ ಎಂತ ತಿಳಿದಿದ್ದಾರೆ 1 ಜ್ವರಗಳು (Fevers) 25 – ವಾತ, ಪಿತ್ತ, ಕಫ ದೋಷಗಳಿಂದ 3, ಎರಡೆರಡು ಕೂಡಿ 3, ಬಹು ಭೇದಗಳುಳ್ಳ ಸನ್ನಿಪಾತದಿಂದ (ಮೂರೂ ಕೂಡಿ) 1, ಹೀಗೆ 7, ಸಂತತ (ಬಿಡದೆ ಬರುವದು), ಸತತ (ಹಗಲು ಒಂದು ಬಿಟ್ಟು ಪುನಃ ರಾತ್ರಿ ಒರುವದು), ಅನ್ಯೇದ್ಯುಷ್ಕ(ಒಂದು ಹೊತ್ತು ಬಿಟ್ಟು ಬರುವದು), ತೃತೀಯಕ (ದಿನ ಬಿಟ್ಟು ಬರುವದು), ಚಾತುರ್ಧಕ (2 ದಿನ ಬಿಟ್ಟು ಬರುವದು), ಹೀಗೆ 5 ವಿಷಮಜ್ವರಗಳು (Malarial fevers), ಇವು ಹೆಚ್ಚಾಗಿ ಸನ್ನಿಪಾತದಿಂದ ಉಂಟಾಗತಕ್ಕವು

ತಧಾಗಂತುಜ್ವರೋಪ್ಯೇಕಸ್ತ್ರಯೋದಶವಿಧೋ ಮತಃ | ಅಭಿಚಾರಗ್ರ ಹಾವೇಶಶಾಪೈರಾಗಂತುಕಸ್ತ್ರಿಧಾ || ೫ || ಶ್ರಮಾಚ್ಛೇದಾತ್ ಕ್ಷತಾದ್ದಾಹಾಚ್ಚತುರ್ಧಾ ಘಾತಚೋಜ್ವರಃ | ಕಾಮಾಧೀತೇ: ಶುಚೋ ರೋಷಾದ್ವಿಷಾದೌಷಧಗಂಧತಃ || ೬ || ಅಭಿಷಂಗಜ್ವರಾಷಟ್ ಸ್ಯುರೇವಂ ಜ್ವರ ವಿನಿಶ್ಚಯಃ | ಆಗಂತುಜ್ವರ 13 ವಿಧ, ಅಭಿಚಾರ (ಮಾಟಾದಿ), ಗ್ರಹಾವೇಶ, ಶಾಪದಿಂದುಂಟಾದವು 3; ಶ್ರಮದಿಂದ, ಕಡಿಯುವದರಿಂದ, ಪೆಟ್ಟಿನಿಂದ, ಅಥವಾ ಹುಣ್ಣಿ ಸಿಂದ, ಉರಿ ತಾಗುವದರಿಂದ, ಇವು 4 ಘಾತಜ, ಕಾಮದಿಂದ, ಭಯದಿಂದ, ಶೋಕದಿಂದ, ಸಿಟ್ಟಿನಿಂದ, ವಿಷದಿಂದ, ಔಷಧದ ವಾಸನೆಯಿಂದ, ಇವ 6 ಅಭಿಷಂಗ ಜ್ವರ, ಹೀಗೆ 13 ಆಗಂತು ಸೇರಿ 26. ಅತಿಸಾರ ಪೃಧಗ್ದೋಷೈ: ಸಮಸ್ತೈಶ್ಚ ಶೋಕಾದಾಮಾದ್ಬಯಾದಪಿ || ೭ || ಅತಿಸಾರಃ ಸಪ್ತಧಾ ಸ್ಯಾದ್