ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 215 -- XI ಶರೀರಕ್ಕೆ ತೈಲಾಭ್ಯಂಗಮಾಡುವದರಿಂದ ಮೈ ಮೃದುವಾಗಿ, ಧಾತುಗಳು ಪುಷ್ಟಿಯಾಗು ವವು; ನಿರ್ಮಲತೆ, ವರ್ಣ, ಮತ್ತು ಬಲ ವೃದ್ಧಿಯಾಗುವವು; ಕಫವಾತಗಳು ಶಮನ ವಾಗುವವು. ಷರಾ ಸ್ಪರ್ಶಣಶಕ್ತಿಯು ಅಧಿಕವಾಗುವದಾಗಿ ಸಹ ಚ ಶಿರೋಗತಾಂಸ್ತಧಾ ರೋಗಾನ್ ಶಿರೋಭ್ಯಂರ್ಗೋಪಕರ್ಷತಿ | ಕೇಶಾನಾಂ ಮಾರ್ದವಂ ದೈರ್ತ್ಯ೦ ಬಹುತ್ತಂ ಬೃಗ್ಗ ಕೃಷ್ಣ ತಾಂ || ತಲೆ ಅಭ್ಯಂಗ ಕರೋತಿ ಶಿರಸಸ್ಯಪ್ರಿಂ ಸುತ್ತಕ್ಕಮಪಿ ಚಾನನಂ | ಸಂತರ್ಪಣಂ ಚೇಂದ್ರಿಯಾಣಾಂ ಶಿರಸಃ ಪ್ರತಿಪೂರಣಂ || ೧ ೧

ಸದೈವ ಶೀತಲಂ ಜಂತೋರ್ಮೂ್ರ ತೈಲಂ ಪ್ರದಾಪಯೇತ್ | (ಸು. 502 ) ತಲೆ ಮೇಲೆ ತೈಲ ಇಟ್ಟುಕೊಳ್ಳುವ ಶೀಲದಿಂದ ಶಿರೋಗತವಾದ ರೋಗಗಳು ದೂರ ಹೋಗುವವಲ್ಲದೆ, ಕೂದಲುಗಳು ಮೃದು, ಕಪ್ಪು, ಸ್ನಿಗ್ಧ, ಉದ್ದ, ಮತ್ತು ಹೆಚ್ಚು ಆಗುವವು; ತಲೆಯಲ್ಲಿ ಸಮಾಧಾನ ಮತ್ತು ಬಲ ಉಂಟಾಗುವವು, ಇಂದ್ರಿಯಗಳು ತೃಪ್ತಿಗೊಳ್ಳುವವು; ಮತ್ತು ಮುಖದ ಚರ್ಮವು ಪ್ರಸನ್ನತೆಯನ್ನು ಹೊಂದುವದು. ಯಾರಿಗಾದರೂ ತಲೆಗಿಡುವ ತೈಲವು ಯಾವಾಗಲೂ ತಣ್ಣಗಾಗಿರಬೇಕು. ಷರಾ ಸಿತ್ಯದ ತಲೆ ಮೇಲೆ ಎಣ್ಣೆ ಇಟ್ಟು ಕೊಳ್ಳುವದರಿಂದ ಮೇಲಿನ ಗುಣಗಳೂ, ನಿದ್ರಾಲಾಭವೂ, ಸುಖವೂ ಉಂಟಾಗುವವು ಎಂತ ಚ (ಪ್ರ 31 ) . 9. ಕರ್ಣಪೂರಣ ಹನುಮನ್ಯಾಶಿರಃಕರ್ಣಶೂಲಪ್ಪ ಕರ್ಣಪೂರಣಂ | (ಸು. 502) ಕಿವಿಯೊಳಗೆ ತೈಲವನ್ನು ತುಂಬಿಸುವದರಿಂದ ದವಡೆ, ಮನ್ನಾ (ಕುತ್ತಿಗೆಯ ಹಿಂಬದಿ), ತಲೆ, ಕಿವಿ, ಈ ಭಾಗಗಳ ಶೂಲೆಯು ನಾಶವಾಗುವದು. ಷರಾ ನಿತ್ಯದ ಕಿವಿಯೊಳಗೆ ತೈಲ ಹಾಕುವದರಿಂದ ಮೇಲಿನ ಗುಣಗಳು ಮಾತ್ರವಲ್ಲದೆ, ಕಿವುಡತನ ಉಂಟಾ ಗುವದಿಲ್ಲವಾಗಿ ಚ (ಪು 31 ) . ಕರ್ಣಪೂರಣ ವಿಧಿಗೆ ಮುಂದೆ XXIIIನೇ ಅಧ್ಯಾಯ ನೋಡಿರಿ 10. ಸೇಕಃ ಶ್ರಮರ್ಥ್ಯ ನಿಲಹೃದ್ದಗ್ನಸಂಧಿಪ್ರಸಾಧಕಃ | ಕ್ಷತಾಗ್ನಿದಲ್ದಾಭಿಹತವಿ೯ಷ್ಟಾನಾಂ ರುಜಾಪಹಃ || ಸ್ನೇಹಧಾರೆ ಜಲಸಿಕ್ತಸ್ಯ ವರ್ಧಂತೇ ಯಧಾ ಮೂಲೇಲೆ೦ಕುರಾಸ್ಕರೋ? | ಮತ್ತು ಸ್ನೇಹ ಹಚ್ಚಿ ಸ್ನಾನ ತಧಾ ಧಾತುವಿವೃದ್ಧಿರ್ಹಿ ಸ್ನೇಹಸಿಕಸ್ಯ ಜಾಯತೇ || ಸಿರಾಮುನೈರೋಮಕೂಪೈರ್ಧಮನೀಭಿಶ್ವ ತರ್ಪಯನ್ | ಶರೀರಬಲಮಾಧ ಯುಕ್ತಸ್ನೇಹೋವಗಾಹನೇ || (ಸು. 502) ಸರ್ವಾಂಗಧಾರೆಯು ಶ್ರಮಹರ, ವಾತಹರ, ಒಡಕನ್ನು ಕೂಡಿಸುವ ಶಕ್ತಿಯುಳ್ಳದ್ದು; ಮತ್ತು ಗಾಯಪಟ್ಟಿದರ, ಅಗ್ನಿಯಿಂದ ಸುಡಲ್ಪಟ್ಟಿದರ, ಹೊಡೆಯಲ್ಪಟ್ಟಿದರ, ಮತ್ತು ಅರಚಿದರ ನೋವನ್ನು ಪರಿಹರಿಸುವದು. ಮರನ ಬುಡಕ್ಕೆ ನೀರನ್ನು ಹೊಯಿದರೆ, ಹ್ಯಾಗೆ ಚಿಗುರುಗಳು