ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XI - 216 - ಬೆಳೆಯುತ್ತವೋ, ಹಾಗೆ ಸ್ನೇಹಧಾರೆ ಮಾಡಿಸಿಕೊಂಡವನ ಧಾತುಗಳು ವೃದ್ಧಿಯಾಗುವ ದಕ್ಕೆ ಸಂದೇಹವಿಲ್ಲ. ಸ್ನಾನಕಾಲದಲ್ಲಿ ಹಚ್ಚಿಕೊಂಡ ಸ್ನೇಹವ ಸಿರೆಗಳ ಮುಖದಿಂದಲೂ, ರೋಮಕೂಪಗಳಿಂದಲೂ, ಧಮನಿಗಳಿಂದಲೂ, ಶರೀರವನ್ನು ತೃಪ್ತಿಗೊಳಿಸಿ, ಬಲವನ್ನುಂಟು ಮಾಡುತ್ತದೆ. ಗಳಿಗೆ ತಲ ವಿಚಾರ 11, ಅಭ್ಯಂಗಾದಿ ತತ್ರ ಪ್ರಕೃತಿಸಾತ್ಮರ್ತುದೇಶದೋಷವಿಕಾರವಿತ್ |

  • ತೈಲಂ ಮೃತಂ ವಾ ಮತಿಮಾನ್ ಯುಂಜ್ಯಾದಭಂಗ

ಸೇಕಯೋಃ || (ಸು. 503.) ಅಭ್ಯಂಗಕ್ಕೂ ಧಾರೆಗೂ, ಬುದ್ದಿವಂತನು ತನ್ನ ಪ್ರಕೃತಿ ಮತ್ತು ಸಾಕ್ಷ್ಯವನ್ನೂ, ಋತು ವನ್ನೂ, ದೇಶವನ್ನೂ, ಮತ್ತು ದೋಷಗಳ ವಿಕಾರಗಳನ್ನೂ ತಿಳಿದು, ತೈಲವನ್ನು ಅಥವಾ ತುಪ್ಪ ವನ್ನು ಉಪಯೋಗಿಸತಕ್ಕದ್ದು. 12. ಕೇವಲಂ ಸಾಮದೋಷೇಷು ನ ಕಧಂಚನ ಯೋಜಯೇತ್ | ತರುಣರ್ಯಜೀರ್ಣೀ ಚ ನಾಭ್ಯಕ್ರ ಕಧಂಚನ || ಅವ್ಯಂಗಾದಿ ತಧಾ ವಿರಿಕೊ ವಾಂತಶ್ಚ ನಿರೂಢ ಯಶ್ವ ಮಾನವಃ | ಗಳಿಗೆ ಅಯೋ ಗ್ಯರು | ಪೂರ್ವಯೋಃ ಕೃಛತಾ ವ್ಯಾಧೇರಸಾಧ್ಯತ್ವ ಮಧಾಪಿ ವಾ || ಶೇಷಾಣಾಂ ತದಹಃ ಪ್ರೋಕ್ತಾ ಅಗ್ನಿಮಾಂದ್ಯಾದಯೋ ಗದಾಃ | ಸಂತರ್ಪಣಸಮುತ್ಥಾನಾಂ ರೋಗಾಣಾಂ ನೈವ ಕಾರಯೇತ್ || (ಸು. 502.) ಆಮಸಂಬಂಧವಾದ ದೋಷಗಳಲ್ಲಿ ಬರೇ ಎಣ್ಣೆಯನ್ನು, ಅಧವಾ ಬರೇ ತುಪ್ಪವನ್ನು ಹಾಗೂ ಉಪಯೋಗಿಸಬಾರದು, ಮತ್ತು ತರುಣಜ್ವರವುಳ್ಳವನಿಗೂ, ಜೀರ್ಣವಿಲ್ಲದವ ನಿಗೂ ಅಭ್ಯಂಗವನ್ನು ಯಾವ ವಿಧವಾಗಿಯೂ ಮಾಡಿಸಬಾರದು. ಹಾಗೆಯೇ ಭೇದಿ ಮಾಡಿಸಿಕೊಂಡವನಿಗೂ, ವಾಂತಿಮಾಡಿಸಿಕೊಂಡವನಿಗೂ, ನಿರೂಹ ಎಂಬ ವಸ್ತ್ರ ಉಪಯೋ ಗಿಸಿಕೊಂಡವನಿಗೂ, ಅದು ವರ್ಜ್ಯವಾಗಿರುತ್ತದೆ. ಅವರೊಳಗೆ ತರುಣಜ್ವರದವನಾಗಲಿ, ಅಜೀರ್ಣವುಳ್ಳವನಾಗಲಿ, ಅಭ್ಯಂಗನ ಮಾಡಿಸಿಕೊಂಡರೆ, ಅವನ ವ್ಯಾಧಿಯು ಗುಣವಾಗಲಿಕೆ ಕಷ್ಟವಾಗುವದು ಅಧವಾ ಅಸಾಧ್ಯವಾಗುವದು. ಮಿಕ್ಕವರಿಗೆ ಅದೇ ದಿವಸ ಅಭ್ಯಂಗಮಾಡಿಸಿ ದರಿಂದ ಅಗ್ನಿಮಾಂದ್ಯ ಮುಂತಾದ ರೋಗಗಳು ಉಂಟಾಗುವವ ಎಂತ ಹೇಳಲ್ಪಟ್ಟಿದೆ. ಸಂತರ್ಪಣದಿಂದ ಉಂಟಾದ ರೋಗಗಳಲ್ಲಿಯೂ ಅಭ್ಯಂಗವನ್ನು ಮಾಡಿಸಲೇ ಬಾರದು. 13. ಖರತ್ವಂ ಶುಷ್ಕತಾಂ ರೌಕ್ಷಂ ಶ್ರಮಃ ಸುಪ್ತಿಶ್ವ ಪಾದಯೋಃ | ಸದ್ಯ ಏವೋಪಶಾಂತಿ ಪಾದಾಭ್ಯಂಗನಿಷೇವಣಾತ್ || ಚಾಯತೇ ಸೌಕುಮಾರ್ಯಂ ಚ ಬಲಂ ಸೈರ್ಯಂ ಚ ಪಾದಯೋಃ | ಪಾದಾಭ್ಯಂಗ ದೃಷ್ಟಿಕಪ್ರಸಾದಂ ಲಭತೇ ಮಾರುತಕ್ಕೋಪಶಾಮೃತಿ || ನ ಚ ನ್ಯಾದೃಢಸೀವಾತಾಃ ಪಾದಯೋಃ ಸ್ಟುಟನಂ ನ ಚ | ನ ಶಿರಾಸ್ನಾಯುಸಂಕೋಚಃ ಪಾದಾಭ್ಯಂಗೇನ ಪಾದಯೋಃ || (ಚ. 32.)