--- _231 ಆ XI ಸಂಧ್ಯರ್ಯೋ ನ ನಿಷಿದ್ಧತಿಧಿಷು ನಾಶುಚಿರ್ನಲಗ್ನಭೇಷಜೇ ನಾಪ್ರಣೀ ತಸಂಕಲ್ಲೊ ನಾನುಪಸ್ಥಿತಪ್ರಹರ್ಷೋ ನಾಭುಕ್ತವಾನ್ ನಾತ್ಯಶಿತೋ ನ ವಿಷಮಸ್ಟೋ ನ ಮೂತ್ರೋಚ್ಚಾರಪೀಡಿತೋ ನ ಶ್ರಮ-ವ್ಯಾಯಾ ಮೋಪವಾಸ-ಕ್ಲಮಾಭಿಹತೋ ನಾರಹಸಿ ವ್ಯವಾಯಂ ಗಚೇತ್ | (ಚ. 48.) ರಜಸ್ವಲೆಯಲ್ಲಿ, ರೋಗಪೀಡಿತಳಲ್ಲಿ, ಶುಚಿಯಾಗಿಲ್ಲ ದವಳಲ್ಲಿ, ಪ್ರಶಸ್ತವಲ್ಲದವಳಲ್ಲಿ. ಅನಿಷ್ಟವಾದ ರೂಪ ಅಧವಾ ಆಚಾರ ಅಧವಾ ಉಪಚಾರ ಯುಕ್ತಳಾದವಳಲ್ಲ, ಅನುಕೂಲ ಇಲ್ಲದವಳಲ್ಲಿ, ಕಾಮಿಸದವಳಲ್ಲಿ, ಅನ್ಯರನ್ನು ಕಾಮಿಸುವವಳಲ್ಲಿ, ಹೆಂಡತಿಯಲ್ಲದವಳಲ್ಲಿ, ವ್ಯತಿರಿಕ್ತಯೋನಿಯುಳ್ಳವಳಲ್ಲಿ, ಯೋನಿಯಿಲ್ಲ ದವಳಲ್ಲ, ದೇವರ ಕೋಣೆಯಲ್ಲಿ, ಯಜ್ಞ ಶಾಲೆಯಲ್ಲಿ, ನಾಲ್ಕು ಮಾರ್ಗಗಳ ಸಂದಿನಲ್ಲಿ, ತೋಟದಲ್ಲಿ, ಸ್ಮಶಾನಗೃಹದಲ್ಲಿ, ನೀರ ಮೇಲೆ, ಔಷಧಾಲಯದಲ್ಲಿ, ಬ್ರಾಹ್ಮಣಸಮೂಹದಲ್ಲಿ, ಗುರುಗಳ ಮುಂದೆ, ದೇವಾಲಯದಲ್ಲಿ, ಎರಡು ಸಂಧ್ಯಾಕಾಲಗಳಲ್ಲಿ, ನಿಷೇಧಿಸಲ್ಪಟ್ಟ ದಿನಗಳಲ್ಲಿ, ಅಶುಚಿಯಾದವನು, ಔಷಧವನ್ನು ಸೇವಿಸಿ ದವನು, ಮನಃಸಂಕಲ್ಪಮಾಡದವನು, ಹರ್ಷವುಂಟಾಗದವನು, ಉಣ್ಣದವನು, ಅತಿಯಾಗಿ ಉಂಡವನು, ವಿಷಮವಾದ ಸ್ಥಾನವನ್ನಾಶ್ರಯಿಸಿದವನು, ಮಲಮೂತ್ರಗಳ ವೇಗದಿಂದ ಪೀಡಿತನಾದವನು, ಶ್ರಮದಿಂದ, ಅಧವಾ ವ್ಯಾಯಾಮದಿಂದ, ಅಧವಾ ಉಪವಾಸದಿಂದ, ಅಧವಾ ಕೃಮದಿಂದ, ಸೋತವನು, ಮತ್ತು ಗುಪ್ತವಲ್ಲದ ಸ್ಥಳದಲ್ಲಿ , ಮೈಥುನವನ್ನು ಮಾಡ ಕೂಡದು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೨೧
ಗೋಚರ