ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 232 -

                      XII ನೇ ಅಧ್ಯಾಯ.
                        ಪಾನೀಯಗಳು.

೧. ಅಂತರಿಕ್ಷ ನೀರಿನ ಗುಣ


       ಪಾನೀಯಮಾಂತರಿಕ್ಷಮನಿರ್ದೇಶ್ಯರಸಮಮೃತಂ ಜೀವನಂ ತರ್ಪಣಂ
       ಧಾರಣಮಾಕ್ಲಮ-ಪಿಪಾಸಾ-ಮದ-ಮೂಚ್ಛರ್
       -ತಂದ್ರಾ-ನಿದ್ರಾ-ದಾಹ-ಪ್ರಶಮನಮೇಕಾಂತತಃ ಪಧ್ಯತಮಂ ಚ
       ತದೇವಾವನಿಪತಿತಮನ್ಯತಮಂ ರಸಮುಪಲಭತೇ ಸ್ಥಾನವಿಶೇಷಾನ್ನ 
       ದೀ-ನದ-ಸರಸ್ತಡಾಗ-ವಾಪೀ-ಕೂಪ-ಚುಂಟೀ-ಪ್ರಸ್ರವಣೋದ್ಭಿದ್ವಿಕಿರ-
       ಕೇದಾರ-ಪಲ್ವಲಾದಿಷು ಸ್ಥಾನೇಷ್ರ ವಸ್ಥಿತಮಿತಿ | (ಸು. 169-70.)‌‌‌
   ಅಂತರಿಕ್ಷದ ನೀರಲ್ಲಿ ರಸ ವ್ಯಕ್ತವಾಗಿರುವದಿಲ್ಲ ಅದು ಅಮೃತಸಮಾನವಾದದ್ದು, ಬದುಕಿಸತಕ್ಕಂಧಾದ್ದು. ತೃಪ್ತಿಕರ, ಧೃತಿಯನ್ನೂ ಸಮಾಧಾನವನ್ನೂ ಕೊಡತಕ್ಕಂಧಾದ್ದು, ಶ್ರಮಹರ, ದೇಹಾಯಾಸ, ಬಾಯಾರಿಕೆ, ಮದ, ಮೂರ್ಚ್ಛೆ, ತಂದ್ರೆ, ನಿದ್ದೆಯ ತೂಕಡಿಕೆ (ಅಧವಾ ಅನಿದ್ರೆ) ಮತ್ತು ಉರಿ, ಇವುಗಳನ್ನು ಶಮನಮಾಡತಕ್ಕಂಧಾದ್ದು, ತಾನಾಗಿ ಉತ್ತಮ ಪಧ್ಯವಾದದ್ದು. ಅದೇ ನೀರು ಭೂಮಿಗೆ ಬಿದ್ದು, ಮುಖ್ಯ ನದೀ, ಹೊಳೆ, ಸರಸ್ಸು (ಸರೋವರ), ಹಳ್ಳ (ಕುಂಟಿ) , ಕೆರೆ, ಬಾವಿ,ಗುಂಡಿ, ಹರಿದು ಬೀಳುವ ನೀರಿನ ಸ್ಥಳ (ಚುಕ್ಕೆ), ಬುಗ್ಗೆ, ನೀರಹೊಂಡ, ಗದ್ದೆ, ಕೊಳ, ಮುಂತಾದ ಸ್ಥಳಗಳನ್ನಾಶ್ರಯಿಸಿದ ಮೇಲೆ ಸ್ಥಾನಭೇದ ದಿಂದ ರುಚಿಭೇದನ್ನು ಪಡೆಯುತ್ತದೆ.

೨. ನೀರಿನ ರುಚಿಗೆ ಕಾರಣ

       ತತ್ರ ಸ್ವಗುಣಭೂಯಿಷ್ಠಾಯಾಂ ಭೂಮಾವಮ್ಲಂ ಲವಣಂ ಚ | ಅಂಬು 
       ಗುಣಭೂಯಿಷ್ಠಾಯಾಂ ಮಧುರಂ | ತೇಜೋಗುಣಭೂಯಿಷ್ಠಾಯಾಂ 
       ಕಟುಕಂ ತಿಕ್ತಂ ಚ | ವಾಯುಗುಣಭೂಯಿಷ್ಟಾಯಾಂ ಕಷಾಯಂ ಚ | 
       ಆಕಾಶಗುಣಭೂಯಿಷ್ಠಾಯಾಮವ್ಯಕ್ತರಸಮವ್ಯಕ್ತಂ ಹ್ಯಾಕಾಶಮಿತ್ಯ 
       ತಸ್ತತ್ ಪ್ರಧಾನಮವ್ಯಕ್ತರಸತ್ವಾತ್ ತತ್ಪೇಯಮಾಂತರಿಕ್ಷಾಲಾಭೇ !
                                          (ಸು 170.)

ಆ ನೀರು ಭೂಗುಣವೇ ಹೆಚ್ಚಿರುವ ಭೂಮಿಯಲ್ಲಿ ಹುಳಿ ಮತ್ತು ಉಪ್ಪು ರುಚಿಯುಳ್ಳ ದ್ದಾಗಿಯೂ, ನೀರಿನ ಗುಣವೇ ಹೆಚ್ಚಿರುವ ಭೂಮಿಯಲ್ಲಿ ಸೀಯಾಗಿಯೂ, ತೇಜೋಗುಣವೇ ಹೆಚ್ಚಾಗಿರುವ ಭೂಮಿಯಲ್ಲಿ ಖಾರ ಮತ್ತು ಕಹಿ ರುಚಿಯುಳ್ಳದ್ದಾಗಿಯೂ, ವಾಯುಗುಣವೇ ಹೆಚ್ಚಾಗಿರುವ ಭೂಮಿಯಲ್ಲಿ ಚೊಗರಾಗಿಯೂ, ಆಕಾಶ ಎಂಬ ಮಹಾಭೂತವು ಅವ್ಯಕ್ತ ವಾದದ್ದರಿಂದ, ಆಕಾಶಗುಣವೇ ಹೆಚ್ಚಾಗಿರುವ ಭೂಮಿಯಲ್ಲಿ ವ್ಯಕ್ತರಸವಿಲ್ಲದ್ದಾಗಿಯೂ, ಇರುವದು. ಆ ಅವ್ಯಕ್ತರಸವುಳ್ಳ ನೀರೇ ಪ್ರಧಾನವಾದದ್ದು. ಅದನ್ನೇ ಅಂತರಿಕ್ಷದ ನೀರು ದೊರೆಯದಾಗ್ಗೆ ಕುಡಿಯಬೇಕಾದದ್ದು.