ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 233 - ಆ 111

೩.ನಾಲ್ಕು ವಿಧವಾದ ಅಂತರಿಕ್ಷ ನೀರು

          ತತ್ರಾಂತರಿಕ್ಷಂ ಚತುರ್ವಿಧಂ | ತದ್ಯಧಾ ಧಾರಂ ಕಾರಂ 
          ತೌಷಾರಂ ಹೈಮಮಿತಿ | ತೇಷಾಂ ಧಾರಂ ಪ್ರಧಾನಂ ಲಘು 
          ತ್ವಾತ್ ! (ಸು. 170.)
 ಅಂತರಿಕ್ಷದ ನೀರೆಂಬದು 4 ವಿಧ, ಹ್ಯಾಗಂದರೆ: 1. ಮಳೆಧಾರೆ, 2. ಕಲ್ಲುಮಳೆ, 3. ಮಂಜಿನ ನೀರು, 4. ಹಿಮಗಟ್ಟಿಯ ನೀರು ಅವುಗಳೊಳಗೆ ಮಳೆಧಾರೆಯ ನೀರು ಲಘುವಾದದ್ದರಿಂದ ಪ್ರಧಾನವಾದದ್ದು.


೪. ವರ್ಷ ಋತುವಿನ ಹೊಸ ನೀರಿನ ದೋಷ

         ಕೀಟಮೂತ್ರಪುರೀಷಾಂಡಶವಕೋಧಪ್ರದೂಷಿತಂ | 
         ತೃಣಪರ್ಣೋತ್ಕರಯುತಂ ಕಲುಷಂ ವಿಷಸಂಯುತಂ ||
         ಯೋSವಗಾಹೇತ ವರ್ಷಾಸು ಪಿಬೇದ್ವಾಪಿ ನವಂ ಜಲಂ |
         ಸ ಬಾಹ್ಯಾಭ್ಯಂತರಾನ್ ರೋಗಾನ್ ಪ್ರಾಪ್ನುಯಾತ್ ಕ್ಷಿಪ್ರಮೇವ ತು ||
                                                        (ಸು. 171 )
 ಹುಳ, ಮೂತ್ರ, ಮಲ, ಮೊಟ್ಟೆ, ಶವ, ಇವುಗಳ ಕೊಳೆಯಿಂದ ದೂಷಿತವಾದ, ಹುಲ್ಲುಗಳ ಮತ್ತು ಎಲೆಗಳ ರಾಶಿಗಳಿಂದ ಕೂಡಿಕೊಂಡಿರುವ, ಕಲಂಕಿತವಾದ, ವಿಷಯುಕ್ತವಾದ, ಮಳೆಗಾಲದ ಹೊಸ ನೀರನ್ನು ಯಾವನು ಕುಡಿಯುತ್ತಾನೋ, ಅಧವಾ ಅಂಧಾ ನೀರಿನಲ್ಲಿ ಸ್ನಾನ ಮಾಡುತ್ತಾನೋ, ಅವನಿಗೆ ಶೀಘ್ರವಾಗಿಯೇ ಒಳಗೂ ಹೊರಗೂ ರೋಗಗಳು ಸಂಭವಿಸುವವು.
         
         ತತ್ರ ವರ್ಷಾಸ್ವಾನ್ತರಿಕ್ಷಮೌದ್ಭಿಂ ವಾ ಸೇವೇತ | (ಸು. 171.)

 ಆ ವರ್ಷ ಋತುವಿನಲ್ಲಿ ಅಂತರಿಕ್ಷದ ನೀರನ್ನಾಗಲಿ ಬುಗ್ಗೆ ನೀರನ್ನಾಗಲಿ ಉಪಯೋಗಿಸಬೇಕು.

೫.ದೋಷಕರವಾದ ನೀರಿನ ಲಕ್ಷಣ

       ತತ್ರ ಯತ್‌ ಶೈವಾಲ-ಪಂಕ-ಹಟ-ತೃಣ.ಪದ್ಮಪತ್ರ-ಪ್ರಭೃತಿಭಿರವಚ್ಛನ್ನಂ ಶಶಿಸೂ
       ರ್ಯಕಿರಣಾನಿಲೈರ್ನಾಭಿಜುಷ್ಟಂ ಗಂಧವರ್ಣರಸೋಪಸೃಷ್ಟಂ ಚ ತದ್ವ್ಯಾಪನ್ನ  
       ಮಿತಿ ವಿದ್ಯಾತ್ | ತಸ್ಯ ಸ್ಪರ್ಶರೂಪರಸಗಂಧವೀರ್ಯವಿಪಾಕದೋಷಾಃ ಷಟ್ಸಂ
       ಭವಂತಿ | (ಸು. 171.)
 ಅಂತರಗಂಗೆ ಗಿಡ, ಕೆಸರು, ಹಟ, ಹುಲ್ಲು, ತಾವರೆ ಎಲೆ, ಇತ್ಯಾದಿಗಳಿಂದ ಮುಚ್ಚಲ್ಪಟ್ಟು, ಚಂದ್ರ ಸೂರ್ಯ ಕಿರಣಗಳಿಂದಲೂ ಗಾಳಿಯಿಂದಲೂ ಶುಚಿಮಾಡಲ್ಪಡದ, ವಾಸನೆ, ವರ್ಣ, ಮತ್ತು ರುಚಿಗಳಿಂದ ಯುಕ್ತವಾದ, (ಕೂಪತಟಾಕಾದಿಗಳ) ನೀರು ಕೆಟ್ಟದ್ದೆಂದು ತಿಳಿಯಬೇಕು. ಸ್ಪರ್ಶದಲ್ಲಿ, ರೂಪದಲ್ಲಿ, ರಸದಲ್ಲಿ, ವಾಸನೆಯಲ್ಲಿ, ವೀರ್ಯದಲ್ಲಿ, ವಿಪಾಕ ದಲ್ಲಿ, ಹೀಗೆ ಆರು ವಿಧವಾಗಿ ಅದರ ದೋಷಗಳು ಕಂಡುಬರುವವು.
                                                                 
                                                              30