ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XI - 230 – 43. ಹೆಂಗಸಿಗೆ ಮು ಮಾಸಿ ಮಾಸಿ ರಜಃ ಸ್ತ್ರೀಣಾಂ ರಸಜಂ ಸ್ರವತಿ ತ್ರ್ಯಹಂ | ಟ್ಟನ ಕಾಲ ವತ್ಸರಾದ್ದ್ವಾದಶಾದೂರ್ಧ್ವಂ ಯಾತಿ ಪಂಚಾಶತಃ ಕ್ಷಯಂ || (ವಾ 138 ) ಹೆಂಗಸಿಗೆ 12 ವರ್ಷ ಪ್ರಾಯದನಂತರ ರಸಮೂಲವಾದ ರಜಸ್ಸು ತಿಂಗಳುತಿಂಗಳು ಮೂರು ದಿನ ಸ್ರಾವವಾಗುತ್ತದೆ 50 ವರ್ಷ ಪ್ರಾಯದನಂತರ ಅದು ಕ್ಷಯವನ್ನಹೊಂದುವದು. 44. ಸ್ತ್ರೀಯ ಋತುಸ್ತು ದ್ವಾದಶನಿಶಾಃ ಪೂರ್ವಾಸ್ತಿಸ್ರಶ್ಚ* ನಿಂದಿತಾಃ | ಋತುಕಾಲ ಏಕಾದಶೀ ಚ ಯುಗ್ಮಾಸು ಸ್ಯಾತ್ಪುತ್ರೋsನ್ಯಾಸು ಕನ್ಯಕಾ || (ವಾ. 140 ) ಋತುವು 12 ದಿನ, ಮತ್ತು ಪ್ರಧಮ 3 ದಿನಗಳು ಮತ್ತು 11ನೇ ದಿನ ನಿಂದ್ಯವಾದವು ಸರಿಸಂಖ್ಯೆ ದಿವಸಗಳಲ್ಲಿ ಗಂಡು ಶಿಶು, ಎಷಮಸಂಖ್ಯೆ ದಿವಸಗಳಲ್ಲಿ ಹೆಣ್ಣು ಶಿಶು, ಉತ್ಪನ್ನ ವಾಗುವದು ಷರಾ * "ತಿಸೋSತ್ರ” ಎಂಬ ಪಾರಾಂತರವದೆ ಆ ಪಾರದ ಪ್ರಕಾರ 12 ದಿನಗಳೊಳಗೆ ಪ್ರಥಮದ (ಮುಟ್ಟಿನ) 3 ದಿನ ನಿಂದ್ಯ ಎಂಬ ಅರ್ಥ ಸ್ಪಷ್ಟವಾಗುತ್ತದ ಋತುಸ್ತು ದ್ವಾದಶರಾತ್ರಂ ಭವತಿ ದೃಷ್ಟಾರ್ತವಃ | ಅದೃಷ್ಟಾರ್ತವಾಪ್ಯ

  ಸ್ತೀತ್ಯೇಕೇ ಭಾಷಂತೇ | (ಸು. 313.) ರಜಸ್ಸು ಕಾಣುವ ಋತು 12 ದಿನಗಳು, ರಜಸ್ಸು ಕಾಣದ ಋತು ದಿನ ಸಹ ಉಂಟೆಂತ ಕೆಲವರು ಹೇಳುತ್ತಾರೆ |

ಷರಾ ಮುಟ್ಟಾವ ನಾಲ್ಕನೇ ದಿನ ಹಿಡಿದು ಹನ್ನೆರಡು ದಿನ ಗರ್ಭಾಧಾನಕ್ಕೆ ತಕ್ಕ ಕಾಲ ಎಂತ ಸಿ ಸಂ ವ್ಯಾ – "ದೃಷ್ಟಾರ್ತವಂ” ಎಂಬ ಪದ ಎರಡು ಪ್ರತಿಗಳಲ್ಲಿ ಕಾಣುತ್ತದೆ ಆದರೆ ದೃಷ್ಟಾರ್ತವಮ್' ಎಂಬ ಪಾರಾಂತರವಿದ್ದ ಹಾಗೆ ಕಾಣುತ್ತದೆ ಅನಂತರ ಅದೃಷ್ಟಾರ್ತನಾ' ಎಂಬ ಪದದಿರುವದರಿಂದ 'ದೃಷ್ಟಾರ್ತವಮ್' ಎಂಬ ಪಾರವೇ ಪ್ರಶಸ್ತವೆಂತ ಕಾಣುತ್ತದೆ ತ್ರಯೋದಶೀಪ್ರಭೃತಯೋ ನಿಂದ್ಯಾಃ | (ಸು. 309.) ಮುಟ್ಟಾಗಿ 13ನೇ ದಿನ ಮೊದಲ್ಗೊಂಡು (ಗರ್ಭಾಧಾನಕ್ಕೆ) ನಿಂದ್ಯವಾದವು ಪುಷ್ಪ ಕಾಲೇ ಶುಚಿಸ್ತಸ್ಮಾದಪತ್ಯಾರ್ಧೀ ಸ್ತ್ರಿಯಂ ವ್ರಜೇತ್ | (ಸು. 314 ) ಸಂತತಿಯ ಅಪೇಕ್ಷೆಯುಳ್ಳವನು ಶುಚಿಯಾಗಿದ್ದು ಋತುಕಾಲದಲ್ಲಿ ಸ್ತ್ರೀಸಂಭೋಗ ಮಾಡ ತಕ್ಕದ್ದು. 45. ನ ರಜಸ್ವಲಾಂ ನಾತುರಾಂ ನಾಮೇಧ್ಯಾಂ ನಾಶಸ್ತಾಂ ನಾನಿಷ್ಟರೂಪಾ ಚಾರೋಪಚಾರಾಂ ನಾದಕ್ಷಿಣಾಂ ನಾಕಾಮಾಂ ನಾನ್ಯಕಾಮಾಂ ನಾನ್ಯ ಮೈಥುನದ ನಿಯಮಗಳು ಸ್ತ್ರಿಯಂ ನಾನ್ಯಯೋನಿಂ ನಾಯೋನೌ ನ ಚೈತ್ಯ-ಚತ್ವರ-ಚತುಷ್ಪಧೋ ಪವನ-ಶ್ಮಶಾನಾಯತನ-ಸಲಿಲೌಷಧಿ-ದ್ವಿಜ-ಗುರು-ಸುರಾಲಯೇಷು ನ