– 229 - e XI 16 ವರ್ಷ ಪ್ರಾಯವಾಗದವಳಲ್ಲಿ 25 ವರ್ಷ ಪ್ರಾಯವಾಗದ ಗಂಡಸು ಗರ್ಭಾಧಾನ ಮಾಡಿದರೆ, ಆ ಗರ್ಭಕ್ಕೆ ಹೊಟ್ಟೆಯೊಳಗೇನೇ ಕೆಡಕು ಬರುವದು; ಅಧವಾ ಹುಟ್ಟಿದರೆ, ಅದು ಹೆಚ್ಚು ಕಾಲ ಬದುಕದು; ಅಧವಾ ಬದುಕಿದ ಪಕ್ಷದಲ್ಲಿ, ದುರ್ಬಲವಾದ ಇಂದ್ರಿಯಗಳುಳ್ಳವ ನಾಗುವನು; ಆದ್ದರಿಂದ ಅತ್ಯಂತ ಬಾಲೆಯಾದವಳಲ್ಲಿ ಗರ್ಭಾಧಾನವನ್ನು ಮಾಡಕೂಡದು. ಷರಾ ಗಂಡಸಿಗೆ 20 ವರ್ಷ ಪ್ರಾಯ ಪೂರ್ಣವಾದರೆ ಸಾಕೆಂತ ವಾಗ್ಧಟನ ಅಭಿಪ್ರಾಯ (ಪು 138 ) 39. ಅತಿವೃದ್ಧಾಯಾಂ ದೀರ್ಘರೋಗಿಣ್ಯಾಮನ್ಯೇನ ವಾ ವಿಕಾರೇಣೋಪ ವೃದ್ಧರು ಮತ್ತು ಸೃಷ್ಟಾಯಾಂ ಗರ್ಭಾಧಾನಂ ನೈವ ಕುರ್ವೀತ | ಪುರುಷಾಸ್ಯಾಪ್ಯೇವಂ ರೋಗಿಗಳ ವಿಷಯ ವಿಧಸ್ಯ ತ ಏವ ದೋಷಾಃ ಸಂಭವಂತಿ | (ಸು. 367.) - ಅತಿ ವೃದ್ಧಳಾದವಳಲ್ಲಿ, ದೀರ್ಘಕಾಲದ ರೋಗವುಳ್ಳವಳಲ್ಲಿ, ಅಧವಾ ಬೇರೆ ವ್ಯಾಧಿ ಯಿಂದ ಕೂಡಿರುವವಳಲ್ಲಿ, ಗರ್ಭಾಧಾನವನ್ನು ಮಾಡಕೂಡದು ಪುರುಷನು ಈ ವಿಧದವ ನಾದಲ್ಲಿಯೂ, ಅವೇ ದೋಷ*ಗಳು ಸಂಭವಿಸುವವು. ವರಾ * 38 ನೇ ಸಂ ನೋಡು ಹೆಂಗಸಿನ ವಯಭೇದ ಗಳು | 40. ಬಾಲೇತಿ ಗೀಯತೇ ನಾರೀ ಯಾವದ್ವರ್ಷಾಣಿ ಷೋಡಶ | ಹೆಂಗಸಿನ ತತಸ್ತು ತರುಣೀ ಜ್ಞೇಯಾ ದ್ವಾತ್ರಿಂಶದ್ವತ್ಸರಾವಧಿ || ವಯೋಭೇದ ತದೂರ್ಧ್ವಮಧಿರೂಢಾ ಸ್ಯಾತ್ಪಂಚಾಶದ್ವತ್ಸರಾವಧಿ | ವೃದ್ಧಾ ತತ್ಪರತೋ ಜ್ಞೇಯಾ ಸುರತೋತ್ಸವವರ್ಜಿತಾ || (ಭಾ. ಪ್ರ. 57.) | ಹೆಂಗಸು 16 ವರ್ಷಗಳ ವರೆಗೆ ಬಾಲೆಯೆಂತಲೂ, ಅನಂತರ 32 ವರ್ಷಗಳ ವರೆಗೆ ತರುಣಿ ಯೆಂತಲೂ, ಆ ಮೇಲೆ 50 ವರ್ಷಗಳ ವರೆಗೆ ಪ್ರೌಢೆ ಎಂತಲೂ, ಹೇಳಲ್ಪಡುತ್ತಾಳೆ. ಅದ ರನಂತರ ಸುರತದ ಹರ್ಷವಿಲ್ಲದ ವೃದ್ದಳೆಂತ ತಿಳಿಯಬೇಕು. 41, ಸಂತತಿಯಾಗು ಪಂಚಪಂಚಾಶತೋ ನಾರೀ ಸಪ್ತ ಸಪ್ತ ತಿತಃ ಪುಮಾನ್ | ವದಕ್ಕಿ ಪ್ರಾ ದ್ವಾವೇತೌ ನ ಪ್ರಸೂಯೇತೇ ಪ್ರಸೂಯೇತೇ ವ್ಯತಿಕ್ರಮಾತ್ || ಯಾವಧಿ (ರಾಜವಲ್ಲಭ 176.) 55 ವರ್ಷ ಪ್ರಾಯ ಕಳೆದ ಹೆಂಗಸಿನಿಂದಲೂ, 77 ವರ್ಷ ಪ್ರಾಯ ಕಳೆದ ಗಂಡಿಸಿ ನಿಂದಲೂ, ಸಂತತಿ ಆಗುವದಿಲ್ಲ. ಕ್ರಮತಪ್ಪಿ ಅಂಧವರಿಂದ ಸಂತತಿ ಆಗುವದುಂಟು. 42. ಮೈಥುನ ಅತ್ಯಾಶಿತೋSಧೃತಿಃ ಕ್ಷುಧ್ವಾನ್ ಸವ್ಯಧಾಂಗಃ ಪಿಪಾಸಿತಃ | ವರ್ಜ್ಯಮಾಡ ಬಾಲೋ ವೃದ್ಧೋನ್ಯವೇಗಾರ್ತಸ್ತ್ಯಜೇದ್ರೋಗೀ ಚ ಮೈಧು ಬೇಕಾದವರು ನಂ || (ಭಾ. ಪ್ರ. 58.) ಅತಿಯಾಗಿ ಉಂಡವನೂ, ಮನಸ್ಸಮಾಧಾನವಿಲ್ಲದವನೂ, ಹಸಿದವನೂ, ಬಾಯಾರಿಕೆ ವುಳ್ಳವನೂ, ಅಂಗದಲ್ಲಿ ನೋವಿರುವವನೂ, ಬಾಲನೂ, ವೃದ್ಧನೂ, (ಮಲಮೂತ್ರಾದಿ) ಅನ್ಯ ವೇಗದಿಂದ ಪೀಡಿತನಾದವನೂ, ರೋಗಿಯಾದವನೂ, ಮೈಧುನವನ್ನು ತ್ಯಜಿಸತಕ್ಕದ್ದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೯
ಗೋಚರ