ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

                - 243 -                                     ಆ XII

      ಭೇದನಂ ಶೀಘ್ರಪಾಕಂ ಚ ರೂಕ್ಷಂ ಕಫಹರಂ ಪರಂ ||     ಮದ್ಯದ ನಿರುಕ್ತಿ ಅಮ್ಮಂ ಚ ದೀಪನಂ ರುಚ್ಯಂ ಪಾಚನಂ       ಚಾಶಕಾರಿ ಚ |

 ಮತ್ತು ಗುಣ ದೋಷಗಳು ತೀಕ್ಷ್ಮಸೂಕ್ಷ್ಮಂ ಚ ವಿಶದಂ ವ್ಯವಾಯಿ    ಚ ವಿಕಾಸಿ ಚ ||             (ಭಾ. ಪ್ರ. 184.)  
  ಮದವನ್ನುಂಟುಮಾಡತಕ್ಕ ಪಾನಕ್ಕೆ ಜನರು ಮದ್ಯವೆಂತ ಹೇಳುತ್ತಾರೆ. ಅದು ಅರಿಷ್ಟ (ಕುದಿಸಿದ ಕಷಾಯದಿಂದ ತಯಾರಿಸಿದ್ದು), ಸುರಾ (ಹಿಟ್ಟಿನಿಂದ ಮಾಡಿದ್ದು, IBeer), ಸೀಧು (ಕಬ್ಬಿನ ರಸದಿಂದ ತಯಾರಿಸಿದ್ದು), ಆಸವ (ಹಸೀ ಕಷಾಯದಿಂದ ತಯಾರಿಸಿದ್ದು), ಇವೇ ಮೊದಲಾದ ಅನೇಕ ವಿಧವಾಗಿರುವದು ಎಲ್ಲಾ ಮದ್ಯವು ಉಷ್ಣ, ಪಿತ್ತಕಾರಿ, ವಾತಹರ, ಭೇದಿಕರ, ಶೀಘ್ರಪಾಕವುಳ್ಳದ್ದು, ರೂಕ್ಷ, ಕಫಹರಕ್ಕೆ ಉತ್ತಮ, ಮತ್ತು ಹುಳಿಯಾದದ್ದು ದೀಪನಪಾಚನಕರ, ರುಚಿಕರ, ಆಶುಕಾರಿ (ಕೂಡಲೇ ಕೆಲಸಮಾಡುವಂಧಾದ್ದು), ತೀಕ್ಷ, ಸೂಕ್ಷ್ಮ, ವಿಶದ, ವ್ಯವಾಯಿ, ಮತ್ತು ವಿಕಾಸಿ

ತಸ್ಯಾನೇಕಪ್ರಕಾರಸ್ಯ ಮದ್ಯಸ್ಯ ರಸವೀರ್ಯತಃ | ಸೌಕ್ಷಾದೌಪ್ಯಾಚ್ಚ ಶೈಕ್ಷಾತ್ವ ವಿಕಾಸಿಲ್ವಾಚ್ಚ ವನಾ !! ಸಮೇತ್ಯ ಹೃದಯಂ ಪ್ರಾಪ್ಯ ಧಮನಿರೂರ್ಧ್ವಮಾಗತಂ || ಏಭೇಂದ್ರಿಯಚೇತಾಂಸಿ ವೀರ್ಯಂ ಮದಯತೇಚರಾತ್ !! ಚಿರೇಣ ಶೈಕೇ ಪುಂಸಿ ಪಾನತೋ ಜಾಯತೇ ಮದಃ | ಅಚಿರಾದ್ವಾತಿಕ ದೃಷ್ಟ ಪೈಕೇ ಶೀಘ್ರಮೇವ ತು || (ಸು 190 ) ರಸದಲ್ಲಿಯೂ, ವೀರ್ಯದಲ್ಲಿಯೂ ಅನೇಕ ಪ್ರಕಾರವಾಗಿರುವ ಆ ಮದ್ಯದ ಸೂಕ್ಷ್ಮತೆ ಯಿಂದಲೂ, ಉಷ್ಣತೆಯಿಂದಲೂ, ತೀಕ್ಷತೆಯಿಂದಲೂ, ವಿಕಾಸಿತ್ತದಿಂದಲೂ, ಅದರ ವೀರ್ಯವು ಅಗ್ನಿಯೊಂದಿಗೆ ಧಮನಿಗಳ ದ್ವಾರವಾಗಿ ಮೇಲಕ್ಕೆ ಬಂದು, ಹೃದಯವನ್ನು ಸೇರಿ, ಇಂದ್ರಿಯ ಗಳನ್ನೂ, ಮನಸ್ಸನ್ನೂ ಚೆನ್ನಾಗಿ ಅಲ್ಲಾಡಿಸಿ, ಬೇಗನೇ ಮದವನ್ನುಂಟುಮಾಡುತ್ತದೆ. ಈ ಮದವು ಕಫಪ್ರಕೃತಿಯವನಲ್ಲಿ ಕುಡಿದನಂತರ ಸ್ವಲ್ಪ ಕಾಲದಲ್ಲಿ ಉಂಟಾಗುತ್ತದೆ, ಅದು ವಾತ ಪ್ರಕೃತಿಯವನಲ್ಲಿ ಸಾವಕಾಶವಿಲ್ಲದೆ, ಮತ್ತು ಪಿತ್ತಪ್ರಕೃತಿಯವನಲ್ಲಿ ಶೀಘ್ರವಾಗಿ, ಕಾಣುವದು 43. ಮಾರ್ದೀಕಮವಿದಾಹಿತ್ಯಾಧುರಾನ್ವಯತಸ್ರಧಾ || ರಕ್ತಪಿತ್ತೇSಪಿ ಸತತಂ ಬುದ್ಧರ್ನ ಪ್ರತಿಷಿಧ್ಯತೇ || ದ್ರಾಕ್ಷಾ ಮದ್ಯದ ಮಧುರಂ ತದ್ದಿ ರೂಕ್ಷಂ ಚ ಕಷಾಯಾನುರಸಂ ಲಘು || ಲಘುಪಾಕಿ ಸರಂ ಶೋಷವಿಷಮಜ್ವರನಾಶನಂ || (ಸು 187) ದ್ರಾಕ್ಷಿ ಹಣ್ಣಿನ ಮದ್ಯವು ವಿದಾಹಿಯಲ್ಲದ್ದರಿಂದಲೂ, ಸೀರಸ ಕೂಡಿರುವದರಿಂದಲೂ, ರಕ್ತಪಿತ್ತ ರೋಗದಲ್ಲಿ ಸಹ ಅದನ್ನು ' ಸುಜ್ಞರು ಯಾವಾಗಲೂ ಪ್ರತಿಷೇಧಿಸುವದಿಲ್ಲ. ಯಾಕಂದರೆ, ಅದು ಸೀ, ರೂಕ್ಷ, ಚೊಗರು ಅನುರಸವಾಗಿ ಉಳ್ಳದ್ದು, ಲಘು, ಪಾಕ ದಲ್ಲಿಯೂ ಲಘು, ಸರ, ಶೋಷವನ್ನು ಮತ್ತು ವಿಷಮಜ್ವರವನ್ನು ನಾಶಮಾಡತಕ್ಕಂಥಾದ್ದು ಗುಣ ಗುಣ ” ಮರ್ದ 31*