ಅ. XIV -- 264 ಹುಳಿ ತೋವೆ ಸೂಪಮಮ್ಮ ಮನದ್ಧಂ ಚ ಗುರುಂ ವಿದ್ಯಾದ್ಯಧೋತ್ತರಂ | (ಚ, 176.) ಹುಳಿಯುಕ್ತವಾದ ತೋವೆಗಿಂತ ಹುಳಿ ಕೂಡದ ತೋವೆಯು ಗುರು ಎಂತ ತಿಳಿಯ ತಕ್ಕದ್ದು. 42. ಧೂಮಸೀ ರಚಿತಾ ಹಿಂಗುಹರಿದ್ರಾಲವಣೆರ್ಯುತಾ | ಜೀರಕಸ್ವರ್ಜಿಕಾಭ್ಯಾಂ ಚ ತನೂಕೃತ್ಯ ಚ ವೇಲ್ಲಿ ತಾ || ಪರ್ಪಟಾಸ್ತೇ ಸದಾಂಗಾರಭ್ರಷ್ಟಾಃ ಪರಮರೋಚಕಾಃ | ಹಪ್ಪಳದ ಗುಣ ದೀಪನಾ ಪಾಚನಾ ರೂಕ್ಷಾ ಗುರವ ಕಿಂಚಿದೀರಿತಾಃ || ಮೌದ್ದಾಶ್ಚ ತಗ್ಗುಣಾಃ ಪ್ರೋಕ್ತಾ ವಿಶೇಷಾಘವೋ ಹಿತಾಃ | ಚಣಕಸ್ಯ ಗುಣ್ಣೆರ್ಯುಕ್ತಾಃ ಸರ್ಪಟಾಶ್ಚಣಕೊದ್ಧವಾಃ || ಸ್ನೇಹಭ್ರಷ್ಟಾಸ್ತು ತೇ ಸರ್ವೇ ಭವೇಯುರ್ಮಧ್ಯಮಾ ಗುಣೈಃ || (ಭಾ. ಪ್ರ 162.) ಉದ್ದಿನ ಹಿಟ್ಟಿನಿಂದ, ಹಿಂಗು, ಅರಸಿನ, ಉಪ್ಪು, ಜೀರಿಗೆ, ಹಪ್ಪಳದ ಖಾರ, ಇವುಗಳನ್ನು ಕೂಡಿಸಿಕೊಂಡು, ಅಟಿಸಿ: ತೆಳ್ಳಗೆ ಮಾಡಿದ ಹಪ್ಪಳವು, ಕೆಂಡದಲ್ಲಿ ಸುಟ್ಟುಕೊಂಡರೆ, ಅತಿ ರುಚಿ ಕರ, ಅಗ್ನಿದೀಪನಕಾರಿ, ಪಾಚನಕಾರಿ, ರೂಕ್ಷ ಮತ್ತು ಸ್ವಲ್ಪ ಗುರು. ಹೆಸರುಹಿಟ್ಟಿನಿಂದ ಮಾಡಿದ ಹಪ್ಪಳವು ಅದೇ ಗುಣವುಳ್ಳದ್ದು, ಆದರೆ ಲಘು ಕಡಲೆ ಹಿಟ್ಟಿನಿಂದ ಮಾಡಿದ ಹಪ್ಪಳವು ಕಡಲೆಯ ಗುಣವುಳ್ಳದ್ದಾಗಿರುತ್ತದೆ. ಆದರೆ ಆ ಎಲ್ಲಾ ಹಪ್ಪಳಗಳನ್ನು ಎಣ್ಣೆ ತುಪ್ಪ ಗಳಲ್ಲಿ ಕರಿದರೆ, ಅವುಗಳ ಗುಣಗಳು ಮಧ್ಯಮವಾಗುತ್ತವೆ. 43. ಎಷ್ಟಂಭಿನಃ ಸ್ಮೃತಾಃ ಸರ್ವೇ ವಟಕಾ ವಾತಕೋಪನಾಃ | ವಡೆ ಸಂಡಿಗೆಗಳ ಸಿಂಡಾಕೀ ವಾತಲಾ ಸಾಂದ್ರಾ ರುಚಿಪ್ಯಾನಲದೀಪನೀ || (ಸು. 221.) ಎಲ್ಲಾ ವಡೆಗಳು ವಾತಪ್ರಕೋಪನ ಮಾಡುವವು ಮತ್ತು ಹೊಟ್ಟೆ ಬಿಗಿಯುವ ಗುಣವುಳ್ಳವು, ಸಂಡಿಗೆಗಳು ವಾತವೃದ್ಧಿಕರ, ಆದರೆ ಮೃದು, ರುಚಿಕರ ಮತ್ತು ಅಗ್ನಿ ದೀಪನ ಮಾಡತಕ್ಕಂಧವು. ಷರಾ ಸಾಂದ್ರಾ' ಎಂಬಲ್ಲಿ 'ಸಾದ್ರ್ರಾ' ಎಂಬ ಪಾರಾ೦ತರ ಉಂಟು ಆಗ್ಗೆ ಒಣಸಂಡಿಗೆ ವಾತಲ ಮತ್ತು ಹಸಿ ಸಂಡಿಗೆ ಅಗ್ನಿ ದೀಪಕಾರಿ ಎಂತ ಅರ್ಥವಾಗುತ್ತದೆ ನಾನಾ ವಿಧದ ವಡೆ ಮಾಡುವ ಕ್ರಮ ಮತ್ತು ಮಜ್ಜಿಗೆ ಇತ್ಯಾದಿ ಯಲ್ಲಿ ನೆನೆಸಿದ ವಡೆಯ ಗುಣ ವೇದಗಳು ವಾ ಪ್ರ ದಲ್ಲಿ ಹೇಳಲ್ಪಟ್ಟಿವೆ (ಪು 162-63 ) 44. ಸಾಮುದ್ರಂ ಮಧುರಂ ಪಾಕೇ ನಾತ್ಯುಷ್ಣ ಮವಿವಾಹಿ ಚ | ಸಮುದ್ರದ ಭೇದನಂ ೩ಗ್ಗ ಮೂಾಷಚ್ಚ ಶೂಲಪ್ಪಂ ನಾತಿಪಿಲಂ || ಸಮುದ್ರದ ಉಪ್ಪಿನ ಗುಣ (ಸು. 222) ಸಮುದ್ರದುಪ್ಪು ಪಾಕದಲ್ಲಿ ಸೀ, ಅಲ್ಪವಾಗಿ ಸ್ನಿಗ್ಧ, ಸ್ವಲ್ಪ ಉಷ್ಣವಾದರೂ ಉರಿಯ ನ್ನುಂಟುಮಾಡತಕ್ಕಂಧಾದ್ದಲ್ಲ, ಭೇದಿಗುಣವುಳ್ಳದ್ದು, ಸ್ವಲ್ಪ ಪಿತ್ತಕಾರಿ ಮತ್ತು ಶೂಲೆಯನ್ನು ನಾಶಮಾಡತಕ್ಕಂಧಾದ್ದು. ಗುಣ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೪
ಗೋಚರ