ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

263 - ಆ XIV ಅತ್ಮರೀ, ಮೂಲವ್ಯಾಧಿ, ಮೇದಸ್ಸು, ಇವುಗಳನ್ನು ಶಮನಮಾಡುವದು, ಮೂತ್ರಶೋಧನ ಕರ ಮತ್ತು ಅಗ್ನಿದೀಪನಕರ. ಕುಲಡ್ಡ ಯೂಷೋsನಿಲಹಾ ಶ್ವಾಸಪೀನಸನಾಶನಃ | ತೂಣೀ-ಪ್ರತೂಣೀ-ಕಾಸಾರ್ಶೋ-ಗುಲ್ಮದಾವರ್ತನಾಶನಃ || (ಸು. 227.) ಹುರುಳಿಸಾರು ವಾತಹರ ಮತ್ತು ಶ್ವಾಸ, ಪೀನಸ, ತೂಣೀ, ಪ್ರತೂಣೀ, ಕಾಸ, ಅರ್ಶಸ್ಸು, ಗುಲ್ಮ, ಉದಾವವರ್ತ, ಇವುಗಳನ್ನು ನಾಶಮಾಡತಕ್ಕಂಧಾದ್ದು ಷರಾ ಪಾರಾಂತರದಲ್ಲಿ ಶ್ವಾಸನಸ' ಎಂಬದರ ಬದಲಿಗೆ ಶರ್ಕರಾತ್ಮರಿ' ಮತ್ತು ಉದಾವರ್ತ' ಎಂಬದರ ಸ್ನಾನ ದಲ್ಲಿ 'ಮೇದಕ ಕಫ' ಹೇಳಲ್ಪಟ್ಟಿವೆ” ( 117 ) 38. ಆಢಕ್ಕೆಯೂಷಂ ಮಧುರಂ ಚ ಶೀತಂ ವಿಶೋಷಣಂ ವಾತನಿವಾರಣಂ ಚ | ತೊಗರಿಬೇಳೆ ಶೇಪ್ರಾಪಹಂ ಪಿತ್ತಹರಂ ನರಾಣಾಂ ಕೃಮಂ ನಿಹಾದಪಿ ದಾರುಣಂ ಚ || ಸಾರಿನ ಗುಣ (ಹಾ. 49.) ತೊಗರೀ ಸಾರು ಸೀ, ಶೀತ, ವಿಶೇಷವಾಗಿ ಶೋಷಣಗುಣವುಳ್ಳದ್ದು. ವಾತಹರ, ಕಫ ಹರ, ಪಿತ್ತಹರ, ಮತ್ತು ಮನುಷ್ಯರಲ್ಲಿ ರುವ ದಾರುಣವಾದ ಕ್ರಿಮಿಯನ್ನು ಕೊಲ್ಲುವದು. 39. ಹೆಸರುಬೇಳೆ ಶೀತಲಂ ಮಧುರಂ ಮೌದ್ಧಂ ಯೂಷಂ ಪಿತ್ತವಿಕಾರಜಿತ್ | ಸಾರಿನ ಗುಣ ವಾತದೋಷಹರಂ ಪ್ರೋಕ್ತಂ ಜೈರಾಣಾಂ ಶಮನಂ ಪರಂ || (ಹಾ, 49 -50 ) ಹೆಸರು ಸಾರು ನೀ, ಕಫಕರ, ಪಿತ್ತವಿಕಾರವನ್ನೂ, ವಾತದೋಷವನ್ನೂ ಪರಿಹರಿಸು ವದು ಮತ್ತು ಜ್ವರಶಮನಕ್ಕೆ ಉತ್ತಮವಾದದ್ದು. ಮುದ್ದಾ ಮಲಿಕಯೂಷಸ್ತು ಗ್ರಾಹೀ ಪಿತ್ತ ಕಫ ಹಿತಃ (ಸು. 217.) ನೆಲ್ಲಿ ಕೂಡಿಸಿ ಮಾಡಿದ ಹೆಸರ ಸಾರು ಗ್ರಾಹೀ ಮತ್ತು ಕಫರೋಗದಲ್ಲಿ ಹಿತ 40. ಕಷಾಯಂ ಕಟುಕಂ ಚೋಷ್ಠಂ ವಾತಘ್ನಂ ಪುಂಸ್ಕೃ ದೋಷಕೃತ್ | ಕಡಲೆಬೇಳೆ ರಕ್ತಪಿತ್ತಂ ನಿಹಂತಾಶು ಚಣಾನಾಂ ಯೂಷಮುಚ್ಯತೇ || (ಹಾ. 50) ಕಡಲೇ ಸಾರು ಚೊಗರು ಮತ್ತು ಕಟು, ಉಷ್ಣ, ವಾತಹರ, ಪುಂದೋಷಕರ ಮತ್ತು ರಕ್ತಪಿತ್ತಹರ. 41. ಕೃತಾಕೃತ ಅಸ್ನೇಹಲವಣಂ ಸರ್ವಮಕೃತಂ ಕಟುಕೈರ್ವಿನಾ | ಭೇದ ವಿಜೇಯಂ ಲವಣಸ್ನೇಹಕಟುರ್ಕೈ ಸಂಯುತಂ ಕೃತಂ | - (ಸು. 228 ) ಉಪ್ಪು, ಖಾರ, ಸ್ನೇಹಗಳನ್ನು ಸೇರಿಸದೆ ಇದ್ದದ್ದೆಲ್ಲಾ ಅಕೃತ ಮತ್ತು ಅವುಗಳಿಂದ ಕೂಡಿದ್ದು ಕೃತ ಎಂತ ತಿಳಿಯತಕ್ಕದ್ದು. ಸಾರಿನ ಗುಣ