ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ Ay - 282 ಜಂಘಾಲಮೃಗಗಳು ಚೊಗರು, ಸಿ, ಲಘು, ವಾತಪಿತ್ತಹರ, ತೀಕ್ಷ್ಮಮನೋಹರ ಮತ್ತು ವಸ್ತಿಶೋಧನೆ ಮಾಡತಕ್ಕಂಧವು ಸರಾ ಬಾ ಪ್ರ ಮೇರೆಗೆ ಕಫಪಿತ್ತಹರ, ಅಲ್ಪವಾಗಿ ವಾತಕರ ಮತ್ತು ಬಲವೃದ್ಧಿ ಕರ (ಪು 158 )

8 ಕಷಾಯಃ ಸ್ವಾದುಲವಣಸ್ತಚ್ಯಃ ಕೇಶ್ಯೋ ರುಚಿಪ್ರದಃ | ನವಲಿನ ಗುಣ ಮಯೂರಃ ಸ್ವರಮೇಧಾಗ್ನಿದೃಕ್ ಶ್ರೋತ್ರೇಂದ್ರಿ ಯದಾರ್ಢ್ಯಕೃತ್ || (ಸು 200 ) ನವಿಲು ಚೂಗರು, ಸೀ ಮತ್ತು ಉಪ್ಪು ಮಿಶ್ರವಾಗಿ ಉಳ್ಳದ್ದು, ರುಚಿಕರ, ಚರ್ಮಕ್ಕೂ. ಕೂದಲುಗಳಿಗೂ ಹಿತ ಮತ್ತು ಸ್ವರ, ತಿಳುವಳಿಕ, ಅಗ್ನಿ, ದೃಷ್ಟಿ ಮತ್ತು ಶ್ರೋತ್ರೇಂದ್ರಿಯ (ಕೇಳುವಿಕೆ), ಇವುಗಳ ದಾರ್ಢ್ಯವನ್ನುಂಟುಮಾಡುವದು ಗುಣ 9 ಸ್ನಿಗ್ಧೋಷ್ಣೋಕನಿಲಹಾ ವೃಷ್ಯ ಸ್ವದಸ್ವರಬಲಾವಹಃ | ಕೋಳಿಯ ಬೃಂಹಣ: ಕುಕ್ಕುಟೋ ವನ್ಯಸ್ತದ್ವದ್ಗಾ ಗುರುಸ್ತು ಸಃ !! ವಾತರೋಗಕ್ಷಯವವಿಷಮಜ್ವರನಾಶನಃ | (ಸು 200 ) ಕಾಡುಕೋಳಿಯು ಸ್ನಿಗ್ದ, ಉಷ್ಣ, ವೃಷ್ಯ, ವಾತಹರ, ಪುಷ್ಟಿಕರ ಮತ್ತು ಬೆವರನ್ನೂ, ಸ್ವರವನ್ನೂ, ಬಲವನ್ನೂ, ಉಂಟುಮಾಡುತ್ತದೆ. ಊರಕೋಳಿಯು ಹಾಗೆಯೇ, ಆದರೆ ಅದು ಗುರು ಮತ್ತು ವಾತರೋಗ, ಕ್ಷಯ, ವಾಂತಿ, ವಿಷಮಜ್ವರ, ಇವ್ರಗಳನ್ನು ನಾಶಮಾಡ ತಕ್ಕಂಧಾದ್ದು. ಷರಾ ಕಾಡುಕೋಳಿಯ ಗುರು ಅದಕ್ಕೂ ಹೆಚ್ಚು ಗುರು ಊರಕೋಳಿ ಎಂತ ಸಿ ಸಂ ವ್ಯಾ ಆರಣ್ಯ ಕುಕ್ಕುಟಿ ಗುರು ಎಂತ ಧಾ ಪ್ರ ಸಹ ಹೇಳುತ್ತದೆ (ಪ 156 )

10 * * * ವಿಷ್ಕಿರಾ ಲಘವ: ಶೀತಮಧುರಾಃ ಕಷಾಯಾ ದೋಷ ಶಮನಾಶ್ಚ. ಸಾಮಾನ್ಯವಾಗಿ ಎಷ್ಕರ (ಸು. 199 ) ಜಾತಿ ಮಾ೦ಸದ ಗುಣ ಎಷ್ಕಿರಾಜಾತಿ ಪ್ರಾಣಿಗಳ ಮಾಂಸವು ಲಘು ಶೀತ, ಸೀ. ಚೂಗರು ಮತ್ತು ತ್ರಿದೋಷ ಶಮನಕರ. ಷರಾ ವೃಷ್ಯ, ಬಲಕರ, ಕಟುಪಾಕಿ, ಎಂತ ಸಹ ಧಾ ಪ್ರ (ಪು 153 ) 11 ರಕ್ತಪಿತ್ತ ಪ್ರಶಮನಃ ಕಷಾಯವಿಶದೋಕಪಿ ಚ | ಪಾರಿವಾಳದ ಗುಣ ವಿಪಾಕೇ ಮಧುರಶ್ಚಾಪಿ ಗುರುಃ ಪಾರಾವತಃ ಸ್ಮೃತಃ || (ಸು. 200 ) ಪಾರಿವಾಳವು ಚೊಗರು, ವಿಶದ, ವಿಪಾಕದಲ್ಲಿ ಸೀ, ಗುರು ಮತ್ತು ರಕ್ತಪಿತ್ತವನ್ನು ಶಮನಮಾಡುವದು. ಷರಾ ಸ್ನಿಗ್ದ, ಸಂಗ್ರಾಹಿ ಶೀತ, ವೀರ್ಯವರ್ಧನ, ಎಂತ ಸಹ ಭಾ ಪ್ರ– (ಪು 157 )