ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XXX V1

                            ಉಪೋದ್ಘಾತ

ಲ್ಪಟ್ಟಿದೆ. ಆದರೆ ಅದು ಆ ಕಾಲದಲ್ಲಿಯೇ ಪುರಾಣೋಕ್ತಿಯಾಗಿರಬೇಕು ಯಾಕೆಂದರೆ ಅದರಲ್ಲಿಯೇ ಬ್ರಹ್ಮನು ಆಯುರ್ವೇದವನ್ನು ದಕ್ಷಪ್ರಜಾಪತಿಗೆ ಹೇಳಿದ ಪ್ರಕಾರ, ಅವನು ಅಶ್ವಿನೀದೇವತೆಗಳಿಗೆ, ಅವರು ಇಂದ್ರನಿಗೆ, ಅವನು ಧನ್ವಂತರಿಗೆ, ಆ ಧನ್ವಂತರಿಯು ಸುಶ್ರುತ ಮೊದಲಾದ ಋಷಿಗಳಿಗೆ, ಉಪದೇಶಮಾಡಿದ್ದಾಗಿ ವಿವರಿಸಲ್ಪಟ್ಟಿದೆ ಚರಕಸಂಹಿತೆಯಲ್ಲಿಯೂ ಅದೇ ರೀತಿ ಬ್ರಹ್ಮನಿಂದ ಪ್ರಜಾಪತಿ, ಪ್ರಜಾಪತಿಯಿಂದ ಅಶ್ವಿನೀದೇವತೆಗಳು, ಅಶ್ವಿನೀದೇವತೆ ಗಳಿಂದ ಇಂದ್ರನು, ಆಯುರ್ವೇದವನ್ನು ಸಂಪೂರ್ಣವಾಗಿ ಕಲಿತದ್ದಾಗಿಯೂ, ಬಹು ಋಷಿ ಗಳಿಂದ ಪ್ರತಿನಿಧಿಯಾಗಿ ಕಳುಹಿಸಲ್ಪಟ್ಟ ಭರದ್ವಾಜನಿಗೆ ಇಂದ್ರನು ಅದನ್ನು ಸುಲಭವಾದ ಕ್ರಮದಲ್ಲಿ ಉಪದೇಶಮಾಡಿದ ಮೇರೆಗೆ ಆ ಭರದ್ವಾಜನು ಆ ಋಷಿಗಳಿಗೆಲ್ಲಾ ವಿವರಿಸಿದ ನೆಂತಲೂ, ಅನಂತರ ಅತ್ರಿಕುಲದವನಾದ ಪುನರ್ವಸುವು ಅಗ್ನಿವೇಶ, ಭೇಲ, ಜತೂಕರ್ಣ, ಪರಾಶರ, ಹಾರೀತ ಮತ್ತು ಕ್ಷಾರಪಾಣಿ ಎಂಬ ಹೆಸರಿನ ಆರು ಮಂದಿ ಶಿಷ್ಯರುಗಳಿಗೆ ಆಯು ರ್ವೇದವನ್ನು ಏಕರೀತಿಯಲ್ಲಿ ಉಪದೇಶಮಾಡಿದನೆಂತಲೂ, ಆ ಶಿಷ್ಯರುಗಳೊಳಗೆ ವಿಶೇಷ ಬುದ್ದಿಯುಳ್ಳವನಾಗಿದ್ದ ಅಗ್ನಿವೇಶನು ಪ್ರಧಮತಃ, ಮಿಕ್ಕವರು ಅನಂತರ, ಬೇರೆಬೇರೆ ತಂತ್ರ ಗಳನ್ನು ರಚಿಸಿದರೆಂತಲೂ ವರ್ಣಿತವಾಗಿದೆ. ಚರಕಸಂಹಿತೆಯ ಅನೇಕ ಅಧ್ಯಾಯಗಳ ಆರಂಭದಲ್ಲಿ "ಇತಿಹಾಸ್ಮಾಹ ಭಗವಾನಾತ್ರೇಯಃ” (ಅಂದರೆ ಭಗವಂತನಾದ ಆತ್ರೇಯ ಮುನಿಯು ಹೀಗೆ ಹೇಳುತ್ತಾನೆ) ಎಂತಲೂ, ಕೊನೆಯಲ್ಲಿ "ಅಗ್ನಿವೇಶಕೃತೇ ತಂತ್ರೇ ಚರಕ ಪ್ರತಿಸಂಸ್ಕೃತೇ” (ಅಂದರೆ ಅಗ್ನಿವೇಶನಿಂದ ರಚಿಸಲ್ಪಟ್ಟು ಚರಕನಿಂದ ಪ್ರತಿಸಂಸ್ಕಾರ ಮಾಡ ಲ್ಪಟ್ಟ ತಂತ್ರದಲ್ಲಿ) ಎಂತಲೂ ನಿರ್ದಿಷ್ಟವಾಗಿರುತ್ತದೆ ಈ ಸಂಹಿತೆಯ ಹೆಚ್ಚಿನ ಅಂಶವು ಶ್ಲೋಕರೂಪವಾಗಿರುತ್ತದಾದರೂ, ಅಲ್ಲಲ್ಲಿ ವಾಕ್ಯರೂಪವಾದ ಉಪದೇಶಗಳು ಕಾಣು ತ್ತವ ಶ್ಲೋಕಗಳು ಅಗ್ನಿವೇಶನಿಂದ ರಚಿಸಲ್ಪಟ್ಟವೆಂತಲೂ, ವಾಕ್ಯಗಳು ಚರಕನ ಸ್ವಯಂಕೃತ ವೆಂತಲೂ, ಕೆಲವರ ಅಭಿಪ್ರಾಯವಿದೆ ಅತಿಸಂಕ್ಷೇಪವಾಗಿ ಹೇಳಲ್ಪಟ್ಟ ಅಂಶವನ್ನು ವಿಸ್ತರಿಸಿ, ಅತಿವಿಸ್ತಾರವನ್ನು ಸಂಕ್ಷೇಪಿಸಿ, ಹಳೇದಾದ ಗ್ರಂಧವನ್ನು ಪುನಃ ಹೊಸತು ಮಾಡುವದು ಸಂಸ್ಕಾರ ಮಾಡುವವನ ಕೆಲಸವೆಂಬದು ಚರಕಸಂಹಿತೆಯಲ್ಲಿಯೇ ಹೇಳಲ್ಪಟ್ಟಿದೆ. ವಾಕ್ಯಗಳು ಮಾತ್ರ ಚರಕಕೃತ ಎಂಬದು ಬರೇ ಊಹೆ. ಚರಕಸಂಹಿತೆಯ 120 ಅಧ್ಯಾಯಗಳೊಳಗೆ ಕಡೇ 41 ಅಧ್ಯಾಯಗಳನ್ನು ಕಾಲಾಂತರದಲ್ಲಿ ದೃಢಬಲ ಎಂಬವನು ಸೇರಿಸಿದ್ದೆಂತ ಪ್ರಫುಲ್ಲಚಂದ್ರರಾಯರವರು ಹೇಳುತ್ತಾರೆ. ಔಷಧ ಅಧ್ಯಾಯಗಳೊಳಗೆ 17, ಸಿದ್ದಿ ಸ್ಥಾನ (ಅಧ್ಯಾಯಗಳು 12) ಮತ್ತು ಕಲ್ಪಸ್ಥಾನ (ಅಧ್ಯಾಯಗಳು 12), ಇವುಗಳಿಂದ ಪಂಚನದಪುರದಲ್ಲಿ ಹುಟ್ಟಿದವನಾದ ದೃಢಬಲನು ಚರಕನ ತಂತ್ರವನ್ನು ಸಂಪೂರ್ಣಮಾಡಿದನೆಂತ ಗ್ರಂಧದ ಕೊನೆಯಲ್ಲ ಹೇಳಲ್ಪಟ್ಟರೂ, ಆ ಭಾಗಗಳಲ್ಲಿ ಅಪೂರ್ಣವಾದ ಅಂಶಗಳನ್ನು ತುಂಬಿಸುವದು, ಅಶುದ್ಧವಾದಂಶಗಳನ್ನು ಶುದ್ಧಪಡಿಸುವದು, ಇತ್ಯಾದಿ ಪರಿಷ್ಕಾರಗಳನ್ನು ದೃಢಬಲನು ಧಾರಾಳವಾಗಿ ಮಾಡಿರುತ್ತಾನೆಂತಲ್ಲದೆ, ಆ ಅಧ್ಯಾಯಗಳು ಮೊದಲು ಚರಕನ ತಂತ್ರದಲ್ಲಿ ಇರಲಿಲ್ಲ ಎಂತ ತಾತ್ಪರ್ಯವಾಗಿರಲಿಕ್ಕಿಲ್ಲ. ಯಾಕೆದರೆ, ಸೂತ್ರಸ್ಥಾನದಲ್ಲಿ ಕಡೇ ದಾದ 30ನೇ ಅಧ್ಯಾಯದಲ್ಲಿ ಇಡೀ ತಂತ್ರದ 120 ಅಧ್ಯಾಯಗಳೂ ನಿರ್ದಿಷ್ಟವಾಗಿವೆ, ಮತ್ತು ದೃಢಬಲನಿಂದ ಸಂಸ್ಕಾರಮಾಡಲ್ಪಟ್ಟವೆಂಬ 41 ಅಧ್ಯಾಯಗಳೊಳಗೆ ಅನೇಕ ಅಧ್ಯಾಯಗಳ ಆರಂಭದಲ್ಲಿ ಅಗ್ನಿವೇಶನು ಆತ್ರೇಯನ ಹತ್ತರ ಮಾಡಿದ ಪ್ರಶ್ನೆಗಳು ಸಹ