ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಉಪೋದ್ಘಾತ

                              XXXV11

ಕಾಣುತ್ತವೆ. ಹೀಗೆಯೇ ಸುಶ್ರುತಸಂಹಿತೆಯಲ್ಲಿ ಕಡೇ ಭಾಗವಾದ ಉತ್ತರತಂತ್ರ ಎಂಬ 66 ಅಧ್ಯಾಯಗಳನ್ನು ನಾಗಾರ್ಜುನನೆಂಬ ಬೌದ್ಧನು ಕಾಲಾಂತರದಲ್ಲಿ ಸೇರಿಸಿದ್ದೆಂತ ಕೆಲವರ ಮತವಿರುತ್ತದೆ. ಆದರೆ ಸುಶ್ರುತಸಂಹಿತೆಯಲ್ಲಿ 'ಅಧ್ಯಯನ ಸಂಪ್ರದಾನೀಯಂ' ಎಂಬ ಮೂರನೇ ಅಧ್ಯಾಯದಲ್ಲಿ ಉತ್ತರತಂತ್ರದ 66 ಅಧ್ಯಾಯಗಳು ಸೇರಿ, ಇಡೀ ತಂತ್ರದ 186 ಅಧ್ಯಾಯಗಳ ವಿಷಯಗಳು ಸೂಚಿಸಲ್ಪಟ್ಟಿವೆ ಮತ್ತು ಆ ಉತ್ತರತಂತ್ರದ ವಿಷಯವಾಗಿ

        “ಶ್ರೇಷ್ಠತ್ವಾದುತ್ತರಂ ಹ್ಯೇತತ್ತಂತ್ರಮಾಹುರ್ಮಹರ್ಷಯಃ |
        ಬಹ್ವರ್ಧಸಂಗ್ರಹಾಚ್ಚ್ರೇಷ್ಠಮುತ್ತರಂ ಚಾಪಿ ಪಶ್ಚಿಮಮ್”||

ಎಂಬ ವಿವರ ಕಾಣುತ್ತದೆ. ಅಂದರೆ “ಈ ತಂತ್ರವು ಶ್ರೇಷ್ಠವಾದ್ದರಿಂದ ಇದಕ್ಕೆ ಉತ್ತರ ಎಂತ ಮಹರ್ಷಿಗಳು ಹೇಳುತ್ತಾರೆ. ಅದರ ಶ್ರೇಷ್ಠತ್ವವು ಅದರಲ್ಲಿ ಬಹಳವಾದ ಅರ್ಧಸಂಗ್ರಹಿಸಲ್ಪಟ್ಟಿರುವದರಿಂದ ಆಗಿರುತ್ತದೆ. ಅದಲ್ಲದೆ ಉತ್ತರ ಎಂದರೆ ಕಡೇದು ” ಈ ಉತ್ತರತಂತ್ರದ ಅನೇಕ ಅಧ್ಯಾಯಗಳಲ್ಲಿಯೂ ಸುಶ್ರುತನ ಪ್ರಶ್ನೆಗಳಿಗೆ ಉತ್ತರವಾಗಿ ಧನ್ವಂತರಿಯ ಅವತಾರನಾದ ದಿವೋದಾಸನು ಮಾಡಿದ ಉಪದೇಶವೆಂತ ನಿರ್ದಿಷ್ಟವಾಗಿದೆ. ಉತ್ತರತಂತ್ರ ಸಹ ಸುಶ್ರುತನಿಂದಲೇ ಕಡೆಗೆ ರಚಿತವಾದ್ದೆಂತ ಯಾಕೆ ತಿಳಿಯಬಾರದೆಂಬದಕ್ಕೆ ಸಮರ್ಧ ಕಾರಣವೇನೂ ಕಾಣುವದಿಲ್ಲ ಚರಕಸಂಹಿತೆಯಲ್ಲಿರುವ ಕೆಲವು ಶ್ಲೋಕಗಳೇ ಸುಶ್ರುತದಲ್ಲಿಯೂ ಕಾಣುವದರಿಂದ, ಅವುಗಳೆಲ್ಲಾ ತಂತ್ರವನ್ನು ಸಂಸ್ಕರಿಸುವದಕ್ಕೋಸ್ಕರ ನಾಗಾರ್ಜುನನಿಂದ ಹೊಸತಾಗಿ ಕೂಡಿಸಲ್ಪಟ್ಟವುಗಳು ಆಗಿರಬೇಕೆಂತ ಊಹಿಸುವದು ಸರಿ ಕಾಣುವದಿಲ್ಲ ಅವುಗಳು ಈ ಎರಡು ಸಂಹಿತೆಗಳಿಗೂ ಹಿಂದೆ ರಚಿತವಾಗಿದ್ದ ಗ್ರಂಧಗಳಿಂದ ತೆಗೆಯಲ್ಪಟ್ಟವು ಎಂಬ ಅನು ಮಾನವೇ ಬಲವಾದ್ದಾಗಿ ಕಾಣುತ್ತದೆ.

 3. ಅಗ್ನಿವೇಶನ ಸಹಪಾರಿಯಾದ ಭೇಳನು (ಅಧವಾ ಭೇಡನು) ರಚಿಸಿದ ತಂತ್ರದ ಪ್ರತಿಯು ತಂಜಾವೂರು ಅರಮನೆಯ ಪುಸ್ತಕಾಲಯದಲ್ಲಿ ಸಿಕ್ಕಿದೆ ಎಂತಲೂ, ಅದು ಅಪೂರ್ಣವಾಗಿರುತ್ತದೆಂತಲೂ, ಬರದ್ದು ಕಾಣುತ್ತದೆ ಹಾರೀತಸಂಹಿತೆಯೆಂಬದೊಂದು ಗ್ರಂಧ ಛಾಪೆಯಾಗಿದೆ. ಅದು ಹಾರೀತನಿಗೆ ಆತ್ರೇಯನು ಮಾಡಿದ ಉಪದೇಶವಾಗಿ ಅದರಲ್ಲಿ ಉಕ್ತವಾಗಿದೆ. ಅದರ ಕಡೇ ಅಧ್ಯಾಯದಲ್ಲಿ ಕಾಣುವ
        ಚರಕಃ ಸುಶ್ರುತಶ್ಚೈವ ವಾಗ್ಭಟಶ್ಚ ತಧಾಪರಃ | 
        ಮುಖ್ಯಾಶ್ಚ ಸಂಹಿತಾ ವಾಚ್ಯಾಸ್ತಿಸ್ರ ಏವ ಯುಗೇಯುಗೇ |
        ಅತ್ರಿಃ ಕೃತಯುಗೇ ವೈದ್ಯೋ ದ್ವಾಪರೇ ಸುಶ್ರುತೋ ಮತಃ |
        ಕಲೌ ವಾಗ್ಭಟನಾಮಾ ಚ ಗರಿಮಾತ್ರ ಪ್ರದೃಶ್ಯತೇ ||

ಎಂದರೆ.-- “ಚರಕ, ಸುಶ್ರುತ ಮತ್ತು ವಾಗ್ಭಟ ಎಂಬ ಮೂರು ಸಂಹಿತೆಗಳನ್ನು ಮುಖ್ಯವಾಗಿ ಓದತಕ್ಕದ್ದು. ಕೃತಯುಗದಲ್ಲಿ ಅತ್ರಿ, ದ್ವಾಪರದಲ್ಲಿ ಸುಶ್ರುತ ಮತ್ತು ಕಲಿಯುಗದಲ್ಲಿ ವಾಗ್ಭಟ ಶ್ರೇಷ್ಠ ವೈದ್ಯರಾಗಿ ಕಾಣುತ್ತಾರೆ” ಎಂಬ ವಚನಗಳಿಂದ ಆ ಗ್ರಂಥವನ್ನು ರಚಿಸಿದ ಹಾರೀತನು ಅಗ್ನಿವೇಶನ ಸಹಪಾರಿಯಲ್ಲ ಎಂಬದು ಸ್ಪಷ್ಟವಾಗುತ್ತದೆ. ಯಾಕೆಂದರೆ ಚರಕ ಮತ್ತು ಸುಶ್ರುತಸಂಹಿತೆಗಳು ಉಂಟಾಗಿ ಬಹುಕಾಲದನಂತರ ವಾಗ್ಭಟ ರಚಿಸಲ್ಪಟ್ಟದ್ದೆಂಬದು ನಿರ್ವಿವಾದವಾದ ಅಂಶ. ಅದಲ್ಲದೆ, ಆ ಹಾರೀತಸಂಹಿತೆಯ ಕಾವ್ಯರಚನಾರೀತಿಯೇ ಅದರ ಅರ್ವಾಚೀನತೆಯನ್ನು ತೋರಿಸುತ್ತದೆ. ವಾಗ್ಭಟನ ಕಾಲದಲ್ಲಿ ಭೇಳನ ಗ್ರಂಧವಿದ್ದರೂ,