ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

    -290-  

            XVI ನೇ ಅಧ್ಯಾಯ.
    ಶಶ ಸದ್ವೃತ್ತ (ಸದಾಚಾರ) ನಿರ್ದೇಶ.
1       ಯಶಸ್ಯಂ ಸ್ವರ್ಗ್ಯಮಾಯುಷ್ಯಂ ಧನಧಾನ್ಯವಿವರ್ಧನಂ| ದೇವತಾತಿ   ದೇವತಾತಿಧಿವಿಪ್ರಾಣಾಂ ಪೂಜನಂ ಗೋತ್ರವರ್ಧನಂ|| ಎಪ್ರರ ಪೂಜೆ (ಸು.505.) 

ದೇವರ, ಅತಿಧಿಗಳ ಮತ್ತು ಬ್ರಾಹ್ಮಣರ ಪೂಜೆಮಾಡುವದರಿಂದ ಕೀರ್ತಿಯೂ, ಸ್ವರ್ಗವೂ, ಆಯುರ್ವೃದ್ದಿಯೂ, ಧನಧಾನ್ಯವೃದ್ಧಿಯೂ, ಕುಲವೃದ್ಧಿಯೂ ದೊರಕುವವು.

2 ಸಂಚಾರ ತತ್ರಾದಿತ ಏವ ನೀಚನಖರೋಮ್ಣಾ ಶುಚಿನಾ

        ಶುಕ್ಲವಾಸಸಾ ಲಘೂಷ್ಣೀಷಛತ್ರೋಪಾನತ್ಕೇನ 
        ದಂಡಪಾಣಿನಾ ಕಾಲೇ ಹಿತಮಿತಮಧುರ 
        ಪೂರ್ವಾಭಿಭಾಷಿಣಾ ಬಂಧುಭೂತೇನ 
        ಭೂತಾನಾಂ ತು ಗುರುವೃದ್ಧಾ ನುಮತೇನ 
        ಸುಸಹಾಯೇನಾನನ್ಯಮನಸಾ ಖಲೂಪಚರಿತವ್ಯಂ 
        ತದಪಿ ನ ರಾತ್ರೌ ನ 
        ಕೇಶಾಸ್ಥಿಕಂಟಕಾಶ್ಮತುಷಭಸ್ಮೋತ್ಕರಕಪಾಲಾಂಗಾರಾ 
        ಮೇಧ್ಯಸ್ಥಾನಬಲಿಭೂಮಿಷು ನ 
        ವಿಷಮೇಂದ್ರಕೀಲಚತುಷ್ಪಧಶ್ವಭ್ರಾಣಾಮುಪರಿಷ್ಟಾತ್ |
        (ಸು.507 )
    ಮೊದಲಾಗಿ ಉಗುರುಗಳನ್ನೂ ರೋಮಗಳನ್ನೂ ಕತ್ತರಿಸಿ ಗಿಡ್ಡಮಾಡಿಕೊಂಡು, ಶುಚಿಯಾಗಿ, ಬಿಳೇ ವಸ್ತ್ರಗಳನ್ನು ಧರಿಸಿಕೊಂಡು, ಹಗುರವಾದ ರುಮಾಲವನ್ನಿಟ್ಟುಕೊಂಡು, ಕೊಡ ಹಿಡಕೊಂಡು, ಪಾದರಕ್ಷೆ ಹಾಕಿಕೊಂಡು, ಕೈಯಲ್ಲಿ ದಂಟಿಯುಳ್ಳವನಾಗಿ, ಉಚಿತಕಾಲದಲ್ಲಿ ಹಿತವಾಗಿಯೂ, ಮಿತವಾಗಿಯೂ, ಸವಿಯಾಗಿಯೂ, ಮುಂದಾಗಿಯೂ ಮಾತಾಡುವವನಾಗಿ, ಸರ್ವ ಪ್ರಾಣಿಗಳಲ್ಲಿಯೂ ಬಂಧುಭಾವವುಳ್ಳವನಾಗಿ, ಗುರುಗಳಿಗೂ ಹಿರಿಯರಿಗೂ ವಿಧೇಯ ನಾಗಿ, ಒಳ್ಳೇ ಸಂಗಾತಿಗಳೊಂದಿಗೆ, ಬೇರೆ ಕಡೆ ಮನಸ್ಸಿಡದೆ, ಸಂಚರಿಸತಕ್ಕದ್ದು (ಅಧವಾ ಒಡನಾಡಬೇಕು) ಅಂಧಾ ಸಂಚಾರವನ್ನು ರಾತ್ರಿಯಲ್ಲಿಯಾಗಲಿ, ಕೂದಲು, ಎಲುಬು, ಮುಳ್ಳು, ಕಲ್ಲು, ತವುಡು, ಬೂದಿರಾಶಿ, ಕಪಾಲ, ಮಸಿ, ಮಲ, ಇವುಗಳ ಸ್ಥಾನಗಳಲ್ಲಿಯಾಗಲಿ, ಬಲಿಭೂಮಿಯಲ್ಲಿಯಾಗಲಿ, ಎತ್ತರವಾದ ಗುಡ್ಡಗಳ ಸುತ್ತು ಆಗಲಿ, ನಾಲ್ಕು ಮಾರ್ಗಗಳು ಕೂಡಿರುವ ಸ್ಥಳದ ಸಮೀಪವಾಗಲಿ, ಖನಿಗಳ ಸುತ್ತು ಆಗಲಿ, ಮಾಡಕೂಡದು.

3. ನ ರಾಜದ್ವಿಷ್ಟಪರುಷಪೈಶುನ್ಯಾನೃತಾನಿ ವದೇತ್ | ಸಿಷ್ಠುರ,ಚಾಡಿ ನ ದೇವಬ್ರಾಹ್ಮಣ ಪಿತೃಪರಿವಾದಾಂಶ್ಚ ನ ಮುಂತಾದದ್ದು ನರೇಂದ್ರದ್ವಿಷ್ಟೋನ್ಮತ್ತಪತಿತಕ್ಷುದ್ರನೀಚಾಚಾ ನಿಂದ್ಯ ರಾನುಪಾಸೀತ (ಸು. 507.)


ನಿಂದ್ಯ ರಾಜವಿರುದ್ಧವಾದ, ಕ್ರೂರವಾದ, ಚಾಡಿಯಾದ, ಅಧವಾ ಸುಳ್ಳಾದ ಮಾತುಗಳನ್ನಾಡಬಾರದು, ದೇವರನ್ನೂ, ಬ್ರಾಹ್ಮಣರನ್ನೂ, ಪಿತೃಗಳನ್ನೂ, ನಿಂದಿಸಬಾರದು. ಅರಸನ