ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-289- ಅ XV

ನಾಲ್ಕು ಕಾಲುಗಳುಳ್ಳವುಗಳೊಳಗೆ ಹೆಣ್ಣೂ, ಪಕ್ಷಿಗಳೊಳಗೆ ಗಂಡೂ, ದೊಡ್ಡ ಶರೀರವುಳ್ಳ ಜಾತಿಗಳೊಳಗೆ ಅಲ್ಪ ಶರೀರದವುಗಳೂ, ಅಲ್ಪ ಶರೀರವುಳ್ಳ ಜಾತಿಗಳೊಳಗೆ ದೊಡ್ಡ ಶರೀರದವುಗಳೂ, ಹೆಚ್ಚು ಪ್ರಧಾನವಾಗಿರುತ್ತವೆ. ಹೀಗೆಯೇ, ಒಂದೇ ಜಾತಿಗೆ ಸೇರಿದವು ಗಳೊಳಗೆ ದೊಡ್ಡ ಶರೀರವುಳ್ಳದ್ದಕ್ಕಿಂತ ಕೃಶಶರೀರವುಳ್ಳದ್ದು ಹೆಚ್ಚು ಪ್ರಧಾನವಾಗಿರುತ್ತದೆ.

ಪ್ರಮಾಣಾಧಿಕಾಸ್ತು ಸ್ವಜಾತೌ ಚಾಲ್ಪಸಾರಾ ಗುರವಶ್ಚ | (ಸು. 206 ) ಸ್ವಜಾತಿಯಲ್ಲಿ ಅಧಿಕಪ್ರಮಾಣವುಳ್ಳವು ಗುರು ಮತ್ತು ಅಲ್ಪವಾಗಿ ಸಾರವುಳ್ಳವು ಆಗಿರುತ್ತವೆ

39 ಅತೀವ ರೂಕ್ಷಂ ಮಾಂಸಂ ತು ವಿಹಂಗಾನಾಂ ಫಲಾಶಿನಾಂ | ಪಕ್ಷಿಗಳಲ್ಲಿ ಆ ಬೃಂಹಣಂ ಮಾಂಸಮತ್ಯರ್ಧಂ ಖಗಾನಾಂ ಪಿಶಿತಾಶಿನಾಂ | ಹಾರ ಭೇದದಿಂದ ಗುಣಭೇದ ಮತ್ಸ್ಯಾಶಿನಾಂ ಪಿತ್ತಕರಂ ವಾತಘ್ನಂ ಧಾನ್ಯ*ಚಾರಿಣಾಂ | (ಸು. 206 )

ಪಕ್ಷಿಗಳೊಳಗೆ ಫಲ ತಿಂದು ಜೀವಿಸುವವುಗಳ ಮಾಂಸವು ಅತಿರೂಕ್ಷ, ಮಾಂಸ ತಿಂದು ಜೀವಿಸುವವುಗಳ ಮಾಂಸವು ಅತಿಯಾಗಿ ಬೃಂಹಣ (ಪುಷ್ಟಿಕರ), ಮಾನುಗಳನ್ನು ತಿಂದು ಜೀವಿಸುವವುಗಳ ಮಾಂಸವು ಪಿತ್ತಕರ, ಮತ್ತು ಧಾನ್ಯಗಳನ್ನು ತಿಂದು ಜೀವಿಸುವವುಗಳ ಮಾಂಸವು ವಾತಹರ, ಆಗಿರುತ್ತದೆ

ಷರಾ * ಧಾನ'ದ ಸ್ಥಾನದಲ್ಲಿ 'ಧನ್ವ' ಎಂತ ಪಾರಾಂತರ ಕಾಣುತ್ತದೆ 'ವಾತಘ್ನಂ ಧನ್ಯಚಾರಿಣಾಂ' ಎಂದರೆ 'ನೀರಾಶ್ರಯ ಕಡಿಮೆಯಾದ ಬಂಜರುಸ್ಥಳಗಳಲ್ಲಿ ಸಂಚರಿಸುವವುಗಳ ಮಾಂಸವು ವಾತಹರ' ಎಂತ ಅರ್ಥವಾಗುತ್ತದೆ