ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ XV - 288 - ತಲೆ ವಿಶೇಷವಾಗಿ ಲಘುವಾಗಿರುತ್ತದೆ; ಅವಗಳು ದೂರ ಸಂಚಾರವಿಲ್ಲದೆ ಬುಗ್ಗೆನೀರು ಕುಡಿದು ಇರುವಂಧವಾದ್ದರಿಂದ, ತಲೆಭಾಗ ಸ್ವಲ್ಪ ಬಿಟ್ಟು ಮಿಕ್ಕದ್ದೆಲ್ಲಾ ಅತಿಗುರುವಾಗಿರುತ್ತದೆ ದೊಡ್ಡ ಹಳ್ಳದಲ್ಲಿ ಮೀನುಗಳು ಎದೆಯ ಮೇಲೆ ಸಂಚರಿಸುವಂಧವಾದ್ದರಿಂದ, ಅವುಗಳ ಕೆಳಗಿನ ಭಾಗವು ಗುರು ಮತ್ತು ಮುಂದಿನ ಭಾಗವು ಲಘು ಎಂತ ಹೇಳಲ್ಪಟ್ಟಿದೆ ಶಿರಃ ಸ್ಕಂಧಂ ಕಟೀ ಪ್ರುಷ್ಟಂ ಸಕ್ದಿ ನೀ ಚಾತ್ಮಪಕ್ಷಯೋಃ | ಗುರುಪೂರ್ವಂ ವಿಜಾನೀಯಾದ್ಘಾತವಸ್ತು ಯಧೋತ್ತರಂ || ಸರ್ವಸ್ಯ ಪ್ರಾಣಿನೋ ದೇಹೇ ಮಧ್ಯೊ ಗುರುರುದಾಹೃತಃ || ಪೂರ್ವಭಾಗೋ ಗುರುಃ ಪುಂಸಾಮಧೋಭಾಗಸ್ತು ಯೋಷಿತಾಂ || ಉರೂಗ್ರೀವಂ ಮಹಂಗಾನಾಂ ವಿಶೇಷೇಣ ಗುರು ಸ್ಮೃತಂ | ಸಕೋಪಾತ್ತ ಮೋ ದಿಷ್ಟೋ ಮಧ್ಯಭಾಗಸ್ತು ಪಕ್ಷಿಣಾಂ || (ಸು 206.) ತಲೆ, ಮುಂಡ, ಸೊಂಟ, ಬೆನ್ನು, ತೊಡೆಗಳು, ಇವು ಯಧಾಪೂರ್ವವಾಗಿಯೂ ರಕ್ತಾದಿ ಧಾತುಗಳು ಯಥೋತ್ತರವಾಗಿಯೂ ಗುರು ಎಂತ ತಿಳಿಯಬೇಕು, ಮತ್ತು ತೊಡೆಗಳಲ್ಲಿ ಹಿಂದಿನ ಭಾಗವು ಮುಂದಿನ ಭಾಗಕ್ಕಿಂತ ಗುರು ಸರ್ವ ಪ್ರಾಣಿಗಳಲ್ಲಿಯೂ ದೇಹದ ಮಧ್ಯಭಾಗವೇ ಗುರು ಎಂತ ಹೇಳಲ್ಪಡುತ್ತದೆ ಗಂಡಿನಲ್ಲಿ (ಮೇಲಿನ) ಮುಂಭಾಗವೂ, ಹೆಣ್ಣಿನಲ್ಲಿ (ಕೆಳಗಿನ) ಹಿಂಭಾಗವೂ ಗುರು ಪಕ್ಷಿಗಳಲ್ಲಿ ಎದೆ ಮತ್ತು ಕುತ್ತಿಗೆ ವಿಶೇಷವಾಗಿ ಗುರು. ಪಕ್ಷಿಗಳೊಳಗೆ ರೆಕ್ಕಗಳನ್ನು ಕಡಿದು ಉಳಿದ ಮಧ್ಯಭಾಗವು ಸಮ (ಅತಿಗುರುವೂ ಅತಿಲಘುವೂ ಅಲ್ಲ) 37 ಅರೋಚಕ೦ ಪ್ರತಿಶ್ಯಾಯಂ ಗುರು ಶುಷ್ಕಂ ಪ್ರಕೀರ್ತಿತಂ | ವಿಷವ್ಯಾಧಿಹತಂ ಮೃತ್ಯುಂ ಬಾಲಂ ಛರ್ದಿ೦ ಚ ಕೋಪಯೇತ್ || ಕಾಸಶ್ವಾಸಕರಂ ವೃದ್ದಂ ತ್ರಿದೋಷಂ ವ್ಯಾಧಿದೂಷಿತಂ | ಕ್ಲಿನ್ನಮುತ್ತೈಶಜನನಂ ಕೃಶಂ ವಾತಪ್ರಕೂಪಣಂ | ಏಭ್ಯೊನ್ಯೆಷಮುಪಾದೇಯಂ ಮಾಂಸಮಿತಿ || (ಸು. 205.) ಒಣಗಿದ ಮಾಂಸವು ಗುರುವಾಗಿ, ಅದರಿಂದ ಅರುಚಿಯೂ, ನೆಗಡಿಯೂ, ವಿಷದಿಂದ ಅಥವಾ ರೋಗದಿಂದ ಸತ್ತದರ ಮಾಂಸದಿಂದ ಮೃತ್ಯುವೂ, ಎಳೆದಾದ ಮಾಂಸದಿಂದ ವಾಂತಿಯೂ, ಮುದಿಯಾದದರ ಮಾಂಸದಿಂದ ಉಬ್ಬಸವೂ, ಕೆಮ್ಮು, ರೋಗದಿಂದ ದೂಷಿತವಾದ ಮಾಂಸದಿಂದ ತ್ರಿದೋಷವೂ. ಹಸಿ ಮಾಂಸದಿಂದ ಅಸಹ್ಯತೆಯೂ, ಬಡೆಯಾದ ಮಾಂಸದಿಂದ ವಾತಪ್ರಕೋಪವೂ ಉಂಟಾಗುವದಾದ್ದರಿಂದ, ಈ ದೋಷಗಳಿಲ್ಲದ ಮಾಂಸವೇ ಸ್ವೀಕ ರಿಸಲ್ಪಡಬೇಕಾಗಿರುತ್ತದೆ. 38. ಸ್ತ್ರಿಯಶ್ಚತುಪ್ಪಾದೇಷು, ವುಮಾಂಸೋ ವಿಹಂಗೇಷು, ಮಹಾಶರೀ ರೇಷ್ಕಲ್ಪಶರೀರಾ ಅಲ್ಪಶರೀರೇಷು ಮಹಾಶರೀರಾಃ, ಪ್ರಧಾನತಮಾ, ಏವಮೇಕಜಾತೀಯಾನಾಂ ಮಹಾಶರೀರೇಭ್ಯಃ ಕೃಶಶರೀರಾಃ ಪ್ರಧಾನತಮಾಃ | (ಸು. 205.) ಅಯೋಗ ಸಿ :