- 293 - ಆ XVI ರಾತ್ರಿಗಳಲ್ಲಿ ದೇವರ ಮನೆ, ಯಜ್ಞಶಾಲೆ, ಅಂಗಳ, ನಾಲ್ಕು ಮಾರ್ಗಗಳು ಕೂಡಿದ ಸ್ಥಳ, ತೋಟ, ಸ್ಮಶಾನ, ಈ ಸ್ಥಳಗಳನ್ನು ಆಶ್ರಯಿಸಬಾರದು. ಒಂಟಿಗನಾಗಿ ಖಾಲಿಯಾಗಿದ್ದ ಮನೆಯನ್ನಾಗಲಿ, ಅಡವಿಯನ್ನಾಗಲಿ, ಪ್ರವೇಶಿಸಬಾರದು ಪಾಪವೃತ್ತಿಯವರಾದ ಸ್ತ್ರೀಯ ರನ್ನಾಗಲಿ, ಮಿತ್ರರನ್ನಾಗಲಿ, ಚಾಕರರನ್ನಾಗಲಿ ಇಟ್ಟುಕೊಳ್ಳಬಾರದು. ಉತ್ತಮರ ಹತ್ತರ ವಿರುದ್ಧ ಕಟ್ಟಿಕೊಳ್ಳ ಬಾರದು ಕೀಳುಜನರ ಸೇವೆ ಮಾಡಬಾರದು ನಾಲಿಗೆಯನ್ನು ರುಚಿಸ ಬಾರದು. ಮಾನವಂತನಲ್ಲದವನನ್ನು ಆಶ್ರಯಿಸಬಾರದು ಭಯವನ್ನು ಕಲ್ಪಿಸಬಾರದು. ಸಾಹಸವನ್ನಾಗಲಿ, ಅತಿಯಾದ ನಿದ್ರೆ, ಚಾಗರ, ಸ್ನಾನ, ಪಾನ, ಅಶನಗಳನ್ನಾಗಲಿ, ಮಾಡ ಬಾರದು ಕಾಲಿನ ಮೊಣಗಂಟನ್ನು ಮೇಲೆ ಮಾಡಿಕೊಂಡು ಹೆಚ್ಚು ಕಾಲ ನಿಲ್ಲಬಾರದು. ಹಾವುಗಳ, ದಾಡೆಮೃಗಗಳ ಮತ್ತು ಕೋಡುಮೃಗಗಳ ಸವಿಾಪಕ್ಕೆ ಹೋಗಬಾರದು ಮೂಡಣ ಗಾಳಿಯನ್ನೂ, ಬಿಸಿಲನ್ನೂ, ಮಂಜನ್ನೂ, ಬರುಗಾಳಿಯನ್ನೂ ತಪ್ಪಿಸಿಕೊಳ್ಳಬೇಕು. ಜಗಳವನ್ನು ಆರಂಭಿಸಬಾರದು ಚಂಚಲಚಿತ್ತನಾಗಿಯಾಗಲಿ, ಬಾಯಿ ಶುಚಿಮಾಡಿ ಕೊಳ್ಳದೆಯಾಗಲಿ, ಅಗ್ನ್ಯುಪಾಸನಮಾಡಬಾರದು ಮತ್ತು ಅಗ್ನಿಯನ್ನು ಕೆಳಗೆ ಮಾಡಿ ಉರಿಸಬಾರದು. ಶ್ರಮ ಪರಿಹರಿಸಿಕೊಳ್ಳದೆ, ಬಾಯಿಯಲ್ಲ ಎಂಜಲಿಟ್ಟು ಕೊಂಡು, ಅಥವಾ ಬತ್ತಲೆಯಾಗಿ ಸ್ನಾನಮಾಡಬಾರದು ಸ್ನಾನದ ಅಂಗವಸ್ತ್ರದಿಂದ ತಲೆಯನ್ನು ಒರಸಬಾರದು. ತಲೆಕೂದಲುಗಳ ಕೂಡಿಗಳನ್ನು ಕೂಡವಲಬಾರದು ಸ್ನಾನಮಾಡಿ ಆ ಎರಡು ವಸ್ತ್ರಗಳನ್ನೇ ಧರಿಸಬಾರದು 11. ನಾನ್ಯಜುಃ ಕ್ಷುಯಾನ್ನಾದ್ಯಾತ ನ ಶಯಾತ | ನ ವೇಗಿತೋನ್ಯ ಕಾರ್ಯಃ ಸ್ಯಾತ್ | ನ ವಾಯ್ದಗ್ನಿಸಲಿಲಸೋಮಾರ್ಕದ್ವಿಜಗುರುಪ್ರತಿ ಮುಖಂ ನಿಷ್ಠೀವಿಕಾವಾತವರ್ಚೋಮೂತ್ರಾಣ್ಯುತ್ಸೃಬೇತ್ | ನ ಪಂ ವೇಗೋತ್ಸರ್ಜನ ಧಾನಮವಮೂತ್ರಯೇತ್ | ನ ಜನವತಿ ನಾನ್ನ ಕಾಲೇ ನ ಒಪೈಹೋ ಮತ್ತು ಸ್ತ್ರೀ “ ಎಷಯ ಮಾಧ್ಯಯನಬಲಮಂಗಲಕ್ರಿಯಾಸು ಶ್ಲೇಷ್ಮಶಿಂಘಾನಕಂ ಮುಂಚೇತ್ | ನ ಸ್ತ್ರಿಯಮವಚಾನೀತ ನಾಎಶ್ರಂಭಯೇತ್ ನ ಗುಹ್ಮಮನುಶ್ರಾವ ಯೇತ್ ನಾಧಿಕುರ್ಯಾತ್ (ಚ 47-48 ) ಸಮಕಾಯನಾಗಿರದೆ ಸೀನಬಾರದು, ಉಣ್ಣಬಾರದು ಮತ್ತು ಮಲಗಬಾರದು (ನೀನುಮೂತ್ರ ಮೊದಲಾದ) ವೇಗವುಳ್ಳವನಾದಾಗ್ಗೆ ಅನ್ಯ ಕಲಸ ಮಾಡಬಾರದು ಗಾಳಿಗೂ, ಬೆಂಕಿಗೂ, ನೀರಿಗೂ, ಚಂದ್ರನಿಗೂ, ಸೂರ್ಯನಿಗೂ, ದ್ವಿಜರಿಗೂ, ಗುರುವಿಗೂ, ಎದುರಾಗಿ ಎಂಜಲುಗಿಯೋಣ (ಧೂಕಾರ)ವನ್ನೂ, ವಾಯು-ಮಲ-ಮೂತ್ರಗಳ ವಿಸರ್ಜನವನ್ನೂ ಮಾಡ ಬಾರದು. ಮಾರ್ಗದಲ್ಲಿ ಮೂತ್ರ ಮಾಡಬಾರದು. ಜನರಿರುವಲ್ಲಿ, ಉಣ್ಣು ವಾಗ್ಗ ಮತ್ತು ಜಪ-ಹೋಮ-ಅಧ್ಯಯನ-ಬಲಿ-ಮಂಗಲಕೆಲಸದ ಕಾಲದಲ್ಲಿ ಕಫವನ್ನಾಗಲ, ಮೂಗಿನ ಸಿಂಬಳವನ್ನಾಗಲಿ, ಹೊರಗೆ ಹಾಕಬಾರದು. ಸ್ತ್ರೀಯರಿಗೆ ಅವಮಾನ ಮಾಡಬಾರದು, ಅವ ರಲ್ಲಿ ಅತಿಯಾಗಿ ನಂಬಿಕೆ ಇಡಬಾರದು, ಅವರಿಗೆ ಗುಟ್ಟನ್ನು ಕೇಳಿಸಬಾರದು ಮತ್ತು ಅವ ರಿಗೆ ಅಧಿಕಾರ ಕೊಡಬಾರದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೩
ಗೋಚರ