ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-- 306 --
ಯೋಗಃ ಸುಖಾನುಬಂಧಃ | ಸಂಪ್ರಾಪ್ತಿರ್ಜಾತಿರಾಗತಿರಿತ್ಯನರ್ಧಾಂತರಂ ವ್ಯಾಧೇಃ ಸಾ ಸಂಖ್ಯಾಪ್ರಾಧಾನ್ಯವಿಧಿವಿಕಲ್ಪ ಬಲಕಾಲವಿಶೇಷೈಭಿ೯ ದ್ಯತೇ | ಸಂಖ್ಯಾ ಯಧಾಷ್ಟೌಜ್ವರಾಃ ಪಂಚಗುಲ್ಮಾಃ ಸಪ್ತ ಕುಷ್ಠಾನ್ಯೇವ ಮಾದಿ | ಪ್ರಾಧಾನ್ಯಂ ಪುನರ್ದೋಷಾಣಾಂ ತರತಮಯೋಗೇನೋಪ ಲಭ್ಯತೇ ತತ್ರ ದ್ವಯೋಸ್ತರಸ್ರ್ತಿಷು ತಮ ಇತಿ| ವಿಧಿರ್ನಾಮ ದ್ವಿವಿಧಾ ವ್ಯಾಧಯೋ ನಿಜಾಗಂತುಭೇದೇನ ತ್ರಿವಿಧಾಸ್ತಿದೋಷಭೇದೇನ ಚತು ರ್ವಿಧಾಃ ಸಾಧ್ಯಾಸಾಧ್ಯಮೃದುದಾರುಣಭೇದೇನ ಸೃಧಕ್ | ವಿಕಲ್ಪೋ ನಾಮ ಸಮವೇತಾನಾಂ ಪುನರ್ದೋಷಾಣಾಮಂಶಾಂಶಬಲವಿಕಲ್ಲೋ ಸ್ಮಿನ್ನಧೇ೯ | ಬಲಕಾಲವಿಶೇಷಃ ಪುನರ್ವ್ಯಾಧೀನಾಮೃತ್ವ ಹೋರಾತ್ರಾ ಹಾರಕಾಲವಿಧಿನಿಯತೋ ಭವತಿ | ತಸ್ಮಾದ್ವ್ಯಾಧೀನ್ ಭಿಷಗನುಪಹತ ಸತ್ವಬುದ್ದಿ ರ್ಹೇತ್ವಾದಿಭಿರ್ಭಾವೈರ್ಯಧಾವದನುಬುಧ್ಯೇತ|(ಚ. 202.)
1. ಹೇತು, 2, ನಿಮಿತ್ತ, 3, ಆಯತನ, 4, ಕರ್ತೃ, 5 ಕಾರಣ, 6, ಪ್ರತ್ಯಯ, 7, ಸಮುತ್ಥಾನ, 8 ನಿದಾನ, ಈ ಎಂಟು ಶಬ್ದಗಳೂ ಒಂದೇ ತಾತ್ಪರ್ಯವುಳ್ಳವು.ಇಂಧಾ ಹೇತುವು ಮೂರು ವಿಧ 1, ಹಿತವಲ್ಲದ ಇಂದ್ರಿಯವಿಷಯಗಳ ಸಂಘಟಣೆ, 2. ಪ್ರಜ್ಞೆಯ (ಜ್ಞಾನದ) ತಪ್ಪು ಮತ್ತು 3. (ಕಾಲಾದಿಗಳ) ಪರಿಪಾಕ. ಈ ತ್ರಿವಿಧವಾದ ಹೇತುವಿನಿಂದ ವ್ಯಾದಿಗಳು ಆಗ್ನೇಯ (ಪಿತ್ತಜ), ಸೌಮ್ಯ (ಕಫಜ),ವಾಯವ್ಯ (ವಾತಜ), ಎಂತ ಮೂರು ವಿಧವಾಗಿ, ಇನ್ನೊಂದು ಕ್ರಮದಲ್ಲಿ ರಾಜಸ, ತಾಮಸ, ಎಂತ ಎರಡು ವಿಧವಾಗಿ, ಹೊರಗೆ ಬರುತ್ತವೆ. ಈ ವ್ಯಾಧಿ ಶಬ್ದದ ಅರ್ಧದಲ್ಲಿ ಆಮಯ,ಗದ, ಆತಂಕ,ಯಕ್ಷ್ಮಾ, ಜ್ವರ, ವಿಕಾರ, ಎಂಬ ಶಬ್ದಗಳು ಉಪಯೋಗಿಸಲ್ಪಡುತ್ತವೆ. ಆ ವ್ಯಾಧಿಯು ನಿದಾನದಿಂದಲೂ, ಪೂರ್ವರೂಪ ದಿಂದಲೂ, ಲಿಂಗದಿಂದಲೂ, ಉಪಶಯದಿಂದಲೂ, ಸಂಪ್ರಾಪ್ತಿಯಿಂದಲೂ, ತಿಳಿಯಬರುತ್ತದೆ. ಅವುಗಳೊಳಗೆ ನಿದಾನವೆಂದರೆ ಕಾರಣವೆಂತ ಮೊದಲೇ ಹೇಳಲ್ಪಟ್ಟಿದೆ. ಪೂರ್ವರೂಪವೆಂಬದು ವ್ಯಾಧಿಯ (ಆರಂಭದ) ಉತ್ಪತ್ತಿಗೆ ಮೊದಲಿನ ಲಕ್ಷಣ. ವ್ಯಾಧಿಯ ಹೊರಗೆ ಬಂದ ಮೇಲಿನ ಲಕ್ಷಣವೇ ಲಿಂಗ ಎಂಬದು. ಇದೇ ಲಿಂಗ ಎಂಬ ಅರ್ಥದಲ್ಲಿ ಆಕೃತಿ, ಲಕ್ಷಣ, ಚಿಹ್ನ, ಸಂಸ್ಥಾನ, ವ್ಯಂಜನ, ರೂಪ, ಎಂಬ ಶಬ್ದಗಳೂ ಉಪಯೋಗಿಸಲ್ಪಡುತ್ತವೆ. ಹೇತುವಿಗೂ ವ್ಯಾಧಿಗೂ ಪ್ರತಿಕೂಲವಾದ ಮತ್ತು ಪ್ರತಿಕೂಲಾರ್ಧವನ್ನು ಸಂಪಾದಿಸತಕ್ಕ ಔಷಧ, ಆಹಾರ, ವಿಹಾರಗಳ ಸುಖಕರವಾದ ಉಪಯೋಗಕ್ಕೆ ಉಪಶಯವೆನ್ನುವದು, ವ್ಯಾಧಿಯ ಸಂಪ್ರಾಪ್ತಿ, ಜಾತಿ, ಆಗತಿ,ಎಂದರೆ ಒಂದೇ ಅರ್ಧ, ಸಂಪ್ರಾಪ್ತಿಯಲ್ಲಿ ಸಂಖ್ಯಾ, ಪ್ರಾಧಾನ್ಯ, ವಿಧಿ, ವಿಕಲ್ಪ, ಬಲಕಾಲ, ಇವುಗಳ ವಿಶೇಷಗಳಿಂದ ಭೇದಗಳಿವ. ಸಂಖ್ಯಾ ಎಂಬದು ಎಂಟು ಜ್ವರಗಳು, ಐದು ಗುಲ್ಮಗಳು, ಏಳು ಕುಷ್ಠಗಳು, ಎಂಬ ಹಾಗಿನವು. ಪ್ರಾಧಾನ್ಯವು ದೋಷಗಳ ತರತಮಯೋಗದಿಂದ ಉಂಟಾಗುತ್ತದೆ, ಎರಡು ಕೂಡಿದಲ್ಲಿ ತರ, ಮೂರು ಕೂಡಿದಲ್ಲಿ ತಮ, ವ್ಯಾಧಿಗಳು ನಿಜ,ಆಗಂತು, ಎಂಬ ಭೇದದಿಂದ ಎರಡು ವಿಧ,ತ್ರಿದೋಷ ಗಳ ಭೇದದಿಂದ ಮೂರು ವಿಧ, ಸಾಧ್ಯ, ಅಸಾಧ್ಯ, ಮೃದು, ಕರಿಣ, ಎಂಬ ಭೇದದಿಂದ ನಾಲ್ಕು ವಿಧ ಎಂಬದು ವಿಧಿ, ವಿಕಲ್ಪ ಎಂಬದು ಕೂಡಿದಂಧಾ ದೋಷಗಳ ಅಂಶಾಂಶ