ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                                            -  307 -                                 ಆ  XVII

ಬಲಭೇದ ಎಂಬ ಅರ್ಧದಲ್ಲಿ. ವ್ಯಾಧಿಗಳ ಬಲಕಾಲ ವಿಶೇಷವು ಋತು, ಹಗಲು, ರಾತ್ರಿ, ಆಹಾರದ ಕಾಲ, ಇವುಗಳಿಗೆ ಸಂಬಂಧಪಟ್ಟ ವಿಧಿಗಳಿಂದ ನಿಶ್ಚಯಿಸಲ್ಪಟ್ಟದ್ದಾಗಿರುತ್ತದೆ. ಆದ್ದರಿಂದ ವೈದ್ಯನು ಸ್ವಚ್ಛವಾದ ಸತ್ವ ಮತ್ತು ಬುಧ್ಧಿಯುಳ್ಳವನಾಗಿ ವ್ಯಾಧಿಗಳನ್ನು ಹೇತು ಮೊದಲಾದ ಭಾವಗಳಿಂದ ಯಧಾರ್ಧವಾಗಿ ತಿಳಿಯತಕ್ಕದ್ದು

  12. ಸ್ವಾತಂತ್ರ್ಯಪಾರತಂತ್ರ್ಯಾಭ್ಯಾಂ  ವ್ಯಾಧೇ:  ಗ್ರಾಧಾನ್ಯಮಾದಿಶೇತ್  |                                              ಪ್ರದಾನ ರೋಗದ                                                                           (ಬಾ ಪ್ರ 240)                                  
ಸಿಶ್ವಹಿಸುವಿಕೆ
         ಸ್ವತಂತ್ರವಾಗಿರುವಿಕೆ   ಮತ್ತು   ಪರಾಧೀನವಾಗಿರುವಿಕೆ  ಎಂಬ  ಭೇದದಿಂದ  ರೋಗದ ಪ್ರಧಾನತೆಯನ್ನು ನಿಶ್ಚಯಿಸಬೇಕು
       (ಉದಾಹರಣೆ -) ಯಧಾಸ್ವತಂತ್ರಸ್ಯ ಒರಸ್ಯ ಪ್ರಾಧಾನ್ಯಂ ಜ್ವರಾಧೀನಾನಾಂ                                    ಶ್ವಾಸಾದೀನಾಮಪ್ರಾಧಾನ್ಯಂ |                                                       (ಭಾ ಪ್ರ ವ್ಯಾ 240 )
       ಸ್ವತಂತ್ರವಾದ  ಜ್ವರ  ಪ್ರಧಾನ,  ಆ  ಜ್ವರಕ್ಕೆ ಅಧೀನವಾಗಿ ಉಂಟಾದ ಉಬ್ಬಸ ಮುಂತಾ ದದ್ದು ಪ್ರಧಾನವಲ್ಲದ್ದು
     ಪರಾ ಈ ಪ್ರಕಾರ ಮಾಡುವ ಪರೀಕ್ಷೆಯಲ್ಲಿ ಕಂಡುಬರುವ ಲಕ್ಷಣಗಳು ಯಾವ ದೋಷವನ್ನು ಮತ್ತು ಯಾವ ರೋಗವನ್ನು ಸೂಚಿಸುತ್ತವೆ ಎಂಬದನ್ನು ದೋಪಗಳ ಮತ್ತು ರೋಗಗಳ ವಿವರಣಗಳಲ್ಲಿ ಸವಿಸ್ತಾರವಾಗಿ ಹೇಳಲ್ಪಟ್ಟ ಲಕ್ಷಣಗಳ ನೆನಪಿನ ಮೇಲೆ ನಿಶ್ಚಯಿಸತಕ್ಕದ್ದು ಈ ವಿಷಯವಾದ ಕೆಲವು ಸೂತ್ರಗಳನ್ನು ಮಾತ್ರ ಈ ಸಂದರ್ಭದಲ್ಲಿ ಲಕ್ಷಿಸೋಣಾಗುತ್ತದೆ
    13.                             ನಾಡೀ ಚ ಮೂತ್ರಂ ಚ ಮಲಬ್ಧ ಜಿಹ್ವಾ |
                                    ಶಬ್ದಶ್ವ ಸಂಸ್ಪರ್ಶನರೂಪದೃಷ್ಟಿಃ   ||    
       ನಾರೀ ಮೊದಲಾದ       ಯೇನ ಪ್ರಕಾರೇಣ ಪರೀಕ್ಷಣೀಯಂ |
         8 ಒಧ ಪರೀಕ್ಷೆ           ಸಮಾಸತೋಸ್‌ ವಿಭಿರುಚ್ಯತೇತ್ರ 11 (ಧ 6 ) 
      ನಾಡೀ,  ಮೂತ್ರ,  ಮಲ,  ನಾಲಿಗೆ,  ಶಬ್ದ, ಸ್ಪರ್ಶ , ರೂಪ,  ಕಣ್ಣು , ಹೀಗೆ ಅಷ್ಟವಿಧ ವಾದ ಪರೀಕ್ಷೆಯನ್ನು ಹಾಗೆ ಮಾಡಬೇಕಾದದ್ದೆಂಬ ವಿಧಿಯ. ಇಲ್ಲಿ ಸಂಕ್ಷೇಪವಾಗಿ ಹೇಳ ಲ್ಪಡುತ್ತದೆ
 14           (a)         ಶಾಕಪತ್ರಪ್ರಭಾ ರೂಕ್ಷಾ ಸ್ಟುಟನಾ ರಸನಾರಸಿಲಾತ್ |
                          ರಕ್ತಶ್ಯಾವಾ ಭವೇತ್ತಾಲ್ಲಿಸ್ತಾದ್ರ್ರಾ ಧವಲಾ ಕಫಾತ್ |
 ನಾಲಿಗೆ ಪರೀಕ್ಷೆ        ಪರಿದಗ್ಗಾ ಖರಸ್ಪರ್ಶಾ ಕೃಷ್ಣಾ ದೋಷತ್ರಯೇsಧಿಕೇ |
                          ಸೈವ ದೋಷದ್ವಯಾಧಿ ದೋಷದ್ವಿತಯಲಕ್ಷಣ್ || (ಭಾ ಪ್ರ. 239.)

        ವಾತದಿಂದ ನಾಲಿಗೆಯು ಒಣಗಿ ಒಡೆದು ತೇಗಿನ ಎಲೆಯ ಪ್ರಭೆಯುಳ್ಳದ್ದಾಗಿರುವದು, ಅಂದರೆ ದೊರಗಾಗಿರುವದು, ಪಿತ್ತದಿಂದ ಕೆಂಪು ಅಥವಾ ನೀಲವಾಗಿರುವದು, ಕಫದಿಂದ ಬೆಳ್ಳಗಾಗಿ, ಅಗ್ರದಿಂದಲೂ, ದ್ರವದಿಂದಲೂ ಕೂಡಿರುವದು, ತ್ರಿದೋಷಗಳು ಅಧಿಕವಾದಾಗ್ಗೆ
                                                                                                                39*