ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVI -308-

ಬೆಂದಂತೆಯೂ, ಕಪ್ಪು ವರ್ಣವಾಗಿಯೂ, ದೊರಗಾಗಿಯೂ ಇರುವದು, ಮತ್ತು ಎರಡು ದೋಷಗಳು ಅಧಿಕವಾದಾಗ್ಗೆ, ಆ ಎರಡು ದೋಷಗಳ ಲಕ್ಷಣಗಳಿಂದ ಕೂಡಿರುವದು.

  (b)      ಜಿಹ್ವಾತಿಜಲಸಿಕ್ತಾ ಚೇತ್ ಶ್ಲೇಷ್ಮಲಾ ಸಾ ನಿಗದ್ಯತೇ |
            ಕಟುಸಿಕ್ತಾ ಪಿತ್ತವಹಾ ತಿಕ್ತಸಿಕ್ತಾತಿಪಿತ್ತಲಾ || 
            ಶೋಷಿತಾ ವಾತಲಾ ಜ್ಞೇಯಾ ಶುಷ್ಕಿತಾ ಸನ್ನಿಪಾತಿಕಾ |                                                          ಸ್ಫೋಟಪೀತಾ ಕೃಷ್ಣವರ್ಣಾ ಹ್ಯಸಾಧ್ಯೇ ನಂದಿಭಾಷಿತಂ||                                       |                                                                                          (ವೈ ಸಾ. ಸಂ. 9.)
     ನಾಲಿಗೆಯ ಅತಿಯಾಗಿ ನೀರಿನಿಂದ ಒದ್ದೆಯಾಗಿದ್ದರೆ, ಅದು ಕಫದಿಂದ ಎಂತಲೂ, ಒದ್ದೆ ಯಾಗಿ ಖಾರರುಚಿ ಕಂಡರೆ ಪಿತ್ತದಿಂದ ಎಂತಲೂ, ಒದ್ದೆಯಾಗಿ ಕಹಿಯಾಗಿದ್ದರೆ ಪಿತ್ತ ಅತಿ ಯಾದದ್ದರಿಂದ ಎಂತಲೂ, ದ್ರವವಿಲ್ಲದೆ ಒಣಗಿಕೊಂಡಿದ್ದರೆ ವಾತದಿಂದ ಎಂತಲೂ, ಬಡೆಯಾಗಿ ದ್ದರ ಸನ್ನಿಪಾತದಿಂದ ಎಂತಲೂ, ವರ್ಣದಲ್ಲಿ ಕಪ್ಪು ಅಥವಾ ಅರಸಿನವಾಗಿ ಬೊಕ್ಕೆಗಳು ಎದ್ದಿದ್ದರೆ, ಅಸಾಧ್ಯಸ್ಥಿತಿ ಎಂತಲೂ ತಿಳಿಯುವದು.
 (C)   ತನುಭಾವಾ ಸ್ಥೂಲಭಾವಾ ಜಿಹ್ವಾ ಭವತಿ ಚೇತ್ರದಾ |
        ಸರ್ವವ್ಯಾಧಿರಸಾಧ್ಯತ್ವಾದೌಷಧೈರ್ನ ನಿವರ್ತತೇ ||    (ವೈ ಸಾ. ಸಂ 9-10.)
ನಾಲಿಗೆಯು ಅತಿತೆಳ್ಳಗೆ ಅಥವಾ ಅತಿದಪ್ಪವಾಗಿದ್ದರೆ, ಯಾವ ವ್ಯಾಧಿಯಾದರೂ ಅಸಾಧ್ಯವಾದದ್ದರಿಂದ, ಔಷಧಗಳಿಂದ ಶಮನವಾಗತಕ್ಕದ್ದಲ್ಲ 
   (d) ಜಿಹ್ವಾಮೂಲೇ ಮಲಿನತಾ ಹ್ಯಗ್ರೇ ಭವತಿ ನಿರ್ಮಲಾ 
        ವಾತಶ್ಲೇಷ್ಮವಿಕಾರಾ ಸಾ ಸನ್ನಿಪಾತಸ್ಯ ಕಾರಣಂ || (ವೈ ಸಾ ಸಂ 10) 
 ನಾಲಿಗೆಯ ಬುಡವು ಮಲಿನವಾಗಿದ್ದು, ತುದಿಯು ನಿರ್ಮಲವಾಗಿರುವದು ವಾತಶ್ಲೇಷ್ಮ
ಏಕಾರವನ್ನು ಸೂಚಿಸುತ್ತದೆ ಮತ್ತು ಅದು ಸನ್ನಿಪಾತಕ್ಕೆ ಕಾರಣ
  (e)  ನಿರ್ಮಲಾ ಮೂಲದೇಶೇ ತು ಹ್ಯಗ್ರೇ ಮಲಿನತಾ ಯದಾ |
        ಪಿತ್ತವಾತವಿಕಾರಾ ಸಾ ಶೂಲಗ್ರಂಧ್ಯನುಕಾರಿಣೀ ||      (ವೈ  ಸಾ.  ಸಂ.  10.)
    ನಾಲಿಗೆಯು ಮೂಲದಲ್ಲಿ ನಿರ್ಮಲವಾಗಿ, ತುದಿಯಲ್ಲಿ ಮಲಿನವಾಗಿದ್ದರೆ, ಅದು ವಾತ ಪಿತ್ತ ವಿಕಾರಗಳನ್ನು ಸೂಚಿಸುತ್ತದೆ ಮತ್ತು ಅದು ಶೂಲಗ್ರಂಧಿಗೆ ಕಾರಣ.
   (f) ಮಧ್ಯೇ ನಿಮ್ನಾ ವಿಶಾಲಾಗ್ರೇ ಶಿರೋರೋಗಾಭಿವರ್ಧಿನೀ |
      ದೀರ್ಘಸಂಕುಚಿತಾ ಜಿಹ್ವಾ ದೀರ್ಘರೋಗಮೃತಿಪ್ರದಾ || (ವೈ ಸಾ. ಸಂ.10.)

       ನಾಲಿಗೆಯು ಮಧ್ಯದಲ್ಲಿ ಹಳ್ಳವಾಗಿ, ತುದಿಯಲ್ಲಿ ಅಗಲವಾಗಿದ್ದರೆ, ಅದು ಶಿರೋರೋ ಗದ ಅಭಿವೃದ್ಧಿಯ ಲಕ್ಷಣ.   ನಾಲಿಗೆಯು   ಅತಿಗಿಡ್ಡು   ಅಥವಾ  ಅತಿಉದ್ದವಾಗಿದ್ದರೆ, ಅದನ್ನು ದೀರ್ಘರೋಗ  ಉಂಟಾಗಿ  ಮರಣ  ಸಂಭವಿಸುವ  ಲಕ್ಷಣವೆಂದರಿಯುವದು.