ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 309 - ಅ. XVII (9) ಆತ್ಯುಷ್ಣವಾಹಾ ಬಹುಶೋಷದಾಹಾಸಶೀತಲಾ ಮೃತ್ಯುಭಯಪ್ರದಾ ಸ್ಯಾತ್ || ವಿದಾರಿತಾ ಸಂಕರರೋಗಜಿಹ್ವಾ ರೋಗೇಷು ದೃಶ್ಯಾ ಭಿಷಜಾ ಹಿ ಪೂರಂ || (ವೈ. ಸಾ. ಸಂ. 10.) ನಾಲಿಗೆಯು ಅತಿಬಿಸಿಯಾಗಿ ಬಹಳ ಒಣಗಿಯೂ, ಉರಿಯುಳ್ಳದ್ದಾಗಿಯೂ ಇದ್ದರೆ, ಅಧವಾ ತಣ್ಣಗಾಗಿದ್ದರೆ, ಅದು ಮರಣಭಯವನ್ನು ಸೂಚಿಸುತ್ತದೆ. ನಾಲಿಗೆಯು ಒಡದಿರು ವದು ವಾತಪಿತ್ತಾದಿ ದ್ವಂದ್ವ ದೋಷಜನ್ಯವಾದ ರೋಗವನ್ನು ಸೂಚಿಸುತ್ತದೆ ಆದ್ದರಿಂದ ವೈದ್ಯನು ಎಲ್ಲಾ ರೋಗಗಳಲ್ಲಿಯೂ ರೋಗಿಯ ನಾಲಿಗೆಯನ್ನು ಚೆನ್ನಾಗಿ ಪರೀಕ್ಷಿಸತಕ್ಕದ್ದು. (h) ವಾತಕೊನೇ ಪ್ರಸುತ್ತೇವ ಸ್ಟುಟಿತಾ ಮಧುರಾ ಭವೇತ್ | ಸ್ತಬ್ಲಾ ವರ್ಣೇವಹರಿತಾ ಜಿಹ್ವಾ ಲಾಲಾಂ ಪ್ರಮುಂಡತಿ || ಪಿತ್ತಕೂಪೇ ತು ರಕ್ತಾಭಾ ತಿಕ್ಕಾ ದಗ್ನವ ಚಾಯತೆ | ಜಿಹ್ವಾ ದಾಹಾನ್ವಿತಾ ವಿದ್ವಾ ಕಂಟಕೈವ ಸರ್ವತಃ || ಕಫೋದಯೇ ಭವೇಚಿಹ್ವಾ ಸೂ ಲಾ ಗುರ್ವೀ ಎಲೇಪಸೀ || ಸುಸ್ತಕಕಂಟಕೋಪತಾ ಕ್ರಾರಾ ಬಹುಕಫಾವಹಾ | ದೋಷದ್ವಯೇ ದ್ವಿದೋಷೋಕ್ರಲಕ್ಷಣಾ ರಸನಾ ಭವೇತ್ | ಸರ್ವಚಿಹ್ನಾ ತ್ರಿದೋಷೇ ಸ್ಯಾದ್ರಿ ಕೃತಾನೇಕಲಕ್ಷಣಾ || (ಚಿ ಸಾ ಸಂ. 1025-26 )

  • ) 13

ಳಿ ವಾತಪ್ರಕೋಪದಲ್ಲಿ ನಾಲಿಗೆಯು ಒಣಗಿ, ಸೃಜವಾಗಿ, ಒಡದ, ತೊಗರಿಯ ಹಾಗೆ ಹಸುರಾಗಿ, ಸೀಯಾಗಿ, ಜೊಲ್ಲು ಸುರಿಯುತ್ತಾ ಇರುವದು ಪಿತ್ತಪ್ರಕೋಪದಲ್ಲಿ ಕೆಂಪಾಗಿ, ಕಹಿಯಾಗಿ, ಸುಡಲ್ಪಟ್ಟಂತೆ, ಉರಿಯುಳ್ಳದ್ದಾಗಿ, ಎಲ್ಲಾ ಕಡೆಗಳಲ್ಲಿಯೂ ಮುಳ್ಳುಗಳಿಂದ ಚುಚ್ಚಲ್ಪಟ್ಟಂತೆ ಇರುವದು ಕಪೋದ್ರೇಕದಲ್ಲಿ ದಪ್ಪವಾಗಿ, ಗುರುವಾ, (ಅಗ್ರ ಎಂಬ) ಲೇಪ ವುಳ್ಳದ್ದಾಗಿ, ಸ್ಫೂಲವಾದ ಮುಳ್ಳುಗಳುಳ್ಳದ್ದಾಗಿ, ಕ್ಲಾರರುಚಿಯುಳ್ಳದ್ದಾಗಿ ಮತ್ತು ಬಹು ಕಫವುಳ್ಳದ್ದಾಗಿ ಇರುವದು. ನಾಲಿಗೆಯು ದ್ವಂದ್ವದೋಷಗಳಲ್ಲಿ ಆ ದೋಷಗಳ ಉಕ್ತವಾದ ಲಕ್ಷಣಗಳಿಂದಲೂ, ತ್ರಿದೋಷಗಳಲ್ಲಿ ಮೇಲೆ ಹೇಳಿದ ಎಲ್ಲಾ ಚಿಹ್ನೆಗಳಿಂದಲೂ, ಬೇರೆ ಅನೇಕ ವಿಕಾರಲಕ್ಷಣಗಳಿಂದ ಕೂಡಿರುವದು. 15 (6) ವಾತೇನ ಪಾಂಡುರಂ ಮೂತ್ರಂ ರಕ್ತಂ ನೀಲಂ ಚ ಪಿತ್ರತಃ || ಮೂತ್ರ ಪರೀಕ್ಷೆ ರಕ್ತಮೇವ ಭದ್ರಕಾದ್ದನಲಂ ಫಲಂ ಕಫಾತ್ || (ಭಾ ಪ್ರ. 239.) ಮೂತ್ರವು ವಾತದಿಂದ ಹಳದಿಮಿಶ್ರ ಬೆಳುವಾಗಿಯೂ, ಪಿತ್ತದಿಂದ ಕೆಂಪು ಮತ್ತು ನೀಲ ವಾಗಿಯೂ, ರಕ್ತದಿಂದ ಕೆಂಪಾಗಿಯೂ, ಕಫದಿಂದ ನೊರೆ ಕೂಡಿಕೊಂಡು ಸ್ವಚ್ಛವಾಗಿಯೂ, ಇರುವದು.