ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ

                                          XXX1X

ಪ್ರಯಾಸ ಎಂಬ ಮುಖ್ಯ ಕಾರಣದ ಮೇಲೆ ತಾನು ಅಷ್ಟಾಂಗಹೃದಯ ಎಂಬ ಗ್ರಂಧವನ್ನು ಅತಿವಿಸ್ತಾರವೂ, ಅತಿಸಂಕ್ಷೇಪವೂ ಇಲ್ಲದ ರೀತಿಯಲ್ಲಿ ರಚಿಸುವದಕ್ಕೆ ಉದ್ಯುಕ್ತನಾದ್ದೆಂತ ವಾಗ್ಭಟನ ಸಂಹಿತೆಯಲ್ಲಿಯೇ ಕಾಣುತ್ತದೆ. ಈ ಅಷ್ಟಾಂಗಹೃದಯವು ಚರಕ ಮತ್ತು ಸುಶ್ರುತಸಂಹಿತೆಗಳ ಸಾರವನ್ನು ಸಂಗ್ರಹಿಸಿ, ಭೇಳನ ಮತ್ತು ಹಾರೀತನ ತಂತ್ರಗಳಿಂದ ಕೆಲವು ಅಂಶಗಳನ್ನು ಹೆಕ್ಕಿ ಕೂಡಿಸಿ, ರಚಿಸಲ್ಪಟ್ಟಿದ್ದಲ್ಲದೆ, ಅದರಲ್ಲಿ ಅಪೂರ್ವವಾದದ್ದು ಇಲ್ಲ ಎನ್ನ ಬೇಕು ಅಂತ ಪ್ರಫುಲ್ಲಚಂದ್ರರಾಯರವರು ಬರದಿದ್ದಾರೆ. ಸಂಕ್ಷೇಪವಾಗಿಯೂ, ಗಂಭೀರಾರ್ಧವಾಗಿಯೂ ಇರುವುದರಿಂದ, ಅದು ಕಲಿತ ಮೇಲೆ ನೆನಪಿನಲ್ಲಿಟ್ಟುಕೊಳ್ಳುವದಕ್ಕೆ ಬಹು ಅನುಕೂಲವಾಗಿರುತ್ತದಾದರೂ, ವ್ಯಾಖ್ಯಾನ, ಅಥವಾ ಗುರುವಿನ ಉಪದೇಶ, ವಿನಾ ಅದನ್ನು ತಿಳಿಯು ವುದು ಕಷ್ಟವಾಗಿ ಕಂಡಿತು. ವಾಗ್ಭಟನು ಬೌದ್ದ ಮತದವನಾಗಿದ್ದ ಅಂತ ಪ್ರ. ಚಂದ್ರರಾಯರವರು, ಮುಂತಾದ ಕೆಲವು ಗ್ರಂಧಕಾರರು ಸಾಧಿಸುತ್ತಾರೆ. ಆ ಅಭಿಪ್ರಾಯಕ್ಕೆ ವಿರೋಧ ಪಕ್ಷದವರೂ ಇರುತ್ತಾರೆ. ಚರಕಾದಿಗಳು ಹೇಳಿದಂತೆ ದೂತಶಕುನಾದಿಗಳ ಫಲದಾಯಕತ್ವವನ್ನು ಒಪ್ಪಿ, ದಾನ ಹೋಮ ಜಪಾದಿಗಳಿಂದ ಪಾಪದ ಫಲವು ಕಡಿಮೆಯಾಗುತ್ತದೆಂತ ಬರದಿರುವುದು ಮುಂತಾದ್ದನ್ನು ಆಲೋಚಿಸಿದರೆ, ಗ್ರಂಧಕರ್ತೃ ಬೌದ್ದನೆಂಬ ಸಾಧನೆಯು ಸರಿ ಕಾಣುವುದಿಲ್ಲ ಇದೆಲ್ಲಾ ಹ್ಯಾಗಿದ್ದರೂ, ಚರಕಸಂಹಿತೆಯು ಯಾವ ಶೋಧನದಿಂದಾದರೂ ಬುದ್ದನ ಜನ್ಮಕ್ಕೆ (ಅಂದರೆ ಇಪ್ಪತ್ತೈದು ಶತಮಾನಗಳಿಗೆ) ಹಿಂದಿನದು ಎನ್ನುವುದರಲ್ಲಿ ಸಂದೇಹ ಇಲ್ಲ ಎಂತ ಪ್ರ. ಚಂದ್ರರಾಯರವರು ಬರದಿದ್ದಾರೆ. 5. ಸುಶ್ರುತಸಂಹಿತೆಯು ಚರಕಸಂಹಿತೆಯ ಅನಂತರದ ಗ್ರಂಥ ಅಂತ ಸಾಧಾರಣವಾಗಿ ಎಣಿಸಲ್ಪಡುತ್ತದೆ ಕೃತಯುಗಕ್ಕೆ ಚರಕನೂ, ದ್ವಾಪರಕ್ಕೆ ಸುಶ್ರುತನೂ, ಕಲಿಯುಗಕ್ಕೆ ವಾಗ್ಭಟನೂ ಶ್ರೇಷ್ಠ ಎಂಬ ತಾತ್ಪರ್ಯದ ಮೇಲೆ ಎತ್ತಿದ ಶ್ಲೋಕವು ಮತ್ತು ಬೇರೆಬೇರೆ ಕಾಲಗಳಲ್ಲಿ ಶೇಷನೂ, ಧನ್ವಂತರಿಯ ಅವತಾರವಾದರೆಂಬ ಇತಿಹಾಸವು ಈ ಮತಕ್ಕೆ ಒಲ ಕೊಡುತ್ತವೆ. ಈ ಮತವನ್ನು ಅಂಗೀಕರಿಸುವುದಕ್ಕೆ ಕವಿರಾಜ ನಾಗೇಂದ್ರನಾಥಸೇನಗುಪ್ತರು ಸಂದೇಹಪಡುತ್ತಾರೆ. ಆ ಎರಡು ಸಂಹಿತೆಗಯೊಳಗೆ ಕಾಣುವ ಮುಖ್ಯವಾದ ಭೇದಗಳು ಯಾವವೆಂದರೆ – ವೈದ್ಯಕರ್ಮದ ಅಷ್ಟಾಂಗಗಳಲ್ಲಿ ಶಲ್ಯತಂತ್ರವನ್ನೇ ಪ್ರಧಾನವಾಗಿಟ್ಟುಕೊಂಡು, ಅದನ್ನೇ ಮುಂದಾಗಿ ಸುಶ್ರುತನು ವಿವರಿಸಿದ್ದಾನೆ. ಔಷಧೇನವಮೌರಭ್ರಂ ಸೌಶ್ರುತಂ ಪೌಷ್ಕಲಾವತಮ್ | ಶೇಷಾಣಾಂ ಶಲ್ಯತಂತ್ರಾಣಾಂ ಮೂಲಾನ್ಯೇತಾನಿ ನಿರ್ದಿಶೇತ್ | ಅಂದರೆ ಔಷಧೇನವ, ಔರಭ್ರ, ಸುಶ್ರುತ, ಪೌಷ್ಕಲಾವತ, ಇವರು ನಾಲ್ವರು ರಚಿಸಿದ ಶಲ್ಯ ತಂತ್ರಗಳು ಇತರ ಎಲ್ಲಾ ಶಲ್ಯತಂತ್ರಗಳಿಗೆ ಮೂಲವಾಗಿರುತ್ತವೆ ಎಂತ ಸುಶ್ರುತವೇ ಹೇಳುತ್ತದೆ. ಓಷಧೇನವ, ಔರಭ್ರ, ಪೌಷ್ಕಲಾವತ ಎಂಬವರು ಸುಶ್ರುತನೊಂದಿಗೆ ಧನ್ವಂತರಿಯಿಂದ ಪಾಠ ಕೇಳಿದವರೊಳಗೆ ಮೂವರಾಗಿರುತ್ತಾರೆ. ಅವರು ಮಾಡಿದ ತಂತ್ರಗಳು ಈ ವರೆಗೆ ದೊರೆತ ಹಾಗೆ ಕಾಣುವುದಿಲ್ಲ. ಶಲ್ಯತಂತ್ರವೆಂಬದು ಯಂತ್ರ, ಶಸ್ತ್ರ, ಕ್ಷಾರ ಮತ್ತು ಅಗ್ನಿ, ಇವುಗಳ ಉಪಯೋಗದಿಂದ ಆಗತಕ್ಕ ಚಿಕಿತ್ಸೆ, ಸುಶ್ರುತದಲ್ಲಿ 101 ಪ್ರಕಾರವಾದ ಯಂತ್ರಗಳು ಮತ್ತು 20 ವಿಧವಾದ ಶಸ್ತ್ರಗಳು ವರ್ಣಿಸಲ್ಪಟ್ಟಿವೆ. ಗರ್ಭದಲ್ಲಿ ಮೃತವಾದ ಶಿಶುವನ್ನು ಶಸ್ತ್ರಗಳ ಉಪಯೋಗದಿಂದ, ಅಥವಾ ಶಸ್ತ್ರವಿಲ್ಲದೆ, ಹೊರಗೆ ತೆಗೆಯುವ ವಿಷಯದಲ್ಲಿ ಚಿಕಿತ್ಸಾ ಸ್ಥಾನದ