XL ಉಪೋದ್ಘಾತ 15ನೇ ಅಧ್ಯಾಯದಲ್ಲಿ ಸುಶ್ರುತನು ಬರೆದಿರುವ ಕ್ರಮವು ಈಗಿನ ಡಾಕ್ಟರರು ನಡಿಸುವ ಕ್ರಮಕ್ಕೆ ಸರಿಯಾಗಿಯೇ ಉಂಟೆಂತ ಒಬ್ಬರು ಪಾಶ್ಚಾತ್ಯ ವೈದ್ಯರು ಹೇಳಿದ್ದಾರೆ. ಚರಕ ಸಂಹಿತೆಯಲ್ಲಿ ಕಾಯಚಿಕಿತ್ಸೆಯೇ ಪ್ರಧಾನವಾಗಿ ಉಪದೇಶಿಸಲ್ಪಟ್ಟಿದೆ. ಕಾಯಚಿಕಿತ್ಸೆಯಂದರೆ ಸರ್ವಾಂಗವನ್ನಾಶ್ರಯಿಸಿ ಬರುವ ಜ್ವರಾತಿಸಾರಾದಿ ರೋಗಗಳಿಗೆ ಔಷಧಗಳಿಂದ ಮಾಡುವ ಚಿಕಿತ್ಸೆ, ಚರಕಸಂಹಿತೆಯ ಕಡೇ ಮಾತು ಏನಂದರೆ - ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ | ಅಂದರೆ ಇದರಲ್ಲಿ ರುವಂಥಾದ್ದು ಬೇರೆ ಗ್ರಂಥಗಳಲ್ಲಿರಬಹುದು. ಇದರಲ್ಲಿಲ್ಲದ್ದು ಎಲ್ಲಿಯೂ ಇರದು. ಈ ಮಾತಿನಂತೆಯೇ ಈ ವರೆಗೂ ಚರಕಸಂಹಿತೆಯಲ್ಲಿ ಹೇಳಿರುವ ಚಿಕಿತ್ಸಾತತ್ವಗಳನ್ನೇ ಬೇರೆಬೇರೆ ಗ್ರಂಥಗಳಲ್ಲಿ, ಬೇರೆಬೇರೆ ಕ್ರಮದಲ್ಲಿ ಸಂಕ್ಷೇಪವಾಗಿಯೋ, ವಿಸ್ತಾರ ವಾಗಿಯೋ, ವರ್ಣಿಸಿದ್ದಾರಲ್ಲದೆ, ಅವುಗಳಿಗೆ ಪ್ರತಿಪಕ್ಷವಾಗಿ ಯಾವ ಆಯುರ್ವೇದ ಗ್ರಂಥವಾದರೂ ಹುಟ್ಟಿರುವುದಿಲ್ಲ. ಚರಕನ ಕಾಲದನಂತರ ಪ್ರಚಾರಕ್ಕೆ ಬಂದಿರುವ ರಸ, ಭಸ್ಮ, ಮಾತ್ರಾದಿ ಕ್ರಮಗಳು ಚರಕನಿಂದ ಉಪದೇಶಿಸಲ್ಪಟ್ಟಿರುವ ಚಿಕಿತ್ಸಾತತ್ವಗಳಿಗೆ ಅನುಸರಿಸಿಯೇ ಇರುವಂಥವು. ಎರಡನೇ ಭೇದವೇನಂದರೆ - ಚರಕಸಂಹಿತೆಯಲ್ಲಿ ಶಾಸ್ತ್ರಾರ್ಥಗಳು ಶ್ಲೋಕ (ಅಥವಾ ಸೂತ್ರ) ಸ್ಥಾನ-ನಿಧಾನಸ್ಥಾನ-ವಿಮಾನಸ್ಥಾನ-ಶರೀರಸ್ಥಾನ-ಇಂದ್ರಿಯಸ್ಥಾನ-ಚಿಕಿತ್ಸಿತಸ್ಥಾನ-ಕಲ್ಪಸ್ಥಾನ-ಸಿದ್ದಿಸ್ಥಾನ ಎಂಬ 8 ವಿಭಾಗಗಳಾಗಿ ಸಂಪಾದಿಸಲ್ಪಟ್ಟಿವೆ. ಸುಶ್ರುತನು ಈ ವಿಭಾಗವನ್ನು ಒಪ್ಪಿಕೊಂಡ ಹಾಗೆ ಕಂಡರೂ, ತನ್ನ ಅರ್ಥಗಳನ್ನೆಲ್ಲಾ ಸೂತ್ರಸ್ಥಾನ-ನಿದಾನಸ್ಥಾನ-ಶಾರೀರಸ್ಥಾನ-ಚಿಕಿತ್ಸಿತಸ್ಥಾನ-ಕಲ್ಪಸ್ಥಾನ ಎಂಬ ಐದೇ ಭಾಗಗಳಲ್ಲಿ ಸಂಗ್ರಹಿಸಿ, ಪ್ರತಿ ಪಾದಿಸಿದ್ದಾನೆ. ಚರಕನು ವಿಮಾನ ಮತ್ತು ಇಂದ್ರಿಯಸ್ಥಾನಗಳಲ್ಲಿ ಹೇಳಿದ ವಿಷಯಗಳು ಸೂತ್ರ ಸ್ಥಾನದಲ್ಲಿಯೂ, ಸಿದ್ದಿಸ್ಥಾನದ ಅಂಶವು ಚಿಕಿತ್ಸಾ ಸ್ಥಾನದಲ್ಲಿಯೂ, ಸುಶ್ರುತಸಂಹಿತೆಯಲ್ಲಿ ಕಾಣುತ್ತವೆ. ಸುಶ್ರುತನು ಆಯಾ ಸ್ಥಾನದಲ್ಲಿ ವಿವರಿಸಬೇಕಾದ ವಿಷಯಗಳಿಗೆ ತಕ್ಕ ಹಾಗೆ ಅಧ್ಯಾಯಗಳನ್ನು ಕಲ್ಪಿಸಿ, ವಿಷಯವನ್ನು ಆಯಾ ಅಧ್ಯಾಯದ ತಲೆಯಲ್ಲಿ ಉಲ್ಲೇಖಿಸಿ, ವಿಷಯಾರ್ಥಗಳನ್ನೆಲ್ಲಾ ನೆಟ್ಟಗಾಗಿ, ಅಧಿಕಪ್ರಸಂಗವಿಲ್ಲದೆ, ನಿರ್ದೇಶಿಸಿದ್ದಾನೆ. ಚರಕಸಂಹಿತೆಯಲ್ಲಿ ಇಂಥಾದ್ದೊಂದು ಕ್ರಮವನ್ನು ಪ್ರತಿಪಾದಿಸುವುದಕ್ಕೆ, ಅಥವಾ ಅವಲಂಬಿಸುವುದಕ್ಕೆ ಪ್ರಯತ್ನಪಟ್ಟ ಹಾಗೆ ಕಾಣುವುದಿಲ್ಲ. ಅಧ್ಯಾಯದ ಪ್ರಥಮ ವಾಕ್ಯದ ಮುಖ್ಯ ಶಬ್ದಗಳೇ ಸಾಧಾರಣವಾಗಿ ಅಧ್ಯಾಯಕ್ಕೆ ಶಿರೋನಾಮವಾಗಿ ಇಡಲ್ಪಟ್ಟಿವೆ. ಈ ಶಿರೋನಾಮದಿಂದ ಅಧ್ಯಾಯದಲ್ಲಿ ವ್ಯಾಖ್ಯಾತವಾದ ವಿಷಯವು ಅನೇಕ ಕಡೆಗಳಲ್ಲಿ ಸೂಚಿತ ವಾಗುವದಿಲ್ಲ.'ತಸ್ಯಾಶಿತೀಯಾಧ್ಯಾಯ' ಎಂಬುದರಲ್ಲಿ ಕಾಣುವುದು ಋತುವರ್ಣನ ಮತ್ತು ಋತುಗಳಿಗೆ ತಕ್ಕ ಕರ್ತವ್ಯಗಳು, ಸದಾಚಾರಗಳನ್ನು ಉಪದೇಶಿಸುವ ಅಧ್ಯಾಯದ ಹೆಸರು 'ಇಂದ್ರಿಯೋಪಕ್ರಮಣೀಯ'. ಇದಲ್ಲದೆ ವಿಷಯಪ್ರತಿಪಾದನಾವಸರದಲ್ಲಿ ತರ್ಕ ವಿಮಾಂಸಾದಿ ಅನ್ಯ ಶಾಸ್ತ್ರಗಳನ್ನು ತಂದು ಒಡ್ಡುವುದರಲ್ಲಿ ಆಚಾರ್ಯರಿಗೆ ಪ್ರೀತಿ ಹೆಚ್ಚು ಇತ್ತೆಂ ಬದು ವಿಮಾನಸ್ಥಾನದ 'ರೋಗಭಿಷಗ್ ಜಿತೀಯಮಾ' ಎಂಬ ಎಂಟನೇ ಅಧ್ಯಾಯದಲ್ಲಿರುವ ಕೆಲವು ವಿಷಯಗಳನ್ನು ಸೂಚಿಸುವುದರಿಂದ ಸ್ಪಷ್ಟವಾದೀತು. ಆ ಅಧ್ಯಾಯದ ಆರಂಭದಲ್ಲಿ ಬುದ್ಧಿವಂತನಾದ ಒಬ್ಬ ಮನುಷ್ಯನು ತಾನು ಕಲಿಯತಕ್ಕ ಶಾಸ್ತ್ರವನ್ನು ಪರೀಕ್ಷಿಸಬೇಕೆಂತ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೨
ಗೋಚರ