ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 _329_ ಅ XVII


ಯಾವ ನಾಡಿಯು ಅತಿ ಎತ್ತರವಾಗಿಯೂ ಮತ್ತು ಅತ್ಯಂತ ಸ್ಪಿರವಾಗಿಯೂ ಚಲಿಸುತ್ತದೋ, ಯಾವದು ಮಾಂಸದಂತೆ ಗಟ್ಟಿಯಾಗಿ ಕಾಣುತ್ತದೋ, ಯಾವದು ಸೂಕ್ಷ್ಮ ಮತ್ತು ವಕ್ರವಾಗಿರುವದೋ, ಅದು ಅಸಾಧ್ಯಲಕ್ಷಣವೆಂದು ಸುಜ್ಞರು ತಿಳಿಯುತ್ತಾರೆ.

       (uu)   ಪ್ರಮೇಹೇ ಚ ಸಮುತ್ಪನ್ನೇ ಶೂಲಕ್ಷಯಸಮುದ್ಭವೇ |
ಪ್ರಮೇಹ ಮತ್ತು    ಕರಿನಾ ಸ್ಫುರಿತಾ ನಾಡೀ ವೇಗಾಚ್ಚಾಖುಗತೋಪಮಾ ||
ಶೂಲಕ್ಷಯದಲ್ಲಿ                             (ವೈ, ಸಾ ಸಂ. 5)
 ಪ್ರಮೇಹರೋಗದಲ್ಲಿ ಮತ್ತು ಶೂಲ ಕೂಡಿದ ಕ್ಷಯದಲ್ಲಿ ನಾಡಿಯು ಕಠಿಣವಾಗಿ, 

ವೇಗದಲ್ಲಿ ಇಲಿಯ ಗತಿಗೆ ಸದೃಶವಾಗಿ, ಹಾರುತ್ತಿರುವದು.

     (rr)      ಕರೇ ನಾಡ್ಯಾ೦ಯದಾ ವೇಗೋ ದೃಶ್ಯತೇ ನೈವ ಪಾದಯೋಃ |
ಅದೇ ದಿನದ       ತದಾ ದಿನಸ್ಯ ಮಧ್ಯೇತು ರೋಗಿಣೋ ಮರಣಂ ಭವೇತ್ ||

ಮೃತ್ಯು ಸೂಚಕ (ವೈ ಸಾ ಸಂ 8.)

ನಾಡಿ
  ಕೈನಾಡಿಯು ವೇಗವುಳ್ಳದ್ದಾಗಿದ್ದು, ಪಾದಗಳಲ್ಲಿ ನಾಡಿಯು ಕಾಣದೆ ಹೋದರೆ, ಆ
ದಿನದ ಮಧ್ಯದಲ್ಲಿಯೇ ರೋಗಿಯ ಮರಣವು ಸಂಭವಿಸುವದು.
    (ww)     ಚರಣೇತಿ ವಾಮಸ್ಯ ತು ದಕ್ಷಿಣಗ್ರಂಧಿಪಶ್ಚಾತ್ ಪಾರ್ಶ್ವಸ್ಥಾ | ದಕ್ಷಿಣಸ್ಯ ತು

ಪಾದದ ನಾಡೀ ವಾಮಗ್ರಂಧಿಪಶ್ಚಾತ್‌ಪಾರ್ಶ್ವಸ್ಢೈವ ಸದುಪದೇಶಾತ್ ||

 ಸ್ಥಾನ                                      (ಶಬ್ದಕಲ್ಪದ್ರುಮ.)
ಪಾದದ ನಾಡಿ ಎಂಬದು ಎಡಪಾದದ ಬಲಪಾರ್ಶ್ವದ ಗಂಟಿನ ಹಿಂಭಾಗದಲ್ಲಿ (ಹೆಂಗಸಿನ
ವಿಷಯ) ಮತ್ತು ಬಲಪಾದದ ಎಡಪಾರ್ಶ್ವದ ಗಂಟಿನ ಹಿಂಭಾಗದಲ್ಲಿ (ಗಂಡಸರ ವಿಷಯ)
ಇರುವಂಧಾದ್ದೆಂತ ಸದುಪದೇಶವಿರುತ್ತದೆ.
  (xx)   ಪ್ರಾತಃ ಶ್ಲೇಷ್ಮಗತಿರ್ನಾಡೀ ಮಧ್ಯಾಹ್ನೇ ಪಿತ್ತನಾಡಿಕಾ | 
         ಅಪರಾಹ್ಣೇ ವಾತನಾಡೀ ಪುನಃ ಪಿತ್ತಾ ನಿಶಾರ್ಧಕೇ ||
ನಾಡಿಯಲ್ಲ  ಅನುಲೋಮವಿಲೋಮೇ ಚ ವಿಕೃತಿಂ ಚೈವ ಲಕ್ಷಣಂ |
ಕಾಲಭೇದ  ಆಲೋಚ್ಯ ಶಾಸ್ತ್ರಭೇದೇನ ತತಃ ಪಶ್ಯನ್ ಚಿಕಿತ್ಸಯೇತ್ ||
                                    (ವೈ. ಸಾ. ಸಂ. 8.)
 ಹಗಲಲ್ಲೂ, ರಾತ್ರಿಯಲ್ಲೂ ಪ್ರಧಮ 10 ಗಳಿಗೆ ಕಫಕಾಲವೆಂತಲೂ, ಮಧ್ಯದ 10
ಗಳಿಗೆ ಪಿತ್ತಕಾಲವೆಂತಲೂ, ಕಡೇ 10 ಗಳಿಗೆ ವಾತಕಾಲವೆಂತಲೂ, ನೆನಪಿನಲ್ಲಿಟ್ಟು, ಅದಕ್ಕೆ
ಅನುಸರಿಸಿರುವ ಸ್ವಸ್ಥನಾಡಿಗತಿಯನ್ನೂ, ವಿರೋಧವಾಗಿರುವ ವಿಕಾರ ಹೊಂದಿದ ನಾಡಿಗತಿಯನ್ನೂ,
ಶಾಸ್ತ್ರಭೇದದಿಂದ ಆಲೋಚಿಸಿ, ಅನಂತರ ವಿಚಾರದಿಂದ ಚಿಕಿತ್ಸೆಮಾಡತಕ್ಕದ್ದು.
                                                 42