ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XVII 336 ಸಿನಮುಂಡಿಗೆ ರೋಗದ ಲಕ್ಷಣ. ಹೊಗೆಬಣ್ಣ ಕಂಡರೆ, ಅದರಲ್ಲಿ ಅಲ್ಪವಾಗಿ ರಕ್ತ ಉಂಟೆಂತ ತಿಳಿಯಬೇಕು. ಹೆಚ್ಚು ರಕ್ತ ಇದ್ದರೆ, ಕಪು ಒತ್ತಿದ ಕಪಿಲ (Btown) ವರ್ಣ ಕಾಣುವದು ಶುಭ್ರವಾದ ಕೆಂಪು ವರ್ಣವು ಹೆಚ್ಚು ರಕ್ತವಿರುವ ಲಕ್ಷಣ. ಜ್ವರದ ಮೂತ್ರವು ಹಚ್ಚು ವರ್ಣ ವಳ್ಳದ್ದಾಗಿ, ರಕ್ತಕ್ಕೆ ಹೋಲುವದು. ಅದರಲ್ಲಿ ರಕ್ತ ಉಂಟೋ ಇಲ್ಲವೋ ಎಂಬದನ್ನು ಭೂತಕನ್ನಡಿ ವಿನಾ ನಿಶ್ಚಯಿಸಲಿಕ್ಕೆ ಕಷ್ಟ, ಕೀವುಳ್ಳ ಮೂತ್ರದಲ್ಲಿ ದುರ್ವಾಸನೆ ಬರು ವದು ಮತ್ತು ಅದು ಕುದಿಸಿದ್ದಲ್ಲಿ ಸ್ವಚ್ಚವಾಗದು. ಸಸ್ತನ ಮೂತ್ರದ ವಾಸನೆಯು ಅಲ್ಪವಾಗಿ ರುವದು. ಸೀ ಮೂತ್ರದ ವಾಸನೆಯು ಸೀ ಮಜ್ಜಿಗೆಯ ವಾಸನೆಯಂತೆ ಇರುವದು. ಹಳೇ ದಾದ ನಾನಾ ಮೂತ್ರನಾಳದ ವ್ಯಾಧಿಗಳಲ್ಲಿ ಮೂತ್ರದ ಗಾಟು ಹೆಚ್ಚಾಗಿರುವದು. ಮೂತ್ರ ದಲ್ಲಿ ರಕ್ತವಿರುವಾಗ್ಗೆ ಅಲ್ಪ ವ್ಯತ್ಯಸ್ತವಾಗಿ ಮಾಂಸದ ವಾಸನೆ ತೋರುವದು. ಸ್ವಸ್ಥನ ಮೂತ್ರದಲ್ಲಿ ಸಹ ಹವೆಯ ಬಿಸಿ ತಾಗಿ ಕೊಳೆಯುವದರಿಂದ ಸ್ವಲ್ಪ ಕಾಲದ ಮೇಲೆ ಹೂಗೆ ಬಣ್ಣ ಮತ್ತು ದುರ್ವಾಸನೆಯುಂಟಾಗುತ್ತದೆ. * ಮೂತ್ರವನ್ನು ಗ್ಲಾಸಿನ ನಳಿಗೆಯಲ್ಲಿ ಯಾಗಲಿ, ಕಬ್ಬಣದ ಅಧವಾ ಬೆಳ್ಳಿಯ ಚಮಚೆಯಲ್ಲಿ ಯಾಗಲಿ, ಕುದಿಸಿದಾಗ ಮೂತ್ರವು ಬೆಳ್ಳಗಾದರೆ, ಅದರಲ್ಲಿ ಅಲ್ಕು ಮೆನ್ ಇರುತ್ತದೆಂತ ತಿಳಿಯಬೇಕು. ಅದಕ್ಕೆ 1-2 ಬಿಂದು ನೈಟ್ರಿಕ್ ಎಸಿಡನ್ನು ಕೂಡಿಸಿದ್ದಲ್ಲಿ, ಅದು ಸ್ವಚ್ಛವಾಗ ದಿದ್ದರೆ, ಆಲ್ಬುಮೆನ್ ಇರುತ್ತದೆಂಬದು ಖಂಡಿತ. ಮೂತ್ರದಲ್ಲಿ ಆಲ್ಬುಮನ್ ಇರುವದು ವೃಕ್ಷಗಳ ವ್ಯಾಧಿಯ ಮುಖ್ಯ ಲಕ್ಷಣವಾದಾಗ್ಯೂ, ಕೆಲವು ವೇಳೆ ತಣ್ಣೀರಿನ ಸ್ನಾನದಿಂದ ಮತ್ತು ಮೊಟ್ಟೆ ಮುಂತಾದ ಕೆಲವು ಆಹಾರಸೇವನೆಯಿಂದ ಆ ಲಕ್ಷಣ ಕಾಣುವದುಂಟು. ಕೆಲವ್ರ ವೇಳೆ ಪಿತ್ತಕೋಶವು ಸರಿಯಾಗಿ ತನ್ನ ಕೆಲಸ ಮಾಡದ್ದರಿಂದ, ಆ ದೋಷವು ಉಂಟಾಗುತ್ತದೆ. ಕೆಲವರಲ್ಲಿ ಚಳಿಜ್ವರದಲ್ಲಿ ಯೂ, ಕೆಲವರಲ್ಲಿ ಅತಿಯಾದ ಮೈದಂಡನೆಯಿಂದಲೂ, ಆ ವಿಕಾರ ಕಾಣುವದುಂಟು. - ಮೂತ್ರ ಪರೀಕ್ಷೆ ಕಡ್ಡಿ (ಯುರಿನೋಮೀಟರ್)ಯನ್ನು ಮೂತ್ರ ಇರುವ ಗ್ಲಾಸಿಗೆ ಹಾಕಿ ನೋಡಿದ್ದಲ್ಲಿ ಅದರೊಳಗಿನ ಪಾದರಸವು 1015ರ ಮೇಲೆ 1025ರೊಳಗೆ ನಿಂತರೆ ಆರೋಗ್ಯ ಸ್ಥಿತಿಯೆನ್ನಬಹುದು. ಬರೇ ನೀರಿನ ಭಾರವು 1000 ಆಗಿರುತ್ತದೆ. ವೃಕ್ಷಗಳ ವ್ಯಾಧಿಯಲ್ಲಿ (Bright's disease) 1015ರಿಂದ 1024 ಮತ್ತು ಮಧುಮೇಹದಲ್ಲಿ 1025ರಿಂದ 1040ರ ವರೆಗೆ ಇರುವದು. ಕೆಲವು ವ್ಯಾಧಿಗಳಲ್ಲಿ 1007ರ ವರೆಗೆ ತಗ್ಗು ವದುಂಟು. ಒಂದೇ ದಿನದಲ್ಲಿ ಪ್ರತಿಸರ್ತಿ ಹೊಯ್ಯುವ ಮೂತ್ರವು ಒಂದೇ ವಿಧವಾಗಿರುವದಿಲ್ಲವಾದ್ದ ರಿಂದ, ಇಡೀ ದಿನದ ಮೂತ್ರವನ್ನು ಕೂಡಿಸಿಟ್ಟುಕೊಂಡು, ಅದರಲ್ಲಿ ಸ್ವಲ್ಪವನ್ನು ಪರೀಕ್ಷೆಗೆ ತೆಗೆದುಕೊಳ್ಳುವದು ಒಳ್ಳೇದೆಂತ ಕೆಲವರ ಅಭಿಪ್ರಾಯವಿದೆ. - 25. ನಾಲಿಗೆಯು ರಕ್ತವಿಲ್ಲದೆ ಬೆಳ್ಳಗಾಗಿಯೂ, ಮೃದುವಾಗಿಯೂ, ಅಗಲವಾಗಿ ಪಾತಾ ತ್ಯರೀತ್ಯಾ ಯೂ, ನಡುಕುಳ್ಳದ್ದಾಗಿಯೂ, ಹಲ್ಲುಗಳಿಂದ ಮಾಡಲ್ಪಟ್ಟ ಒಡಕುಗಳುಳ್ಳ ನಾಲಿಗೆ ಪರೀಕ್ಷೆ ದ್ದಾಗಿಯೂ ಇರುವದರಿಂದ, ಪಾಂಡುರೋಗ ಇತ್ಯಾದಿಯಲ್ಲಿ ಉಂಟಾಗುವ ಅಶಕ್ತಿಯೂ, ನಿಶೆ ತನ್ಯವೂ, ರಕ್ತ ನೀರಾಗಿರುವಿಕೆಯೂ, ಸೂಚಿಸಲ್ಪಡುತ್ತವೆ. ಶುಭ್ರವಾದ ಕಂಪು ವರ್ಣ ದೇಹದಲ್ಲಿ ರಕ್ತವು ಅತಿಯಾಗಿರುವುದನ್ನು ಸೂಚಿಸುತ್ತದೆ. ಅಜೀರ್ಣದಲ್ಲಿ ಈ