ಈ ಪುಟವನ್ನು ಪರಿಶೀಲಿಸಲಾಗಿಲ್ಲ.
---337--- ಅ XVII ಲಕ್ಷಣವು ಕಂಡರೆ, ಅನ್ನಕೋಶದ ಪೊರೆಗಳಲ್ಲಿ ರಕ್ತವು ಅಧಿಕವಾಗಿರುತ್ತದೆಂದು ತಿಳಿಯಬೇ ಕು. ಪಿತ್ತದಿಂದ, ಅಧವಾ ಅಜೀರ್ಣದಿಂದ, ಅಧವಾ ಮಸೂರಿಕೆ ಮುಂತಾದ ಬೊಕ್ಕೆಗಳ ಸಂಬಂಧ ಉಂಟಾದ ಜ್ವರದಲ್ಲಿ ಸಹ ಈ ಲಕ್ಷಣ ಕಾಣುವದು. ಕಠಿಣವಾದ ಅಜೀರ್ಣದಲ್ಲಿ ಈ ಕೆಂಪು ವರ್ಣವು ನಾಲಿಗೆಯ ತುದಿಯಲ್ಲಿ ಮತ್ತು ಪಕ್ಕಗಳಲ್ಲಿ ಮಾತ್ರ ಕಾಣುವದುಂಟು. ಹೃದಯದಲ್ಲಿ ಉಂಟಾಗುವ ನಾನಾ ರೋಗಗಳ ದೆಸೆಯಿಂದ ರಕ್ತವು ಫುಪ್ಪುಸಗಳಲ್ಲಿ ಸರಿಯಾಗಿ ಚಲಿಸದೆ ತಡ ಉಂಟಾದಲ್ಲಿ, ನಾಲಿಗೆಯು ನೀಲಮಿಶ್ರಿತ ಕಂಪು ವರ್ಣವಾಗಿ (ನೀಲಲೋಹಿತವಾಗಿ) ರುವದು ನಾಲಿಗೆಯಲ್ಲಿ ಬಳೇ ಅಗ್ರವಿರುವದರಿಂದಲೇ ಅನಾರೋಗ್ಯವನ್ನು ಊಹಿಸಕೂಡದು. ಸ್ವಸ್ಥರಾದ ಕೆಲವರಲ್ಲಿ, ಹೆಚ್ಚಾಗಿ ಬೆಳಿಗ್ಗಿನ ಸಮಯ, ನಾಲಿಗೆಯು ಹಾಗಿರುವದುಂಟು. ಹಲ್ಲುಗಳ ವಿಕಾರದಿಂದಲೂ, ಬಾಯಿಯೂಳಗೆ ಅಧವಾ ಗಂಟಲಲ್ಲಿ ಅಧವಾ ನಿಜ್ಜಿಯಲ್ಲಿ ಬಾಕು ಇರುವದರಿಂದಲೂ, ನಾಲಿಗೆಯಲ್ಲಿ ಅಗ್ರವಾಗುತ್ತದೆ. ಅಂಧಾ ಕಾರಣಗಳು ಇಲ್ಲದೆ ನಾಲಿಗೆಯು ಮಲಿನವಾಗಿಯೂ, ನಿರಸವಾಗಿಯೂ ಇದ್ದರೆ, ಅದು ಹೆಚ್ಚಾಗಿ ಯಾವದಾದ ರೊಂದು ಜಾತಿಯ ಜ್ವರದ ಲಕ್ಷಣವೆಂದು ತಿಳಿಯಬೇಕು ಕರಿಣವಾದ ಬಾಕು, ವಾತ, ಅಧವಾ ಜ್ವರದಲ್ಲಿ, ಕೆನೆಯ ಹಾಗಿನ ಅಗ್ರ ಎದ್ದು, ರೋಗವು ಮುಂದರಿಸಿದ ಹಾಗೆ ಅದು ಕಪಿಲ ಅಧವಾ ಕಪ್ಪು ವರ್ಣವನ್ನು ಪಡೆಯುವದು, ಮತ್ತು ನಾಲಿಗೆಯು ಒಣಗಿ, ಒಡೆದು, ಸುಟ್ಟ ಹಾಗೆ ಕಾಣುವದು ಅರಸಿನಮುಂಡಿಗೆ ರೋಗದಲ್ಲಿ ಪಿತ್ತದಿಂದ ನಾಲಿಗೆಯು ಅನೇಕ ವೇಳೆ ಅರಸಿನವಾಗುವದುಂಟು. ಜ್ವರ ಮುಂತಾದ ಕಠಿಣ ವ್ಯಾಧಿಯಲ್ಲಿ ನಾಲಿಗೆಯು ಕ್ರಮೇಣ ತುದಿಯಿಂದ ಮತ್ತು ಪಕ್ಕಗಳಿಂದ ಸ್ವಚ್ಛವಾಗುತ್ತ ಮೇಲಾಭಭಗದ ಅಗ್ರ ತೆಳ್ಳಗಾ ಗುತ್ತ ಬರುವದು ರೋಗವು ವಾಸಿಯಾಗುತ್ತ ಬರುವ ಲಕ್ಷಣವಾಗಿರುತ್ತದೆ. ಅಗ್ರವು ಹಾಳೆಯಾಗಿ ಏಳುತ್ತಾ, ಅಡಿಯು ಸುಣ್ಣಗಾಗಿಯೂ, ಕೆಂಪಾಗಿಯೂ, ದ್ರವಯುಕ್ತವಾಗಿಯೂ, ಮಿಂಚುತ್ತಿದ್ದರೆ, ದೇಹದೊಳಗೆ ಏನೋ ದೋಷ ಉಂಟಾಗಿ ರೋಗವು ವಾಸಿಯಾಗದಿರಲಿಕ್ಕೆ ವಿಳಂಬವಾಗಿದೆಯೆಂದು ತಿಳಿಯಬೇಕು ನಾಲಿಗೆಯ ಮಧ್ಯಭಾಗದಲ್ಲಿಯೂ, ಮೂಲದಲ್ಲಿಯೂ ಅಗ್ರವಿದ್ದು, ಪಕ್ಕಗಳು ಕೆಂಪಾ ಗಿದ್ದರೆ, ಅದು ಅಜೀರ್ಣರೋಗವನ್ನು ಸೂಚಿಸುತ್ತದೆ. ಮತ್ತು ನಾಲಿಗೆಯನ್ನು ಹೊರಗೆ ಮಾಡಿದಾಗ್ಗೆ ಅದು ನಡುಗುತ್ತಿದ್ದರೆ, ರೋಗಿಯು ಔಷಧಗಳನ್ನು ದೋಷಕರವಾಗಿ ಉಪ ಯೋಗಿಸಿರಬೇಕು, ಅಧವಾ, ಅತಿಯಾಗಿ ಮದ್ಯಪಾನ ಮಾಡಿರಬೇಕೆಂದು ಊಹಿಸಬಹುದು. ನಾಲಿಗೆಯು ಬೇಕಾದ ಹಾಗೆ ಆಡದೆ, ಹೊರಗೆ ಮಾಡಿದಾಗ್ಗೆ ಒಂದು ಬದಿಗೆ ಎಳದು ಹೋಗುವದು ಪಕ್ಷವಾತದ ಲಕ್ಷಣವಾಗಿರುತ್ತದೆ
. 26. ನಿಶ್ವಾಸೋಚ್ವ್ದಾ ಸಗಳಲ್ಲಿ ಎದೆಯ ಎರಡು ಪಕ್ಕಗಳ ಚಲನೆಯು ಒಂದೇ ರೀತಿ
ಪಾಶ್ಚಾತ್ಯ ತ ರೀತ್ಯಾ ಯಾಗಿರಬೇಕು. ನಾಡಿಯಂತೆ ಶ್ವಾಸವ್ರ ದೇಹಾಯಾಸ, ಗಾಬರಿ, ಇತ್ಯಾದಿ ಶ್ವಾಸಪರೀಕ್ಷೆ ಗಳಿಂದ ವ್ಯತ್ಯಾಸವಾಗುತ್ತದೆ. ಆರೋಗ್ಯ ಸ್ಥಿತಿಯಲ್ಲಿ ಒಬ್ಬ ಪ್ರಾಯಸ್ಥನ ಶ್ವಾಸಗಳ ಸಂಖ್ಯೆಯು, ಮನಃಕಾಯಗಳ ವಿಶ್ರಮವಿರುವಾಗ್ಗೆ, ಸುಮಾರು ನಾಲ್ಕು ನಾಡಿ ಬಡತಗಳಿಗೆ ಒಂದರಂತೆ ಇರುತ್ತದೆ. ಆದರೆ ಬೇರೆ ಬೇರೆ ಜನರಲ್ಲಿ ಮಿನಿಟಿಗೆ 15ರಿಂದ 43