ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 355 ಅ. XIX

           ಅರ್ಶೋಭ್ಯೊ ಜಾರರಂ ದುಃಖಂ ಗುಲ್ಮಶ್ಚಾಪ್ಯುಪಚಾಯತೇ |
           ಪ್ರತಿಶ್ಯಾಯಾತ್ಪವೇತ್ಕಾಸಃ ಕಾಸಾತ್ಸಂಜಾಯತೇ ಕ್ಷಯಃ || 
           ಕ್ಷಯರೋಗಸ್ಯ ಹೇತು ಶೋಷಶ್ಚಾ ಪಚಾಯತೇ ||

ರೋಗದಿಂದ ರೋಗ ಹುಟ್ಟು ವದರ ದೃಷ್ಟಾಂ ತಗಳು

  • * * * * * * * * * * * * * * * * * * * * * * * * * * * * * * * * * * *

ಕಶ್ಚಿದ್ಢಿ ರೋಗೋ ರೋಗಸ್ಯ ಹೇತುರ್ಭೂತ್ವಾ ನಿರ್ವತ್ರತೇ | ನ ಪ್ರಶಾಮ್ಯತಿ ಚಾಪ್ಯನ್ನೊಜ಼ ಹೇತುತ್ವಂ ಕುರುತೇsಪಿ ಚ | ಏವಂ ಕೃಛ್ರತಮೋ ನೃಣಾಂ ದೃಶ್ಯತೇ ವ್ಯಾಧಿಸಂಕರಃ |(ಚಿ. ಸಾ. ಸಂ. 3)

ಒಂದು ರೋಗವು ಇನ್ನೊಂದು ರೋಗದ ಹೇತುವಾಗಿ ಪರಿಣಮಿಸುತ್ತದೆ. ಹ್ಯಾಗಂದರೆ ಜ್ವರದ ಸಂತಾಪದಿಂದ ರಕ್ತಪಿತ್ತ, ರಕ್ತಪಿತ್ತದಿಂದ ಜ್ವರ, ಅವೆರಡರಿಂದಲೂ ಉಬ್ಬಸ, ಉಂಟಾಗುತ್ತದೆ; ಪ್ಲೀಹ ವೃದ್ಧಿಯಾಗುವದರಿಂದ ಉದರವ್ಯಾಧಿ, ಉದರವ್ಯಾಧಿಯಿಂದ ಶೋಫೆ, ಮೂಲವ್ಯಾಧಿಯಿಂದ ಹೊಟ್ಟೆಶೂಲೆ ಮತ್ತು ಗುಲ್ಮ, ನಗಡಿಯಿಂದ ಕಮ್ಮು, ಕೆಮ್ಮಿನಿಂದ ಕ್ಷಯ ಉಂಟಾಗುತ್ತದೆ; ಕ್ಷಯಕ್ಕೆ ಹೇತುವಾಗಿ ಶೋಷ (ಯಕ್ಷ್ಮ ಎಂಬ ಶ್ವಾಸಕೋಶಗಳ ವ್ಯಾಧಿ) ಪರಿಣಮಿಸುತ್ತದೆ.

* * * * ಯಾವದಾದರೊಂದು ರೋಗವು ಬೇರೊಂದು ರೋಗವನ್ನುಂಟುಮಾಡಿದನಂತರ ಗುಣವಾದರೂ, ಆ ಎರಡನೇ ರೋಗವು ಶಾಂತವಾಗದೆ ಮತ್ತೊಂದು ರೋಗಕ್ಕೆ ಹೇತುವಾಗುತ್ತದೆ. ಹೀಗೆ ಮನುಷ್ಯರಿಗೆ ವ್ಯಾಧಿಗಳು ಅತಿಕಷ್ಟಕರ ವಾಗಿ ಕೂಡಿಕೊಳ್ಳುವದು ಕಾಣುತ್ತದೆ.

29. ನಾಸ್ತಿ ರೋಗೋ ಎನಾ ದೋಶೈರ್ಯಸ್ಮಾತ್ತಸ್ಮಾದ್ವಿಚಕ್ಷಣಃ |

          ಅನುಕ್ತಮಪಿ ದೋಷಾಣಾಂ ಲಿಂಗೈರ್ವಾಧಿಮುಪಾಚರೇತ್ || (ಸು. 130.) 

ವರ್ಣಿಸಲ್ಪಡದ ರೋಗದ ಚಿಕಿತ್ಸೆ

         ವಾತಾದಿ ದೋಷಗಳು ಇಲ್ಲದೆ ರೋಗವಿಲ್ಲವಾದ್ದರಿಂದ, ಬುದ್ದಿವಂತನು ವ್ಯಾಧಿಯು 
      ವರ್ಣಿಸಲ್ಪಡದ್ದಾದಾಗ್ಗು, ದೋಷಗಳ ಲಕ್ಷಣಗಳಿಂದ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು
      ಸಡಿಸತಕ್ಕದ್ದು.

30. ದೋಷಾಃ ಕ್ಷೀಣಾ ಬೃಂಹಯಿತವ್ಯಾಃ ಕುಪಿತಾಃ ಪ್ರಶಮಯಿತವ್ಯಾ ವೃದ್ಧಾ ನಿರ್ಹತ್ರವ್ಯಾಃ ಸಮಾಃ ಪರಿಪಾಲ್ಯಾ

       ಇತಿ ಸಿದ್ಧಾಂತಃ | 

ಉಪಕ್ರಮದಲ್ಲಿ ಬೃಂಹಣಾದಿ ನಾಲ್ಕು ವಿಧ

        ಪ್ರಾಧಾನ್ಯೇನ ವಮನವಿರೇಚನೇ ವರ್ತೇತೇ ನಿರ್ಹರಣೇ ದೋಷಾಣಾಂ | (ಸು. 546.)

ದೋಷಗಳು ಕ್ಷೀಣವಾಗಿದ್ದರೆ ಅವುಗಳನ್ನು ಪುಷ್ಟಿಪಡಿಸಬೇಕು; ಕೋಪಗೊಂಡವುಗಳನ್ನು ಶಮನಮಾಡಬೇಕು, ವೃದ್ಧಿಯಾದವುಗಳನ್ನು ತೆಗೆದುಬಿಡಬೇಕು; ಸಮವಾಗಿರುವವನ್ನು ಪರಿಪಾಲಿಸಬೇಕು; ಇದು ಸಿದ್ದಾಂತ. ದೋಷಗಳನ್ನು ತೆಗೆದುಬಿಡುವಲ್ಲಿ ಮುಖ್ಯವಾದ ಕ್ರಮಗಳು ವಾಂತಿ ಮತ್ತು ವಿರೇಚನ ಆಗಿರುತ್ತವೆ. 31. ಯದೀರಯೇದ್ಬಹಿರ್ದೋಷಾನ್ ಪಂಚಧಾ ಶೋಧನಂ ಚ ತತ್ |

          ನಿರೂಹೋ ವಮನಂ ಕಾಯಶಿರೋರೇಕೋSಸ್ರವಿಸ್ರುತಿಃ |(ವಾ.68.)

(5 ಎಧವಾವ 45* ಶೋಧನೆಗಳು)