ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XIX

                      __356__


ದೇಹದಿಂದ ದೋಷಗಳನ್ನು ಹೊರಗೆ ಹಾಕುವಂಥಾದ್ದು ಯಾವದೋ ಅದು ಶೋಧನ. ಅದು ಐದು ವಿಧ: 1. ನಿರೂಹವಸ್ತಿ, 2. ವಾಂತಿಮಾಡಿಸುವದು, 3. ದೇಹವಿರೇಚನ 4. ಶಿರಸ್ಸಿನ ವಿರೇಚನ ಮತ್ತು 5. ರಕ್ತ ತೆಗೆಯುವದು, ಹೀಗೆ.


32. ಕಷಾಯಕ್ಷೀರತೋ ವಸ್ತಿರ್ನಿರೂಹಃ ಸ ನಿಗದ್ಯತೇ |

ಸಿರೂಹದ ವಾಖ್ಯಾನ

                                             (ಚಿ. ಸಾ. ಸಂ. 932 )        
        ಕಷಾಯ ಅಧವಾ ಹಾಲಿನ ಮೂಲಕ (ಗುದದ್ವಾರ) ಕೊಡುವ ವಸ್ತಿಗೆ ನಿರೂಹವೆಂದು ಹೆಸರು.

33. ನ ಶೋಧಯತಿ ಯದ್ದೋಷಾನ್ ಸಮಾನ್ನೋದೀರಯತ್ಯಪಿ |

         ಸಮೀಕರೋತಿ ವಿಷಮಾನ್‌ ಶಮನಂ ತಚ್ಚ ಸಪ್ತಧಾ ||
         ಪಾಚನಂ ದೀಪನಂ ಕ್ಷುತ್ತೃಡ್ ವ್ಯಾಯಾಮಾತಪಮಾರುತಾಃ |       
         ಬೃಂಹಣಂ ಶಮನಂ ತ್ವೇವ  ವಾಯೋಃ ಪಿತ್ತಾನಿಲಸ್ಯ ಚ ||   (ವಾ. 68.) 

ಶಮನದ ವ್ಯಾಖ್ಯಾನ

ದೋಷಗಳನ್ನು ಹೊರಗೆ ಹಾಕದೆ, ಸಮವಾಗಿರುವವನ್ನು ಕೆದರಿಸದೆ, ವಿಷಮವಾಗಿರುವವನ್ನು ಸರಿಪಡಿಸುವದಕ್ಕೆ ಶಮನವೆನ್ನುವದು. ಅದು ಏಳು ವಿಧ 1. ಪಾಚನ 2. ದೀಪನ 3 ಹಸಿವು (ಉಪವಾಸ) 4. ಬಾಯಾರಿಕೆ (ಕುಡಿಯದಿರೋಣ) 5. ವ್ಯಾಯಾಮ 6. ಬಿಸಿಲು ಮತ್ತು 7. ಗಾಳಿ, ಆದರ ವಾತಕ್ಕೆ ಮತ್ತು ವಾತಪಿತ್ತಕ್ಕೆ ಬೃಂಹಣವೇ ಶಮನವಾಗಿರುತ್ತದೆ (ಅಂದರೆ ಉಪವಾಸಾದಿಗಳು ವಿರುದ್ಢ).

34. ಉಪಕ್ರಮ್ಯಸ್ಯ ಹಿ ದ್ವಿತ್ವಾದ್ದ್ವಿಧೈವೋಪಕ್ರಮೋ ಮತಃ |

         ಏಕಃ ಸಂತರ್ಪಣಸ್ತತ್ರ ದ್ವಿತೀಯಶ್ಚಾಪತರ್ಪಣಃ ||
         ಬೃಂಹಣೋ ಲಂಘನಶ್ವೇತಿ ತತ್ಪರ್ಯಾಯಾವುದಾಹೃತೌ |
         ಬೃಂಹಣಂ ಯದ್ವೃಹತ್ವಾಯ ಲಂಘನಂ ಲಾಘವಾಯ ಯತ್ |
         ದೇಹಸ್ಯ -
                                             (ವಾ. 68.) .

ಉಪಕ್ರಮದಲ್ಲಿ ಸಂತರ್ಪಣ, ಅಪತರ್ಪಣ, ಎಂಬ ಭೇದ

ರೋಗಿಯಲ್ಲಿ ಎರಡು ವಿಧವಿರುವದರಿಂದ ಚಿಕಿತ್ಸೋಪಕ್ರಮವು ಎರಡೇ ವಿಧ. 1. ಸಂತರ್ಪಣ 2. ಅಪತರ್ಪಣ. ಆ ಸಂತರ್ಪಣಕ್ಕೇನೇ ಬೃಂಹಣ ಮತ್ತು ಅಪತರ್ಪಣಕ್ಕೆ ಲಂಘನ ಎನ್ನುವದು. ಯಾವದು ದೇಹದ ವುಷ್ಟಿಗೆ ಸಹಾಯಮಾಡುತ್ತದೋ, ಅದು ಬೃಂಹಣ; ಮತ್ತು ಯಾವದು ದೇಹವನ್ನು ಲಘುಮಾಡುವದಕ್ಕೆ ಸಹಾಯಕವೋ, ಅದು ಲಂಘನ.

35. ದೋಷಾಣಾಂ ಬಹುಸಂಸರ್ಗಾತ್ ಸಂಕೀರ್ಯಂತೇ ಹ್ಯುಪಕ್ರಮಾಃ |

         ಷಟ್ಕಂ ತು ನಾತಿವರ್ತಂತೇ ತ್ರಿತ್ವಂ ವಾತಾದಯೋ ಯಧಾ || (ಚ.123) 

ಉಪಕ್ರಮಗಳಲ್ಲಿ ಲಂಘನಾದಿ 6 ವಿಧ

ದೋಷಗಳು ಬಹು ವಿಧವಾಗಿ ಕೂಡಿಕೊಳ್ಳುವದರಿಂದ ಉಪಕ್ರಮಗಳಲ್ಲಿ ಬಹಳ ಭೇದವಿದ್ದರೂ,ದೋಷಗಳು ವಾತ-ಪಿತ್ತ-ಶ್ಲೇಷ್ಮಗಳೆಂಬ ಮೂರಕ್ಕೆ ಹ್ಯಾಗೆ ಮಿಕ್ಕಿರುವದಿಲ್ಲವೋ,ಹಾಗೆಯೇ ಉಪಕ್ರಮಗಳು ಆರಕ್ಕೆ ಮಿಕ್ಕಿರುವದಿಲ್ಲ